Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

WC Qualifiers, Super six: ನೆದರ್ಲೆಂಡ್ಸ್ vs ಸ್ಕಾಟ್ಲೆಂಡ್; ಟಾಸ್ ವರದಿ, ಆಡುವ ಬಳಗ, Live ಸ್ಕೋರ್

ವಿಶ್ವಕಪ್ ಅರ್ಹತಾ ಸುತ್ತಿನ ಸೂಪರ್ ಸಿಕ್ಸ್ ಹಂತದಲ್ಲಿ ಇಂದು ಮಹತ್ವದ ಸೆಣೆಸಾಟ ನಡೆಯುತ್ತಿದೆ. ನೆದರ್ಲೆಂಡ್ಸ್ ಹಾಗೂ ಸ್ಕಾಟ್ಲೆಂಡ್ ತಂಡಗಳು ಇಂದು ಮುಖಾಮುಖಿಯಾಗಿದ್ದು ಇದು ಎರಡು ತಂಡಗಳಿಗೂ ಅರ್ಹತಾ ಸುತ್ತಿನಲ್ಲಿ ಫೈನಲ್‌ಗೇರುವ ಕೊನೆಯ ಅವಕಾಶವಾಗಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ನೆದರ್ಲೆಂಡ್ಸ್ ತಂಡ ಮೊದಲಿಗೆ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಹೀಗಾಗಿ ಸ್ಕಾಟ್ಲೆಂಡ್ ತಂಡ ಅರಂಭದಲ್ಲಿ ಬ್ಯಾಟಿಂಗ್ ನಡೆಸುವ ಸವಾಲು ಪಡೆದುಕೊಂಡಿದೆ.

ಸೂಪರ್ ಸಿಕ್ಸ್ ಹಂತದ ಕೊನೆಯ ಪಂದ್ಯ ಇದಾಗಿದ್ದು ಈ ಪಂದ್ಯದಲ್ಲಿ ಗೆದ್ದು ಫೈನಲ್‌ಗೆ ಪ್ರವೇಶಿಸುವ ಅವಕಾಶ ಎರಡು ತಂಡಗಳಿಗೂ ಇದೆ. ಆದರೆ ಸ್ಕಾಟ್ಲೆಂಡ್ ತಂಡ ನೆದರ್ಲೆಂಡ್ಸ್‌ಗಿಂತ ಒಂದು ಹೆಚ್ಚು ಪಂದ್ಯವನ್ನು ಗೆದ್ದುಕೊಂಡಿದ್ದು ನೆಟ್‌ರನ್‌ರೃಏಟ್‌ನಲ್ಲಿಯೂ ಭಾರೀ ಮುಂದಿದೆ. ಹೀಗಾಗಿ ಸ್ಕಾಟ್ಲೆಂಡ್‌ಗೆ ಫೈನಲ್‌ಗೇರುವ ಅವಕಾಶ ಹೆಚ್ಚಿದೆ. ನೆದರ್ಲೆಂಡ್ಸ್ ತಂಡ ಈ ಪಂದ್ಯದಲ್ಲಿ ಗೆಲುವು ಸಾಧಿಸುವುದರ ಜೊತೆಗೆ ಗೆಲುವಿನ ಅಂತರವನ್ನು ಕೂಡ ಹೆಚ್ಚಿರುವಂತೆ ನೋಡಬೇಕಿದೆ. ಹಾಗಿದ್ದರೆ ಮಾತ್ರವೇ ಸ್ಕಾಟ್ಲಂಡ್ ಹಿಂದಿಕ್ಕಿ ಫೈನಲ್‌ಗೆ ಪ್ರವೇಶ ಸಾಧ್ಯ.

WC Qualifiers, Super six, Netherlands vs Scotland

Live ಸ್ಕೋರ್ ಹೀಗಿದೆ

ಇನ್ನು ಫೈನಲ್‌ಗೆ ಪ್ರವೇಶ ಪಡೆಯುವುದರ ಜೊತೆಗೆ ಆ ತಂಡ ಭಾರತದಲ್ಲಿ ನಡೆಯಲಿರುವ ವಿಶ್ವಕಪ್ ಟೂರ್ನಿಯ ಪ್ರಧಾನ ಸುತ್ತಿನಲ್ಲಿ ಆಡುವ ಅರ್ಹತೆಯನ್ನು ಸಂಪಾದಿಸಿಕೊಳ್ಳುತ್ತದೆ. ಹೀಗಾಗಿ ಈ ಪಂದ್ಯದ ಮೇಲಿನ ಕುತೂಹಲ ಹೆಚ್ಚಾಗಿದೆ. ಈಗಾಗಲೇ ಶ್ರೀಲಂಕಾ ವಿಶ್ವಕಪ್ ಪ್ರಧಾನ ಸುತ್ತಿನಲ್ಲಿ ಆಡುವ ಅರ್ಹತೆ ಸಂಪಾದಿಸಿದ್ದು ವೆಸ್ಟ್ ಇಂಡೀಸ್, ಜಿಂಬಾಬ್ವೆಯಂಥಾ ತಂಡಗಳು ಅರ್ಹತೆ ಪಡೆಯಲು ಈಗಾಗಲೇ ವಿಫಲವಾಗಿದೆ.

ನೆದರ್ಲೆಂಡ್ಸ್ ಆಡುವ ಬಳಗ: ವಿಕ್ರಮಜಿತ್ ಸಿಂಗ್, ಮ್ಯಾಕ್ಸ್ ಓಡೌಡ್, ವೆಸ್ಲಿ ಬ್ಯಾರೆಸಿ, ಸ್ಕಾಟ್ ಎಡ್ವರ್ಡ್ಸ್ (ನಾಯಕ & ವಿಕೆಟ್ ಕೀಪರ್), ಬಾಸ್ ಡಿ ಲೀಡೆ, ಸಾಕಿಬ್ ಜುಲ್ಫಿಕರ್, ಲೋಗನ್ ವ್ಯಾನ್ ಬೀಕ್, ತೇಜ ನಿಡಮನೂರು, ರಿಯಾನ್ ಕ್ಲೈನ್, ಆರ್ಯನ್ ದತ್, ಕ್ಲೇಟನ್ ಫ್ಲಾಯ್ಡ್
ಬೆಂಚ್: ಶರೀಜ್ ಅಹ್ಮದ್, ವಿವಿಯನ್ ಕಿಂಗ್ಮಾ, ಮೈಕೆಲ್ ಲೆವಿಟ್, ನೋಹ್ ಕ್ರೋಸ್

ಸ್ಕಾಟ್ಲೆಂಡ್ ಆಡುವ ಬಳಗ: ಕ್ರಿಸ್ಟೋಫರ್ ಮ್ಯಾಕ್‌ಬ್ರೈಡ್, ಮ್ಯಾಥ್ಯೂ ಕ್ರಾಸ್ (ವಿಕೆಟ್ ಕೀಪರ್), ಬ್ರಾಂಡನ್ ಮೆಕ್‌ಮುಲ್ಲೆನ್, ಜಾರ್ಜ್ ಮುನ್ಸಿ, ರಿಚಿ ಬೆರಿಂಗ್ಟನ್ (ನಾಯಕ), ತೋಮಸ್ ಮ್ಯಾಕಿಂತೋಷ್, ಮೈಕೆಲ್ ಲೀಸ್ಕ್, ಕ್ರಿಸ್ ಗ್ರೀವ್ಸ್, ಮಾರ್ಕ್ ವ್ಯಾಟ್, ಸಫ್ಯಾನ್ ಷರೀಫ್, ಕ್ರಿಸ್ ಸೋಲ್

ಬೆಂಚ್: ಅಲಾಸ್ಡೈರ್ ಇವಾನ್ಸ್, ಹಮ್ಜಾ ತಾಹಿರ್, ಆಡ್ರಿಯನ್ ನೀಲ್, ಜ್ಯಾಕ್ ಜಾರ್ವಿಸ್

Story first published: Thursday, July 6, 2023, 12:28 [IST]
Other articles published on Jul 6, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+