WC Qualifiers, Super six: ಜಿಂಬಾಬ್ವೆ vs ಶ್ರೀಲಂಕಾ; ಟಾಸ್ ವರದಿ, ಆಡುವ ಬಳಗ
ವಿಶ್ವಕಪ್ ಅರ್ಹತಾ ಸುತ್ತಿನ ಸೂಪರ್ ಸಿಕ್ಸ್ ಹಂತದಲ್ಲಿ ಇಂದು ಮತ್ತೊಂದು ಕುತೂಹಲಕಾರಿ ಪಂದ್ಯ ನಡೆಯುತ್ತಿದೆ. ಜಿಂಬಾಬ್ವೆ ಹಾಗೂ ಶ್ರೀಲಂಕಾ ತಂಡಗಳು ಇಂದು ಮುಖಾಮುಖಿಯಾಗಿದ್ದು ಟಾಸ್ ಗೆದ್ದ ಶ್ರೀಲಂಕಾ ತಂಡ ಮೊದಲಿಗೆ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಹೀಗಾಗಿ ಜಿಂಬಾಬ್ವೆ ತಂಡ ಅರಂಭದಲ್ಲಿ ಬ್ಯಾಟಿಂಗ್ ನಡೆಸುವ ಸವಾಲು ಪಡೆದುಕೊಂಡಿದೆ.
ಆತಿಥೆಯ ತಂಡವಾಗಿರುವ ಜಿಂಬಾಬ್ವೆ ಈ ಟೂರ್ನಿಯಲ್ಲಿ ಅದ್ಭುತವಾದ ಪ್ರದರ್ಶನ ನೀಡುತ್ತಿದ್ದು ಈವರೆಗೆ ಅಜೇಯವಾಗುಳಿದಿದೆ. ಈ ಮೂಲಕ ಭಾರತದಲ್ಲಿ ನಡೆಯಲಿರುವ ವಿಶ್ವಕಪ್ ಟೂರ್ನಿಯ ಪ್ರಧಾನ ಸುತ್ತಿಗೇರುವ ಅರ್ಹತೆಗೆ ಸನಿಹದಲ್ಲಿದೆ. ಮತ್ತೊಂದೆಡೆ ಶ್ರೀಲಂಕಾ ತಂಡ ಕೂಡ ಉತ್ತಮ ಪ್ರದರ್ಶನ ನೀಡುತ್ತಿದ್ದು ಈ ಪಂದ್ಯದಲ್ಲಿ ಯಾವ ರೀತಿಯ ಪೈಪೋಟಿಯನ್ನು ಎದುರಿಸಲಿದೆ ಎಂಬುದು ಕುತೂಹಲ ಮೂಡಿಸಿದೆ.

ಇನ್ನು ಈ ಪಂದ್ಯದಲ್ಲಿ ಎರಡು ತಂಡಗಳು ಕೂಡ ತಲಾ ಒಂದು ಬದಲಾವಣೆಯೊಂದಿಗೆ ಕಣಕ್ಕಿಳಿದಿದೆ. ಶ್ರೀಲಂಕಾ ತಂಡದಲ್ಲಿ ಲಹಿರು ಕುಮಾರ ಬದಲಿಗೆ ಮಥೀಶ ಪಥಿರಣ ಅವಕಾಶ ಪಡೆದುಕೊಂಡಿದ್ದರೆ ಜಿಂಬಾಬ್ವೆ ತಂಡದಲ್ಲಿ ಚತರ ಬದಲಿಗೆ ಪತಿರಣಗೆ ಅವಕಾಶ ದೊರೆತಿದೆ.
Live ಸ್ಕೋರ್ ಹೀಗಿದೆ
ಜಿಂಬಾಬ್ವೆ, ಆಡುವ ಬಳಗ: ಜಾಯ್ಲಾರ್ಡ್ ಗುಂಬಿ (ವಿಕೆಟ್ ಕೀಪರ್), ಕ್ರೇಗ್ ಎರ್ವಿನ್ (ನಾಯಕ), ಸೀನ್ ವಿಲಿಯಮ್ಸ್, ವೆಸ್ಲಿ ಮಾಧೆವೆರೆ, ಸಿಕಂದರ್ ರಜಾ, ರಯಾನ್ ಬರ್ಲ್, ಲ್ಯೂಕ್ ಜೊಂಗ್ವೆ, ವೆಲ್ಲಿಂಗ್ಟನ್ ಮಸಕಡ್ಜಾ, ಬ್ರಾಡ್ ಇವಾನ್ಸ್, ರಿಚರ್ಡ್ ನಾಗರವಾ, ಬ್ಲೆಸಿಂಗ್ ಮುಜರಬಾನಿ
ಬೆಂಚ್: ತೆಂಡೈ ಚಟಾರ, ಮುಗ್ಧ ಕೈಯಾ, ತಡಿವಾನಾಶೆ ಮರುಮಣಿ, ಕ್ಲೈವ್ ಮಾದಂಡೆ
ಶ್ರೀಲಂಕಾ ಆಡುವ ಬಳಗ: ಪಾತುಮ್ ನಿಸ್ಸಾಂಕ, ದಿಮುತ್ ಕರುಣಾರತ್ನೆ, ಕುಸಲ್ ಮೆಂಡಿಸ್ (ವಿಕೆಟ್ ಕೀಪರ್), ಸದೀರ ಸಮರವಿಕ್ರಮ, ಚರಿತ್ ಅಸಲಂಕಾ, ಧನಂಜಯ ಡಿ ಸಿಲ್ವ, ದಾಸುನ್ ಶನಕ (ನಾಯಕ), ವನಿಂದು ಹಸರಂಗ, ಮಹೇಶ ತೀಕ್ಷಣ, ದಿಲ್ಶನ್ ಮಧುಶಂಕ, ಮತೀಶ ಪತಿರಣ
ಬೆಂಚ್: ಲಹಿರು ಕುಮಾರ, ಚಾಮಿಕ ಕರುಣರತ್ನೆ, ದುಶನ್ ಹೇಮಂತ, ಕಸುನ್ ರಜಿತ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications