Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

WC Qualifiers: ವಿಶ್ವಕಪ್ ಟೂರ್ನಿಗೆ ಅರ್ಹತೆ ಪಡೆದ ಲಂಕಾ: ಜಿಂಬಾಬ್ವೆ ವಿರುದ್ಧ ಭರ್ಜರಿ ಗೆಲುವು

ವಿಶ್ವಕಪ್ ಅರ್ಹತಾ ಸುತ್ತಿನಲ್ಲಿ ಶ್ರೀಲಂಕಾ ತಂಡ ಜಿಂಬಾಬ್ವೆ ವಿರುದ್ಧ ಭರ್ಜರಿಯಾಗಿ ಗೆದ್ದು ಭಾರತದಲ್ಲಿ ನಡೆಯಲಿರುವ ಪ್ರಧಾನ ಸುತ್ತಿಗೆ ಅರ್ಹತೆ ಸಂಪಾದಿಸಿದೆ. ಜಿಂಬಾಬ್ವೆ ವಿರುದ್ಧ ನಡೆದ ಸೂಪರ್ ಸಿಕ್ಸ್ ಹಂತದ ಪಂದ್ಯದಲ್ಲಿ ಶ್ರೀಲಂಕಾ 9 ವಿಕೆಟ್‌ಗಳ ಅಂತರದಿಂದ ಗೆಲುವು ಸಾಧಿಸಿದೆ. ಮೊದಲಿಗೆ ಬೌಲಿಂಗ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿ ಜಿಂಬಾಬ್ವೆ ತಂಡವನ್ನು 165 ರನ್‌ಗಳಿಗೆ ಕಟ್ಟಿ ಹಾಕಿದ ಶ್ರೀಲಂಕಾ ತಂಡ ನಂತರ ಈ ಮೊತ್ತವನ್ನು ಕೇವಲ ಒಂದು ವಿಕೆಟ್ ಕಳೆದುಕೊಂಡು ಬೆನ್ನಟ್ಟುವಲ್ಲಿ ಯಶಸ್ವಿಯಾಗಿದೆ.

ಟಾಸ್ ಸೋತು ಮೊದಲಿಗೆ ಬ್ಯಾಟಿಂಗ್ ನಡೆಸಿದ ಜಿಂಬಾಬ್ವೆ ತಂಡ ಶ್ರೀಲಂಕಾದ ಬೌಲರ್‌ಗಳಾದ ಮದುಶಂಕ ಹಾಗೂ ಮತೀಶ ತೀಕ್ಷಣ ದಾಳಿಗೆ ನಲುಗಿತು. ಆರಂಭದಿಂದಲೇ ಹಿನ್ನಡೆ ಅನುಭವಿಸಿದ ಜಿಂಬಾಬ್ವೆ ತಂಡಕ್ಕೆ ಶಾನ್ ವಿಲಿಯಮ್ಸ್ ಮಾತ್ರವೇ ಅರ್ಧ ಶತಕ ಸಿಡಿಸಿ ಮಿಂಚಿದರು. ಉಳಿದಂತೆ ಸಿಕಂದರ್ ರಾಜಾ 31 ರನ್‌ ಬಾರಿಸಿದ್ದು ತಂಡದ ಪರ ದಾಖಲಾದ ಅತ್ಯುತ್ತಮ ಸ್ಕೋರ್ ಆಗಿದೆ. ಹೀಗಾಗಿ 32.2 ಓವರ್‌ಗಳಲ್ಲಿ ಜಿಂಬಾಬ್ವೆ ತಂಡ ತನ್ನ ಎಲ್ಲಾ ವಿಕೆಟ್ ಕಳೆದುಕೊಂಡು ಆಲೌಟ್ ಆಗಿದೆ.

WC Qualifiers, Super six: Sri Lanka won by 9 wickets against Zimbabwe and Qualified to world cup

ಈ ಮೊತ್ತವನ್ನು ಬೆನ್ನಟ್ಟಿದ ಶ್ರೀಲಂಕಾ ತಂಡ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿತು. ಮೊದಲ ವಿಕೆಟ್‌ಗೆ ಫಾತುಮ್ ಸಿಸ್ಸಂಕ ಹಾಗೂ ಮತ್ತು ಕರುಣರತ್ನೆ 103 ರನ್‌ಗಳ ಜೊತೆಯಾಟ ನೀಡುವ ಮೂಲಕ ಈ ಒತ್ತವವನ್ನು ಮತ್ತಷ್ಟು ಸುಲಭವಾಗಿಸಿದರು. 30 ರನ್‌ಗಳಿಸಿದ ಕರುಣರತ್ನೆ ವಿಕೆಟ್ ಕಳೆದುಕೊಂಡ ಬಳಿಕ ಕುಸಲ್ ಮೆಂಡಿಸ್ ಸಾಥ್ ನೀಡಿದರು. ಇನ್ನು ಫಾತುಮ್ ನಿಸ್ಸಂಕ ಕೊನೆಯವರೆಗೂ ಅಜೇಯವಾಗುಳಿದು ಭರ್ಜರಿ ಶತಕ ಸಿಡಿಸಿ ಮಿಂಚಿದ್ದಾರೆ.

ಅಂತಿಮವಾಗಿ ಶ್ರೀಲಂಕಾ ಜಿಂಬಾಬ್ವೆ ನೀಡಿದ ಸುಲಭ ಗುರಿಯನ್ನು 33.1 ಓವರ್‌ಗಳಲ್ಲಿ ಒಂದು ವಿಕೆಟ್ ಕಳೆದುಕೊಂಡು ಬೆನ್ನಟ್ಟುವಲ್ಲಿ ಯಶಸ್ವಿಯಾಗಿದೆ. ಈ ಗೆಲುವಿನೊಂದಿಗೆ ಅರ್ಹತಾ ಸಿತ್ತಿನ ಟೂರ್ನಿಯಲ್ಲಿ ಫೈನಲ್‌ಗೆ ಪ್ರವೇಶ ಪಡೆದುಕೊಂಡಿರುವ ಶ್ರೀಲಂಕಾ ಭಾರತದಲ್ಲಿ ನಡೆಯಲಿರುವ ವಿಶ್ವಕಪ್ ಟೂರ್ನಿಗೆ ಅರ್ಹತೆಯನ್ನು ಸಂಪಾದಿಸಿಕೊಂಡಿದೆ.

ಜಿಂಬಾಬ್ವೆ, ಆಡುವ ಬಳಗ: ಜಾಯ್ಲಾರ್ಡ್ ಗುಂಬಿ (ವಿಕೆಟ್ ಕೀಪರ್), ಕ್ರೇಗ್ ಎರ್ವಿನ್ (ನಾಯಕ), ಸೀನ್ ವಿಲಿಯಮ್ಸ್, ವೆಸ್ಲಿ ಮಾಧೆವೆರೆ, ಸಿಕಂದರ್ ರಜಾ, ರಯಾನ್ ಬರ್ಲ್, ಲ್ಯೂಕ್ ಜೊಂಗ್ವೆ, ವೆಲ್ಲಿಂಗ್ಟನ್ ಮಸಕಡ್ಜಾ, ಬ್ರಾಡ್ ಇವಾನ್ಸ್, ರಿಚರ್ಡ್ ನಾಗರವಾ, ಬ್ಲೆಸಿಂಗ್ ಮುಜರಬಾನಿ
ಬೆಂಚ್: ತೆಂಡೈ ಚಟಾರ, ಮುಗ್ಧ ಕೈಯಾ, ತಡಿವಾನಾಶೆ ಮರುಮಣಿ, ಕ್ಲೈವ್ ಮಾದಂಡೆ

ಶ್ರೀಲಂಕಾ ಆಡುವ ಬಳಗ: ಪಾತುಮ್ ನಿಸ್ಸಾಂಕ, ದಿಮುತ್ ಕರುಣಾರತ್ನೆ, ಕುಸಲ್ ಮೆಂಡಿಸ್ (ವಿಕೆಟ್ ಕೀಪರ್), ಸದೀರ ಸಮರವಿಕ್ರಮ, ಚರಿತ್ ಅಸಲಂಕಾ, ಧನಂಜಯ ಡಿ ಸಿಲ್ವ, ದಾಸುನ್ ಶನಕ (ನಾಯಕ), ವನಿಂದು ಹಸರಂಗ, ಮಹೇಶ ತೀಕ್ಷಣ, ದಿಲ್ಶನ್ ಮಧುಶಂಕ, ಮತೀಶ ಪತಿರಣ
ಬೆಂಚ್: ಲಹಿರು ಕುಮಾರ, ಚಾಮಿಕ ಕರುಣರತ್ನೆ, ದುಶನ್ ಹೇಮಂತ, ಕಸುನ್ ರಜಿತ

Story first published: Sunday, July 2, 2023, 20:17 [IST]
Other articles published on Jul 2, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+