Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಪಿಎಲ್‌ನಿಂದ ಬಹಳಷ್ಟು ಗಳಿಸಿದ್ದೇವೆ: ಯುಎಇ ನಾಯಕ ಅಹ್ಮದ್ ರಾಜಾ

We felt like we gained a lot from IPL: UAE skipper Ahmed Raza

ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ವಿರಾಟ್ ಕೊಹ್ಲಿಯಂತ ಆಟಗಾರರ ಜೊತೆ ಅಭ್ಯಾಸ ನಡೆಸಿದ್ದರಿಂದ ಸಾಕಷ್ಟು ಕಲಿತುಕೊಂಡಿದ್ದೇವೆ. ಐಪಿಎಲ್‌ನಲ್ಲಿ ಆಡಿದ ಅನುಭವಗಳು ಮುಂದೆ ಅಬುಧಾಬಿಯಲ್ಲಿ ನಡೆಯಲಿರುವ ಐರ್ಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಉಪಯೋಗಕ್ಕೆ ಬರಲಿವೆ ಎಂದು ತಾನು ಭಾವಿಸಿರುವುದಾಗಿ ಯುನೈಟೆಡ್ ಅರಬ್ ಎಮಿರೇಟ್ಸ್‌ನ ನಾಯಕ ಅಹ್ಮದ್ ರಾಜಾ ಹೇಳಿದ್ದಾರೆ.

ಕಳೆದ ವರ್ಷ ಯುಎಇಯಲ್ಲಿ ನಡೆದಿದ್ದ ಐಪಿಎಲ್ ವೇಳೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಜೊತೆಗಿದ್ದು ಅಹ್ಮದ್ ರಾಜಾ ಮತ್ತು ಸ್ಪಿನ್ನರ್ ಕಾರ್ತಿಕ್ ಮೆಯಪ್ಪನ್ ಅಭ್ಯಾಸ ನಡೆಸಿದ್ದರು. ಇದೇ ವೇಳೆ ಮತ್ತೊಬ್ಬ ವೇಗಿ ಝಹೂರ್ ಖಾನ್ ಅವರು ಮುಂಬೈ ಇಂಡಿಯನ್ಸ್ ತಂಡದ ಜೊತೆಗೆ ಅಭ್ಯಾಸ ನಡೆಸಿದ್ದರು.

'ಐಪಿಎಲ್‌ ಅದ್ಭುತ ಅನುಭವ. ವಿರಾಟ್ ಕೊಹ್ಲಿ ಮತ್ತು ಎಬಿ ಡಿ ವಿಲಿಯರ್ಸ್‌ನಂತ ಬ್ಯಾಟ್ಸ್‌ಮನ್‌ಗಳ ಜೊತೆ ಅಭ್ಯಾಸ ನಡೆಸೋದು, ಅವರಿಗೆ ಬೌಲಿಂಗ್ ಮಾಡೋದು ಶ್ರೇಷ್ಠ ಅನುಭವ. ಐಪಿಎಲ್‌ ಮುಗಿಯುವಾಗ ನಾವು ಬಹಳಷ್ಟು ಗಳಿಸಿದ್ದೆವು ಎಂದು ನಮಗನ್ನಿಸಿತ್ತು,' ಎಂದು ಸುದ್ದಿಗಾರರ ಜೊತೆ ಅಹ್ಮದ್ ರಾಜಾ ಹೇಳಿಕೊಂಡಿದ್ದಾರೆ.

'ಐಪಿಎಲ್‌ ಬಗ್ಗೆ ಮಾತಿನಲ್ಲಿ ಹೇಳೋದು ಕಷ್ಟ. ಆದರೆ ಅದರಲ್ಲಿ ಪಾಲ್ಗೊಂಡ ಬಳಿಕ ನಿಮಗೆ ವ್ಯತ್ಯಾಸ ತಿಳಿಯಲಾರಂಭಿಸುತ್ತದೆ. ನಿಮ್ಮ ವಿಧಾನವೇ ಬದಲಾಗಿರುತ್ತದೆ. ಐಪಿಎಲ್ ಅವಧಿಯಲ್ಲಿ ತಾನು ಏನೆಲ್ಲ ಗಳಿಸಿದ್ದೆನೋ ಅದು ಮುಂಬರಲಿರುವ ಸರಣಿಯಲ್ಲಿ ಪ್ರದರ್ಶನ ನೀಡಲು ಸಹಾಯವಾಗುತ್ತದೆ ಎಂದು ನಾನು ಭಾವಿಸುತ್ತೇನೆ,' ಎಂದು ರಾಜಾ ಹೇಳಿದ್ದಾರೆ.

Story first published: Thursday, January 7, 2021, 23:30 [IST]
Other articles published on Jan 7, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+