For Quick Alerts
ALLOW NOTIFICATIONS  
For Daily Alerts
 

'ಶಕೀಬ್, ರಹ್ಮಾನ್‌ಗೆ ಮತ್ತೆ ಐಪಿಎಲ್ ಆಡಲು ನಿರಾಕ್ಷೇಪಣಾ ಪತ್ರ ನೀಡೋಲ್ಲ'

We are not giving NOC to Shakib Al Hasan and Mustafizur Rahman to play remainder of IPL, says BCB

ಧಾಕಾ: ಬಾಂಗ್ಲಾದೇಶದ ಸ್ಟಾರ್ ಆಟಗಾರರಾದ ಶಕೀಬ್ ಅಲ್ ಹಸನ್ ಮತ್ತು ಮುಸ್ತಫಿಝುರ್ ರಹ್ಮಾನ್‌ಗೆ ನಾವು ಮತ್ತೆ ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್) 2021ರ ಪಂದ್ಯಗಳನ್ನು ಆಡಲು ನಿರಾಕ್ಷೇಪಣಾ ಪತ್ರ (No Objection Certificate) ನೀಡುವುದಿಲ್ಲ ಎಂದು ಬಾಂಗ್ಲಾದೇಶ ಕ್ರಿಕೆಟ್ ಬೋರ್ಡ್ (ಬಿಸಿಬಿ) ಹೇಳಿದೆ.

ಸೋಮವಾರ (ಮೇ 31) ಬಾಂಗ್ಲಾದೇಶ ಕ್ರಿಕೆಟ್ ಬೋರ್ಡ್‌ನ ಅಧ್ಯಕ್ಷ ನಝ್ಮುಲ್ ಹಸನ್ ಈ ವಿಚಾರ ತಿಳಿಸಿದ್ದಾರೆ. ಐಪಿಎಲ್‌ನಲ್ಲಿ ಆಲ್ ರೌಂಡರ್ ಶಕೀಬ್ ಅಲ್ ಹಸನ್ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದಲ್ಲಿದ್ದರೆ, ವೇಗಿ ಮುಸ್ತಫಿಝುರ್ ರಹ್ಮಾನ್ ರಾಜಸ್ಥಾನ್ ರಾಯಲ್ಸ್ ತಂಡದಲ್ಲಿ ಆಡುತ್ತಿದ್ದಾರೆ.

ಐಪಿಎಲ್ 2021ರ ಬಯೋ ಬಬಲ್ ಒಳಗೆ ಕೋವಿಡ್-19 ಸೋಂಕಿನ ಪ್ರಕರಣಗಳು ಕಾಣಿಸಿಕೊಂಡಿತ್ತು. ಕೋಲ್ಕತ್ತಾ ನೈಟ್ ರೈಡರ್ಸ್ ನ ವರುಣ್ ಚಕ್ರವರ್ತಿ, ಸಂದೀಪ್ ವಾರಿಯರ್, ಸನ್ ರೈಸರ್ಸ್ ಹೈದರಾಬಾದ್‌ನ ವೃದ್ಧಿಮಾನ್ ಸಾಹ, ಡೆಲ್ಲಿ ಕ್ಯಾಪಿಟಲ್ಸ್‌ನ ಅಮಿತ್ ಮಿಶ್ರಾ, ಚೆನ್ನೈ ಸೂಪರ್ ಕಿಂಗ್ಸ್‌ನ ಬೌಲಿಂಗ್ ಕೋಚ್ ಲಕ್ಷ್ಮೀಪತಿ ಬಾಲಾಜಿಗೆ ಕೊರೊನಾ ಸೋಂಕು ತಗುಲಿತ್ತು. ಹೀಗಾಗಿ ಮೇ 4ರಂದು ಐಪಿಎಲ್ ಅನ್ನು ಅಮಾನತುಗೊಳಿಸಲಾಗಿತ್ತು. ಆ ಬಳಿಕ ವಿದೇಶಿ ಆಟಗಾರರು ತವರಿಗೆ ವಾಪಸ್ಸಾಗಲು ಪರದಾಡುವಂತಾಗಿತ್ತು.

ಮುಂದೂಡಲ್ಪಟ್ಟ ಐಪಿಎಲ್ ಮುಂಬರಲಿರುವ ಸೆಪ್ಟೆಂಬರ್‌ನಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ನಡೆಯಲಿದೆ. ಆದರೂ ಬಾಂಗ್ಲಾ ತನ್ನ ಆಟಗಾರರನ್ನು ಕಳುಹಿಸಲು ಹಿಂದೇಟು ಹಾಕುತ್ತಿದೆ. 'ನಮ್ಮ ಅಂತಾರಾಷ್ಟ್ರೀಯ ಕಮಿಟ್‌ಮೆಂಟ್‌ಗಳನ್ನು ಪರಿಗಣಿಸಿ ನಮ್ಮ ಆಟಗಾರರಿಗೆ ಐಪಿಎಲ್ ಆಡಲು ನಿರಾಕ್ಷೇಪಣಾ ಪತ್ರ ನೀಡಲು ಸಾಧ್ಯವಿಲ್ಲ,' ಎಂದು ನಝ್ಮುಲ್ ಹಸನ್ ತಿಳಿಸಿದ್ದಾರೆ.

Story first published: Tuesday, June 1, 2021, 9:47 [IST]
Other articles published on Jun 1, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+