'ಸರ್ಫರಾಜ್ ಅನ್ನು ಕ್ಷಮಿಸಬಹುದು, ಆದರೆ ತಪ್ಪನ್ನು ಮರೆಮಾಚಲು ಸಾಧ್ಯವಿಲ್ಲ'

ಕೇಪ್‌ಟೌನ್, ಜನವರಿ 25: ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಸರ್ಫರಾಜ್ ಅಹ್ಮದ್ ಅವರ ಜನಾಂಗೀಯ ಟೀಕೆ ಕುರಿತು ದಕ್ಷಿಣ ಆಫ್ರಿಕಾ ನಾಯಕ ಫಾ ಡು ಪ್ಲೆಸಿಸ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ನಾವು ಕ್ಷಮಿಸಬಹುದು, ಆದರೆ ಅವರ (ಸರ್ಫರಾಜ್) ತಪ್ಪನ್ನು ನಮ್ಮಿಂದ ಮರೆಮಾಚಲು ಸಾಧ್ಯವಿಲ್ಲ ಎಂದಿದ್ದಾರೆ.
ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿರುವ ಪಾಕಿಸ್ತಾನ ತಂಡ, ಏಕದಿನ ಸರಣಿಯನ್ನು ಆಡುತ್ತಿದೆ. ಜನವರಿ 22ರಂದು ಕಿಂಗ್ಸ್‌ಮೀಡ್ ಸ್ಟೇಡಿಯಂನಲ್ಲಿ ನಡೆದ ಇತ್ತಂಡಗಳ ನಡುವಿನ ದ್ವಿತೀಯ ಏಕದಿನ ಪಂದ್ಯದ ವೇಳೆ ಸರ್ಫರಾಜ್ ಅವರು ಆಫ್ರಿಕಾ ಆಲ್ ರೌಂಡರ್ ಆಂಡಿಲೆ ಫೆಹ್ಲುಕ್ವೇವೊ ಅವರನ್ನು ಜನಾಂಗೀಯವಾಗಿ ಟೀಕಿಸಿದ್ದರು. ಇದು ವಿವಾದವನ್ನು ಸೃಷ್ಟಿಸಿತ್ತು.
'ನಾವು ಅವರನ್ನು ಕ್ಷಮಿಸಬಹುದು. ಯಾಕೆಂದರೆ ಅವರು ಕ್ಷಮೆಯಾಚಿಸಿದ್ದಾರೆ. ಆ ಹೇಳಿಕೆಗೆ ಪಶ್ಚಾತಾಪ ವ್ಯಕ್ತಪಡಿಸಿದ್ದಾರಲ್ಲದೆ, ಅವರ ಹೊಣೆಯನ್ನೂ ಹೊತ್ತುಕೊಂಡಿದ್ದಾರೆ. ಈಗ ಆ ವಿಚಾರ ನಮ್ಮ ಕೈಯಲ್ಲಿಲ್ಲ. ಐಸಿಸಿ ಈ ಬಗ್ಗೆ ನಿರ್ಧಾರ ತಾಳಬೇಕಿದೆ' ಎಂದು ಕ್ರಿಕ್ ಇನ್ಫೋ ಜೊತೆ ಮಾತನಾಡುತ್ತ ಪ್ಲೆಸಿಸ್ ಹೇಳಿದ್ದಾರೆ.
ಪಂದ್ಯದ ವೇಳೆ ಬ್ಯಾಟಿಂಗ್ ಮಾಡುತ್ತಿದ್ದ ಆಂಡಿಲೆ ಅವರನ್ನು ಗುರಿಯಾಗಿಸಿ ಸರ್ಫರಾಜ್ ಗೇಲಿ ಮಾಡಿದ್ದರು. 'ಹೇಯ್ ಬ್ಲ್ಯಾಕ್ (ಮ್ಯಾನ್), ನಿನ್ನ ತಾಯಿ ಎಲ್ಲಿ ಕುಳಿತುಕೊಂಡಿದ್ದಾರೆ? ಅವರು ನಿನಗೆ ಇವತ್ತು ಯಾವ ಪ್ರಾರ್ಥನೆ ಮಾಡುವುದನ್ನು ಬಯಸಿದ್ದೀಯ?' ಎಂದು ಟೀಕಿಸಿದ್ದು ಸ್ಟಂಪ್ ಮೈಕ್‌ನಲ್ಲಿ ದಾಖಲಾಗಿತ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications