For Quick Alerts
ALLOW NOTIFICATIONS  
For Daily Alerts
 

WC qualifiers: ನೆದರ್ಲೆಂಡ್ಸ್ ವಿರುದ್ಧ ಆಶ್ಚರ್ಯಕರ ರೀತಿಯಲ್ಲಿ ಸೋಲಿನಿಂದ ಪಾರಾದ ಶ್ರೀಲಂಕಾ!

ವಿಶ್ವಕಪ್ ಅರ್ಹತಾ ಸುತ್ತಿನ ಲೀಗ್‌ನಲ್ಲಿ ಸೂರ್ ಸಿಕ್ಸರ್ ಹಂತದ ಪಂದ್ಯಗಳು ನಡೆಯುತ್ತಿದೆ. ಇಂದು ಶ್ರೀಲಂಕಾ ಹಾಗೂ ನೆದರ್ಲೆಂಡ್ಸ್ ತಂಡಗಳು ಮುಖಾಮುಖಿಯಾಗಿದ್ದು ಈ ಪಂದ್ಯದಲ್ಲಿ ಶ್ರೀಲಂಕಾ ತಂಡ ಅಲ್ಪ ಮೊತ್ತ ಪೇರಿಸಿದ ಹೊರತಾಗಿಯೂ ರೋಚಕ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದೆ, ನೆದರ್ಲೆಂಡ್ಸ್ ತಂಡ ಒಂದು ಹಂತದಲ್ಲಿ ಗೆಲುವಿನ ವಿಶ್ವಾಸ ಮೂಡಿಸಿದ್ದರೂ ಅಂತಿಮವಾಗಿ ಶ್ರೀಲಂಕಾ ಗೆಲುವಿನ ನಿಟ್ಟುಸುರಿ ಬಿಡುವಲ್ಲಿ ಯಶಸ್ವಿಯಾಗಿದೆ.

ಈ ಪಂದ್ಯದಲ್ಲೊ ಮೊದಲಿಗೆ ಬ್ಯಾಟಿಂಗ್ ಮಾಡಿದ ಶ್ರೀಲಂಕಾ ತಂಡದ ಪರವಾಗಿ ಮಧ್ಯಮ ಕ್ರಮಾಂಖದ ಆಟಗಾರ ಧನಂಜಯ ಡಿಸಿಕ್ವ ಮಾತ್ರವೇ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು. ಡಿಸಿಲ್ವ ಏಕಾಂಗಿ ಹೋರಾಟವನ್ನು ನೀಡಿದ್ದು 93 ರನ್‌ಗಳ ಕೊಡುಗೆ ನೀಡಿದರು. ಉಳಿದಂತೆ ಯಾವ ಬ್ಯಾಟರ್ ಕೂಡ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಲು ವಿಫಲವಾಗಿದ್ದರು. ಇದರ ಪರಿಣಾಮವಾಗಿ ಶ್ರೀಲಂಕಾ 47.4 ಓವರ್‌ಗಳಲ್ಲಿ ಎಲ್ಲಾ ವಿಕೆಟ್ ಕಳೆದುಕೊಂಡು 210 ರನ್‌ಗಳನ್ನು ಮಾತ್ರವೇ ಗಳಿಸಲು ಶಕ್ತವಾಯಿತು.

Sri lanka on by 21 runs against Netherlands

ಶ್ರೀಲಂಕಾ ತಂಡ ನಿಡಿದ ಈ ಗುರಿಯನ್ನು ಬೆನ್ನಟ್ಟಲು ಆರಂಭಿಸಿದ ನೆದರ್ಲೆಂಡ್ಸ್ ತಂಡ ಆರಂಭದಲಲ್ಇಯೇ ಆಘಾತ ಅನುಭವಿಸಿತು. 11 ರನ್‌ಗಳಿಸುವಷ್ಟರಲ್ಲಿ ಆರಂಭಿಕರಿಬ್ಬರ ವಿಕೆಟನ್ನು ಕೂಡ ಕಳೆದುಕೊಂಡಿತು ನೆದರ್ಲೆಂಡ್ಸ್. ನಂತರ ವೆಸ್ಲಿ ಬರೆಸಿ ಬಸ್ ಡೆ ಲೀಡ್ ಉತ್ತಮ ಜೊತೆಯಾಟ ನೀಡಿ ಚೇತರಿಕೆ ನೀಡಿದರು. ಈ ಸಂದರ್ಭದಲ್ಲಿ ಬರೆಸಿ 52 ರನ್‌ಗಳಿಸಿ ರನೌಟ್ ಆಗುವ ಮೂಲಕ ವಿಕೆಟ್ ಕಳೆದುಕೊಂಡರು. ಅದರ ಬೆನ್ನಿಗೆ ತೇಜ ನಿಡಮನೂರು ಶೂನ್ಯಕ್ಕೆ ಔಟಾಗುವ ಮೂಲಕ ತಂಡಕ್ಕೆ ಮತ್ತೊಂದು ಆಘಾತ ನೀಡಿದರು.

ನಂತರ ನಾಯಕ ಸ್ಕ್ವಾಡ್ ಎಡ್ವರ್ಡ್ಸ್ ಜವಾಬ್ಧಾರಿಯುತ ಇನ್ನಿಂಗ್ಸ್ ಕಟ್ಟಲು ಆರಂಭಿಸಿದರು. ಈ ಸಂದರ್ಭದಲ್ಲಿ ಲೀಡ್ 41 ರನ್‌ಗಳಿಗೆ ಔಟಾಗುವ ಮೂಲಕ ಮತ್ತೊಂದು ಆಘಾತಕ್ಕೆ ಕಾರಣವಾದರು. ನಂತರ ನಾಯಕ ಎಡ್ವರ್ಡ್ಸ್‌ಗೆ ನಿರೀಕ್ಷಿತ ಬೆಂಬಲ ದೊರೆಯದ ಕಾರಣ ಏಕಾಂಗಿ ಹೋರಾ ವ್ಯರ್ಥವಾಗಿದೆ. ಎಡ್ವರ್ಡ್ಸ್ 67 ರನ್‌ಗಳಿಸಿ ಅಜೇಯವಾಗುಳಿದರು. 192 ರನ್‌ಗಳಿಸಿದ ನೆದರ್ಲೆಂಡ್ಸ್ ತನ್ನೆಲ್ಲಾ ವಿಕೆಟ್ ಕಳೆದುಕೊಳ್ಳು ಮೂಲಕ 21 ರನ್‌ಗಳ ಅಂತರದಿಂದ ಸೋಲು ಅನುಭವಿಸಿದೆ.

ವಿಕ್ರಮಜಿತ್ ಸಿಂಗ್, ಮ್ಯಾಕ್ಸ್ ಓಡೌಡ್, ವೆಸ್ಲಿ ಬ್ಯಾರೆಸಿ, ಬಾಸ್ ಡಿ ಲೀಡೆ, ತೇಜ ನಿಡಮನೂರು, ಸ್ಕಾಟ್ ಎಡ್ವರ್ಡ್ಸ್ (ಸಿ & ವಾರ), ಸಾಕಿಬ್ ಜುಲ್ಫಿಕರ್, ಲೋಗನ್ ವ್ಯಾನ್ ಬೀಕ್, ಶರೀಜ್ ಅಹ್ಮದ್,
ರಯಾನ್ ಕ್ಲೈನ್, ಆರ್ಯನ್ ದತ್
ಬೆಂಚ್: ಮೈಕೆಲ್ ಲೆವಿಟ್, ನೋಹ್ ಕ್ರೋಸ್, ಕ್ಲೇಟನ್ ಫ್ಲಾಯ್ಡ್, ವಿವಿಯನ್ ಕಿಂಗ್ಮಾ

ಪಾತುಮ್ ನಿಸ್ಸಾಂಕ, ದಿಮುತ್ ಕರುಣಾರತ್ನೆ, ಕುಸಲ್ ಮೆಂಡಿಸ್ (ವಾಕ್), ಸದೀರ ಸಮರವಿಕ್ರಮ, ಚರಿತ್ ಅಸಲಂಕ, ಧನಂಜಯ ಡಿ ಸಿಲ್ವ, ದಸುನ್ ಶನಕ (ಸಿ), ವನಿಂದು ಹಸರಂಗ,
ಮಹೇಶ್ ತೀಕ್ಷಣ, ಲಹಿರು ಕುಮಾರ, ದಿಲ್ಶನ್ ಮಧುಶಂಕ
ಬೆಂಚ್: ಚಾಮಿಕಾ ಕರುಣಾರತ್ನ, ಮತೀಶ ಪತಿರಣ, ದುಶನ್ ಹೇಮಂತ, ಕಸುನ್ ರಜಿತ

Story first published: Friday, June 30, 2023, 21:43 [IST]
Other articles published on Jun 30, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+