'ದ್ವಿತೀಯ ಐಪಿಎಲ್‌ನಲ್ಲಿ ಹೊಸ ಆರಂಭಕ್ಕೆ ಎದುರು ನೋಡುತ್ತಿದ್ದೇವೆ'

ದುಬೈ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಈವರೆಗೆ ನಡೆದ ಪಂದ್ಯಗಳಲ್ಲಿ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿರುವ ಹಾಲಿ ರನ್ನರ್ಸ್ ತಂಡ ಡೆಲ್ಲಿ ಕ್ಯಾಪಿಟಲ್ಸ್ ದ್ವಿತೀಯ ಹಂತದಲ್ಲೂ ಉತ್ತಮ ಪ್ರದರ್ಶನ ನೀಡುವ ಯೋಜನೆಯಲ್ಲಿದೆ. ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ನಡೆಯುವ ಟೂರ್ನಿಯಲ್ಲಿ ಹೊಸ ಟೂರ್ನಿಯಂತೆ ಆಡಲು ಡೆಲ್ಲಿ ಎದುರು ನೋಡುತ್ತಿದೆ ಎಂದು ಡಿಸಿ ಸಹ ಕೋಚ್ ಪ್ರವೀಣ್ ಆಮ್ರೆ ಹೇಳಿದ್ದಾರೆ.
ಭಾರತದಲ್ಲಿ ಆರಂಭಗೊಂಡಿದ್ದ ಐಪಿಎಲ್ ಕೋವಿಡ್-19 ಭೀತಿಯಿಂದಾಗಿ ಅರ್ಧದಲ್ಲೇ ನಿಲ್ಲಿಸಲ್ಪಟ್ಟಿತ್ತು. ನಿಲುಗಡೆಯಾಗಿರುವ ಟೂರ್ನಿ ಸೆಪ್ಟೆಂಬರ್ 19ರಿಂದ ಅಕ್ಟೋಬರ್ 15ರ ವರೆಗೆ ಯುಎಇಯಲ್ಲಿ ನಡೆಯಲಿದೆ. ಒಟ್ಟು 29 ಪಂದ್ಯಗಳು ಮೊದಲ ಹಂತದಲ್ಲಿ ನಡೆದಿದ್ದು, ಇನ್ನುಳಿದ 31 ಪಂದ್ಯಗಳು ಅರಬ್ ರಾಷ್ಟ್ರದಲ್ಲಿ ನಡೆಯಲಿದೆ.
"ಇನ್ನುಳಿದ ಪಂದ್ಯಗಳನ್ನು ನಾವು ಹೊಸ ಟೂರ್ನಿಯಂತೆ ಪರಿಗಣಿಸುತ್ತಿದ್ದೇವೆ. ಮೊದಲ ಹಂತದ ಟೂರ್ನಿ ಮುಗಿದು ಸುದೀರ್ಘ ಸಮಯವಾಗಿದೆ. ಅಲ್ಲದೆ ಹೊಸ ಪರಿಸ್ಥಿತಿಯಲ್ಲೂ ನಾವು ಆಡಲಿದ್ದೇವೆ. ಹೀಗಾಗಿ ದ್ವಿತೀಯ ಹಂತವನ್ನು ನಾವು ಹೊಸ ಸೀಸನ್ ಎಂದೇ ಪರಿಗಣಿಸಿ ಆಡುತ್ತೇವೆ," ಎಂದು ಪತ್ರಿಕಾ ಪ್ರಕಟಣೆಯಲ್ಲಿ ಪ್ರವೀಣ್ ಆಮ್ರೆ ತಿಳಿಸಿದ್ದಾರೆ.
"ಮೊದಲ ಹಂತದಲ್ಲಿ ಅದ್ಭುತ ಪ್ರದರ್ಶನ ನೀಡಿರುವುದುರಿಂದ ದ್ವಿತೀಯ ಹಂತದ ಆರಂಭದಿಂದಲೂ ಯಾವುದೇ ರಾಜಿಯಿಲ್ಲದೆ ಅಷ್ಟೇ ಒಳ್ಳೆಯ ಪ್ರದರ್ಶನ ನೀಡಲು ಎದುರು ನೋಡುತ್ತಿದ್ದೇವೆ," ಎಂದು ಆಮ್ರೆ ತಿಳಿಸಿದ್ದಾರೆ. ಡೆಲ್ಲಿ ತಂಡದ ಎಂದಿನ ನಾಯಕ ಶ್ರೇಯಸ್ ಐಯ್ಯರ್ ಗಾಯಗೊಂಡು ಆರಂಭಿಕ ಹಂತದಲ್ಲಿ ಆಡಿರಲಿಲ್ಲ. ಅವರ ಬದಲಿಗೆ ರಿಷಭ್ ಪಂತ್ ನಾಯಕತ್ವ ವಹಿಸಿದ್ದರು. ದ್ವಿತೀಯ ಹಂತದಲ್ಲೂ ಪಂತ್ ನಾಯಕರಾಗಿ ಮುಂದುವರೆಯಲಿದ್ದಾರೆ ಎಂದು ತಿಳಿದು ಬಂದಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications