For Quick Alerts
ALLOW NOTIFICATIONS  
For Daily Alerts
 

WC qualifiers, Super Sixes: ಅಮೋಘ ಹೋರಾಟ ನೀಡಿ ಜಿಂಬಾಬ್ವೆ ವಿರುದ್ಧ ಸೋತ ಒಮಾನ್

ವಿಶ್ವಕಪ್ ಟೂರ್ನಿಯ ಕ್ವಾಲಿಫಯರ್‌ನಲ್ಲಿ ಸೂಪರ್ ಸಿಕ್ಸ್ ಹಂತದ ಪಂದ್ಯಗಳು ಆರಂಭವಾಗಿದ್ದು ಮೊದಲ ಪಂದ್ಯದಲ್ಲಿ ಜಿಂಬಾಬ್ವೆ ಹಾಗೂ ಒಮಾನ್ ತಂಡಗಳು ಮುಖಾಮುಖಿಯಾಗಿದೆ. ಬಹಳ ರೋಚಲವಾಗಿ ಸಾಗಿದ ಈ ಪಂದ್ಯದಲ್ಲಿ ಜಿಂಬಾಬ್ವೆ ತಂಡ ಬೃಹತ್ ರನ್ ಪೇರಿಸಿದ ಹೊರತಾಗಿಯೂ 14 ರನ್‌ಗಳ ಅಂತರದಿಂದ ಗೆಲುವು ಸಾಧಿಸಿದೆ.

ಈ ಪಂದ್ಯದಲ್ಲಿ ಮೊದಲಿಗೆ ಬ್ಯಾಟಿಂಗ್ ಮಾಡಿದ ಜಿಂಬಾಬ್ವೆ ತಂಡದ ಪರವಾಗಿ ನಾಯಕ ಶಾನ್ ವಿಲಿಯಮ್ಸನ್ ಭರ್ಜರಿ ಶತಕ ಸಿಡಿಸಿ ಅಬ್ಬರಿಸಿದರು. ಹೀಗಾಗಿ ನಿಗದಿಯ 50 ಓವರ್‌ಗಳಲ್ಲಿ ಜಿಂಬಾಬ್ವೆ ತಂಡ 332 ರನ್‌ಗಳನ್ನು ಕಲೆಹಾಕಿತ್ತು. ಈ ಮೊತ್ತವನ್ನು ಬೆನ್ನಟ್ಟಿದ ಒಮಾನ್ ತಂಡ ಕೂಡ 318 ರನ್‌ಗಳನ್ನು ಗಳಿಸಿ ಸೋಲೊಪ್ಪಿಕೊಂಡಿದೆ.

WC qualifiers, Super Sixes: Zimbabwe on against Oman by 14 runs

ಟಾಸ್ ಸೋತ ಜಿಂಬಾಬ್ವೆ ಆರಂಭದಲ್ಲಿ ಬ್ಯಾಟಿಂಗ್ ನಡೆಸುವ ಸವಾಲು ಸ್ವೀಕರಿಸಿದ್ದು ಉತ್ತಮ ಆರಂಭವನ್ನು ಪಡೆಯಿತು. ಮೊದಲ ವಿಕೆಟ್‌ಗೆ 46 ರನ್‌ಗಳ ಜೊತೆಯಾಟ ಪಡೆದ ಬಳಿಕ ಎರಡು ರನ್‌ಗಳ ಅಂತರದಲ್ಲಿ ಜಿಂಬಾಬ್ವೆಯ ಇಬ್ಬರು ಆರಂಭಿಕರು ಕೂಡ ವಿಕೆಟ್ ಕಳೆದುಕೊಂಡರು. ನಂತರ ನಾಯಕ ಶಾನ್ ವಿಲಿಯಮ್ಸ್ ಹಾಗೂ ಮಧೆವೆರೆ ಅರ್ಧ ಶತಕದ ಜೊತೆಯಾಟ ನೀಡಿ ಬೇರ್ಪಟ್ಟರು.

ನಂತರ ನಾಯಕ ವಿಲಿಯಮ್ಸ್‌ಗೆ ಜೊತೆಯಾಗಿದ್ದು ಸಿಕಂದರ್ ರಾಜಾ. ಈ ಜೋಡಿ ಅಮೋಗ ಪ್ರದರ್ಶನ ನಿಡಿದ್ದು ಶತಕದ ಜೊತೆಯಾಟ ನೀಡಿತು. 102 ರನ್‌ಗಳ ಜೊತೆಯಾಟದ ಬಳಿಕ 42 ರನ್‌ಗಳಿಸಿದ ರಾಜಾ ವಿಕೆಟ್ ಕಳೆದುಕೊಂಡರು. ಇನ್ನು ಈ ಸಂದರ್ಭದಲ್ಲಿ ನಾಯಕ ಶಾನ್ ವಿಲಿಯಮ್ಸ್ ಟೂರ್ನಿಯಲ್ಲಿ ಮತ್ತೊಂದು ಶತಕ ಸಿಡಿಸಿದ್ದಾರೆ. ಇದು ಈ ಟೂರ್ನಿಯಲ್ಲಿ ಅವರ ಮೂರನೇ ಶತಕವಾಗಿದ್ದು ಈ ಪಂದ್ಯದಲ್ಲಿಯೂ ಅಮೋಘ ಫಾರ್ಮ್ ಮುಂದುವರಿಸಿ ಅಬ್ಬರಿಸಿದ್ದಾರೆ.

ಈ ಪಂದ್ಯದಲ್ಲಿ 103 ಎಸೆತಗಳನ್ನು ಎದುರಿಸಿದ ವಿಲಿಯಮ್ಸ್ ಭರ್ಜರಿ 142 ರನ್‌ಗಳನ್ನು ಗಳಿಸಿ ಔಟಾಗಿದ್ದಾರೆ. ನಂತರ ಜಾಂಗ್ವೆ ಭರ್ಜರಿ ಪ್ರದರ್ಶನ ನೀಡಿದ್ದು 28 ಎಸೆತಗಳಲ್ಲಿ 43 ರನ್ ಬಾರಿಸಿ ಅಬ್ಬರಿಸಿದು. ಹೀಗಾಗಿ ಈ ಪಂದ್ಯದಲ್ಲಿ ಜಿಂಬಾಬ್ವೆ ತಂಡ ನಿಗದಿತ 50 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 332 ರನ್‌ಗಳನ್ನು ಗಳಿಸಿದೆ.

ಇನ್ನು ಈ ಬೃಹತ್ ಮೊತ್ತವನ್ನು ಬೆನ್ನಟ್ಟಿದ ಒಮಾನ್ ತಂಡ ಆರಂಭಿಕ ವಿಕೆಟನ್ನು ಶೀಗ್ರದಲ್ಲಿಯೇ ಕಳೆದುಕೊಂಡಿತಾದರೂ ತನ್ನ ಹೋರಾಟವನ್ನು ಕೈಬಿಡಲಿಲ್ಲ. ಆರಂಭಿಕ ಆಟಗಾರ ಕಶ್ಯಪ ಪ್ರಜಾಪತಿ ಭರ್ಜರಿ ಶತಕ ಸಿಡಿಸಿ ಮಿಂಚಿದರೆ ಅವರಿಗೆ ಅಕಿಬ್ ಇಲಿಯಾಸ್, ನಾಯಕ ಮಕ್ಸೂದ್ ಉತ್ತಮ ಸಾಥ್ ನೀಡಿದರು. ಇನ್ನು ನಂತರವೂ ಅಯಾನ್ ಖಾನ್ ಮೊಹಮ್ಮದ್ ನದೀಮ್ ಹೋರಾಟದ ಪ್ರದರ್ಶನವನ್ನು ನೀಡಿದರು.

ಹೀಗಾಗಿ ಜಿಂಬಾಬ್ವೆ ನೀಡಿದ ಬೃಜತ್ ಮೊತ್ತದ ಸನಿಹಕ್ಕೆ ತಲುಪಿತ್ತು ಒಮಾನ್. 318 ರನ್‌ಗಳನ್ನು ಗಳಿಸಿದ ಒಮಾನ್ ತಂಡ 14 ರನ್‌ಗಳ ಅಲ್ಪ ಅಂತರದಿಂದ ಸೋಲು ಕಂಡಿದೆ. ಈ ಮೂಲಕ ಜಿಂಬಾಬ್ವೆ ತಂಡ ಸೂಪರ್ ಸಿಕ್ಸರ್ ಹಂತದಲ್ಲಿ ಮೊದಲ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದೆ.

ಜಿಂಬಾಬ್ವೆ ಆಡುವ ಬಳಗ: ಜಾಯ್ಲಾರ್ಡ್ ಗುಂಬಿ (ವಿಕೆಟ್ ಕೀಪರ್), ಕ್ರೇಗ್ ಎರ್ವಿನ್ (ನಾಯಕ), ವೆಸ್ಲಿ ಮಾಧೆವೆರೆ, ಶಾನ್ ವಿಲಿಯಮ್ಸ್, ಸಿಕಂದರ್ ರಜಾ, ರಿಯಾನ್ ಬರ್ಲ್, ವೆಲ್ಲಿಂಗ್ಟನ್ ಮಸಕಡ್ಜಾ, ಲ್ಯೂಕ್ ಜೊಂಗ್ವೆ, ರಿಚರ್ಡ್ ನಾಗರವಾ, ಟೆಂಡೈ ಚಟಾರಾ, ಆಶೀರ್ವಾದ ಮುಜರಬಾನಿ
ಬೆಂಚ್: ಮುಗ್ಧ ಕೈಯಾ, ತಡಿವಾನಾಶೆ ಮರುಮಣಿ, ಬ್ರಾಡ್ ಇವಾನ್ಸ್, ಕ್ಲೈವ್ ಮದಂಡೆ

ಒಮಾನ್ ಆಡುವ ಬಳಗ: ಕಶ್ಯಪ್ ಪ್ರಜಾಪತಿ, ಜತೀಂದರ್ ಸಿಂಗ್, ಅಕಿಬ್ ಇಲ್ಯಾಸ್, ಜೀಶನ್ ಮಕ್ಸೂದ್ (ನಾಯಕ), ಮೊಹಮ್ಮದ್ ನದೀಮ್, ಶೋಯೆಬ್ ಖಾನ್, ಅಯಾನ್ ಖಾನ್, ನಸೀಮ್ ಖುಷಿ (ವಿಕೆಟ್ ಕೀಪರ್), ಫಯಾಜ್ ಬಟ್, ಕಲೀಮುಲ್ಲಾ, ಬಿಲಾಲ್ ಖಾನ್
ಬೆಂಚ್: ಜಯ್ ಒದೆಡ್ರಾ, ಅದೀಲ್ ಶಫೀಕ್, ಸೂರಜ್ ಕುಮಾರ್, ಸಂದೀಪ್ ಗೌಡ್, ರಫೀವುಲ್ಲಾ, ಸಮಯ್ ಶ್ರೀವಾಸ್ತವ

Story first published: Thursday, June 29, 2023, 21:31 [IST]
Other articles published on Jun 29, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+