ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ vs ನ್ಯೂಜಿಲೆಂಡ್‌: ಚೊಚ್ಚಲ ಸುದ್ದಿಗೋಷ್ಠಿಯಲ್ಲಿಯೇ ರೋಹಿತ್ ಮತ್ತು ದ್ರಾವಿಡ್ ಅಸಮಾಧಾನ!

We are not machines, we need rest says Rohit Sharma ahead of T20 series against New Zealand

ಇತ್ತೀಚೆಗಷ್ಟೇ ಈ ಬಾರಿಯ ಪ್ರತಿಷ್ಠಿತ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿ ಮುಕ್ತಾಯಗೊಂಡಿದ್ದು, ಇದಾದ 3 ದಿನಗಳ ಅಂತರದ ನಂತರ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳ ನಡುವಿನ ಟಿ ಟ್ವೆಂಟಿ ಸರಣಿ ಆರಂಭವಾಗುತ್ತಿದೆ. ಹೌದು, ನವೆಂಬರ್‌ 14ರ ಭಾನುವಾರದಂದು ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ ತಂಡಗಳ ನಡುವೆ ಈ ಬಾರಿಯ ಟ್ವೆಂಟಿ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯ ನಡೆಯಿತು. ಈ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಆಸ್ಟ್ರೇಲಿಯಾ ಭರ್ಜರಿ ಜಯ ಸಾಧಿಸುವುದರ ಮೂಲಕ ತನ್ನ ಚೊಚ್ಚಲ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯನ್ನು ಮುಡಿಗೇರಿಸಿಕೊಂಡಿತು.

ಭಾರತ vs ನ್ಯೂಜಿಲೆಂಡ್‌ ಟಿ20: 2-1 ಅಂತರದಲ್ಲಿ ಸರಣಿ ಗೆಲ್ಲಲಿರುವ ತಂಡವನ್ನು ಊಹಿಸಿದ ಹರ್ಭಜನ್ ಸಿಂಗ್ಭಾರತ vs ನ್ಯೂಜಿಲೆಂಡ್‌ ಟಿ20: 2-1 ಅಂತರದಲ್ಲಿ ಸರಣಿ ಗೆಲ್ಲಲಿರುವ ತಂಡವನ್ನು ಊಹಿಸಿದ ಹರ್ಭಜನ್ ಸಿಂಗ್

ಈ ಪಂದ್ಯದ ಮೂಲಕ ಈ ಬಾರಿಯ ಪ್ರತಿಷ್ಠಿತ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಗೆ ತೆರೆ ಬಿದ್ದಿದ್ದು, ಇದಾದ ಬೆನ್ನಲ್ಲೇ ನವೆಂಬರ್‌ 17ರಿಂದ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳ ನಡುವಿನ 3 ಪಂದ್ಯಗಳ ಟಿ ಟ್ವೆಂಟಿ ಸರಣಿ ಮತ್ತು 2 ಪಂದ್ಯಗಳ ಟೆಸ್ಟ್ ಸರಣಿ ಆರಂಭವಾಗುತ್ತಿದೆ. ಈ ಮೂಲಕ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಗೂ ಮತ್ತು ಭಾರತ ಹಾಗೂ ನ್ಯೂಜಿಲೆಂಡ್ ನಡುವೆ ಆರಂಭವಾಗುತ್ತಿರುವ ಸರಣಿಗೂ ಕೇವಲ 3 ದಿನಗಳ ಅಂತರವಷ್ಟೇ ಇರುವುದು ಸದ್ಯ ಸಾಕಷ್ಟು ಚರ್ಚೆಗೆ ಕಾರಣವಾದ ವಿಷಯವಾಗಿದೆ.

ಕೇನ್ ವಿಲಿಯಮ್ಸನ್ ಬಳಿಕ ಕಿವೀಸ್ ಪಡೆಯ ಮತ್ತೋರ್ವ ಆಟಗಾರ ಟಿ20 ಸರಣಿಯಿಂದ ಹೊರಕ್ಕೆಕೇನ್ ವಿಲಿಯಮ್ಸನ್ ಬಳಿಕ ಕಿವೀಸ್ ಪಡೆಯ ಮತ್ತೋರ್ವ ಆಟಗಾರ ಟಿ20 ಸರಣಿಯಿಂದ ಹೊರಕ್ಕೆ

ಇನ್ನು ಈ ಬಾರಿಯ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ಟೀಮ್ ಇಂಡಿಯಾ ಸೆಮಿಫೈನಲ್ ಹಂತವನ್ನು ಪ್ರವೇಶಿಸುವುದರಲ್ಲಿಯೂ ವಿಫಲವಾಗಿ ಲೀಗ್ ಹಂತದಲ್ಲಿಯೇ ಟೂರ್ನಿಯಿಂದ ಹೊರಬಿದ್ದಿತ್ತು. ಹೀಗಾಗಿ ಟೀಮ್ ಇಂಡಿಯಾಗೆ ಈ ಸರಣಿಯಲ್ಲಿ ಪಾಲ್ಗೊಳ್ಳಲು ನ್ಯೂಜಿಲೆಂಡ್ ತಂಡಕ್ಕಿಂತ ತುಸು ಹೆಚ್ಚಿನ ದಿನಗಳ ಅಂತರ ಲಭಿಸಿದೆ. ಆದರೆ ಫೈನಲ್ ಹಂತದವರೆಗೂ ಟೂರ್ನಿಯಲ್ಲಿ ಭಾಗವಹಿಸಿದ ನ್ಯೂಜಿಲೆಂಡ್ ತಂಡಕ್ಕೆ ಭಾರತ ವಿರುದ್ಧದ ಈ ಸರಣಿಗೆ ತಯಾರಾಗಲು ಹೆಚ್ಚು ದಿನಗಳ ಕಾಲಾವಕಾಶ ಮಾತ್ರ ಸಿಕ್ಕಿಲ್ಲ. ಇನ್ನು ಭಾರತ ಮತ್ತು ನ್ಯೂಜಿಲೆಂಡ್ ತಂಡಗಳ ನಡುವೆ ನಡೆಯಲಿರುವ ಈ ಟಿ ಟ್ವೆಂಟಿ ಸರಣಿಯ ಮೂಲಕ ರೋಹಿತ್ ಶರ್ಮಾ ಅಧಿಕೃತವಾಗಿ ಭಾರತ ಟಿ ಟ್ವೆಂಟಿ ತಂಡದ ನಾಯಕತ್ವವನ್ನು ವಹಿಸಿಕೊಳ್ಳಲಿದ್ದು, ಚೊಚ್ಚಲ ಟಿ ಟ್ವೆಂಟಿ ಪಂದ್ಯ ಆರಂಭಕ್ಕೂ ಮುನ್ನಾ ದಿನ ನಡೆದ ಸುದ್ದಿಗೋಷ್ಠಿಯೊಂದರಲ್ಲಿ ಭಾಗವಹಿಸಿದ್ದಾಗ ತಂಡದ ಆಟಗಾರರ ಸಮಸ್ಯೆಯ ಕುರಿತು ಈ ಕೆಳಕಂಡಂತೆ ಮಾತನಾಡಿದ್ದಾರೆ..

"ನಾವೇನು ಯಂತ್ರಗಳಲ್ಲ ನಮಗೆ ವಿಶ್ರಾಂತಿ ಬೇಕು"

ಭಾರತ ಮತ್ತು ನ್ಯೂಜಿಲೆಂಡ್ ತಂಡಗಳ ನಡುವೆ ನಡೆಯಲಿರುವ 3 ಪಂದ್ಯಗಳ ಟಿ ಟ್ವೆಂಟಿ ಸರಣಿ ಪೈಕಿಯ ಮೊದಲನೇ ಟಿ ಟ್ವೆಂಟಿ ಪಂದ್ಯ ನವೆಂಬರ್ 17ರಂದು ಜೈಪುರ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಹಾಗೂ ಈ ಪಂದ್ಯಕ್ಕೂ ಮುನ್ನಾ ದಿನ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಭಾರತ ಟಿ ಟ್ವೆಂಟಿ ತಂಡದ ನೂತನ ನಾಯಕ ರೋಹಿತ್ ಶರ್ಮಾ ತಂಡದ ಆಟಗಾರರಿಗೆ ಆಗಾಗ ವಿಶ್ರಾಂತಿಯ ಅಗತ್ಯವಿದೆ ಎಂಬುದರ ಕುರಿತು ಮಾತನಾಡಿದ್ದು, ಆಟಗಾರರು ಯಂತ್ರಗಳಲ್ಲ ನಮಗೂ ಅಗತ್ಯವಾದ ವಿಶ್ರಾಂತಿ ಬೇಕಾಗಿದೆ ಎಂದಿದ್ದಾರೆ. ಇನ್ನೂ ಮುಂದುವರಿದು ಮಾತನಾಡಿದ ರೋಹಿತ್ ಶರ್ಮಾ ಅನೇಕ ದಿನಗಳಿಂದ ಸತತವಾಗಿ ಕ್ರಿಕೆಟ್ ಆಡುತ್ತಿರುವ ತಂಡದ ಹಲವರಿಗೆ ವಿಶ್ರಾಂತಿಯ ಅಗತ್ಯವಿದೆ, ಹೀಗೆ ವಿಶ್ರಾಂತಿ ಪಡೆದರೆ ಮಾತ್ರ ಮುಂಬರುವ ಸವಾಲುಗಳನ್ನು ದಿಟ್ಟವಾಗಿ ಆಟಗಾರರು ಎದುರಿಸಬಲ್ಲರು ಎಂದು ರೋಹಿತ್ ಶರ್ಮಾ ಹೇಳಿಕೆ ನೀಡಿದ್ದಾರೆ.

ಫುಟ್ಬಾಲ್ ಮಾದರಿಯಲ್ಲಿ ಕ್ರಿಕೆಟ್ ಆಟಗಾರರಿಗೂ ವಿಶ್ರಾಂತಿ ಬೇಕು ಎಂದ ರಾಹುಲ್ ದ್ರಾವಿಡ್

ಫುಟ್ಬಾಲ್ ಮಾದರಿಯಲ್ಲಿ ಕ್ರಿಕೆಟ್ ಆಟಗಾರರಿಗೂ ವಿಶ್ರಾಂತಿ ಬೇಕು ಎಂದ ರಾಹುಲ್ ದ್ರಾವಿಡ್

ಇನ್ನು ನ್ಯೂಜಿಲೆಂಡ್ ವಿರುದ್ಧದ ಟಿ ಟ್ವೆಂಟಿ ಸರಣಿಯ ಮೂಲಕ ಟೀಮ್ ಇಂಡಿಯಾದ ನೂತನ ಕೋಚ್ ಆಗಿ ಕೆಲಸ ಆರಂಭಿಸಲಿರುವ ರಾಹುಲ್ ದ್ರಾವಿಡ್ ಕೂಡ ಈ ಕುರಿತಾಗಿ ಮಾತನಾಡಿದ್ದು ಫುಟ್ಬಾಲ್ ಮಾದರಿಯಲ್ಲಿಯೇ ಕ್ರಿಕೆಟ್ ಆಟಗಾರರಿಗೂ ವಿಶ್ರಾಂತಿಯ ಅವಶ್ಯಕತೆ ಇದೆ ಎಂದಿದ್ದಾರೆ. ಫುಟ್ ಬಾಲ್ ಕ್ರೀಡೆಯಲ್ಲಿ ಆಟಗಾರರು ಎಲ್ಲಾ ಪಂದ್ಯಗಳಲ್ಲಿಯೂ ಭಾಗವಹಿಸುವುದಿಲ್ಲ, ಅವರು ವರ್ಷವಿಡೀ ಕಣಕ್ಕಿಳಿಯದೇ ಕೆಲ ಪಂದ್ಯಗಳಿಂದ ಹೊರಗುಳಿದು ವಿಶ್ರಾಂತಿ ಪಡೆಯುತ್ತಾರೆ. ಅದೇ ರೀತಿ ಕ್ರಿಕೆಟ್ ಆಟಗಾರರಿಗೂ ಕೆಲ ಪಂದ್ಯಗಳಿಂದ ಹೊರಗುಳಿದು ವಿಶ್ರಾಂತಿ ತೆಗೆದುಕೊಳ್ಳಲು ಅವಕಾಶವನ್ನು ನೀಡಬೇಕು ಎಂದು ರಾಹುಲ್ ದ್ರಾವಿಡ್ ಅಭಿಪ್ರಾಯಪಟ್ಟಿದ್ದಾರೆ. ಹೀಗಿದ್ದಾಗ ಮಾತ್ರ ಆಟಗಾರರು ದೈಹಿಕವಾಗಿ ಮತ್ತು ಮಾನಸಿಕವಾಗಿ ದೃಢವಾಗಿರುತ್ತಾರೆ ಎಂದು ರಾಹುಲ್ ದ್ರಾವಿಡ್ ತಮ್ಮ ಅನಿಸಿಕೆ ವ್ಯಕ್ತಪಡಿಸಿದ್ದಾರೆ.

ಹೆಚ್ಚಾಯಿತು ಒತ್ತಡ, ಸರಣಿಯಿಂದ ದೂರ ಸರಿದ ಪ್ರಮುಖ ಕ್ರಿಕೆಟಿಗರು

ಹೆಚ್ಚಾಯಿತು ಒತ್ತಡ, ಸರಣಿಯಿಂದ ದೂರ ಸರಿದ ಪ್ರಮುಖ ಕ್ರಿಕೆಟಿಗರು

ಇನ್ನು ಸತತವಾಗಿ ಕ್ರಿಕೆಟ್ ಆಡುತ್ತಿರುವುದರಿಂದ ಆಟಗಾರರು ಮಾನಸಿಕ ಒತ್ತಡಕ್ಕೆ ಒಳಗಾಗಿರುವಂತೆ ಕಾಣುತ್ತಿದೆ. ಹೀಗಾಗಿಯೇ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳ ನಡುವೆ ನಡೆಯಲಿರುವ 3 ಪಂದ್ಯಗಳ ಟಿ ಟ್ವೆಂಟಿ ಸರಣಿಯಿಂದ ಇತ್ತಂಡಗಳ ಪ್ರಮುಖ ಆಟಗಾರರೇ ಹೊರಗುಳಿದಿದ್ದಾರೆ. ಭಾರತ ತಂಡದ ಪ್ರಮುಖ ಆಟಗಾರರಾದ ವಿರಾಟ್ ಕೊಹ್ಲಿ ರವೀಂದ್ರ ಜಡೇಜಾ ಮತ್ತು ಜಸ್ ಪ್ರೀತ್ ಬೂಮ್ರಾ ಈ ಸರಣಿಯಿಂದ ಹೊರಗುಳಿದಿದ್ದು ವಿಶ್ರಾಂತಿ ಪಡೆಯುತ್ತಿದ್ದಾರೆ. ಇನ್ನು ನ್ಯೂಜಿಲೆಂಡ್ ತಂಡದ ಪ್ರಮುಖ ಆಟಗಾರರಾದ ನಾಯಕ ಕೇನ್ ವಿಲಿಯಮ್ಸನ್ ಮತ್ತು ಪ್ರಮುಖ ಬೌಲರ್ ಕೈಲ್ ಜೆಮಿಸನ್ ಕೂಡ ಈ ಸರಣಿಯಿಂದ ವಿಶ್ರಾಂತಿಗಾಗಿ ಹೊರಗುಳಿಯಲಿದ್ದಾರೆ.

Rohit Sharma 9 ವರ್ಷಗಳ ಮುಂಚೆಯೇ ಈ ಬಗ್ಗೆ ಹೇಳಿದ್ದರು | Oneindia Kannada

Story first published: Wednesday, November 17, 2021, 13:19 [IST]
Other articles published on Nov 17, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X