
ಆಸ್ಟ್ರೇಲಿಯಾದ ವಿಕೆಟ್ ಕೀಪರ್ ಹಾಗೂ ಬ್ಯಾಟ್ಸ್‌ಮನ್ ಮ್ಯಾಥ್ಯೂವೇಡ್ ನಾಲ್ಕನೇ ಟೆಸ್ಟ್ ಪಂದ್ಯ ಬ್ರಿಸ್ಬೇನ್‌ನಲ್ಲೇ ನಡೆಯಲಿರುವ ಬಗ್ಗೆ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ. ಕೊರೊನಾ ವೈರಸ್‌ನ ಕಾರಣದಿಂದಾಗಿ ಕ್ವೀನ್ಸ್‌ಲ್ಯಾಂಡ್ ರಾಜ್ಯಕ್ಕೆ ತೆರಳಲು ಇರುವ ಪ್ರಯಾಣದ ನಿರ್ಬಂಧದ ಹಿನ್ನೆಲೆಯಲ್ಲಿ ಟೀಮ್ ಇಂಡಿಯಾ ಆಟಗಾರರು ಬ್ರಿಸ್ಬೇನ್‌ಗೆ ತೆರಳಲು ಹಿಂದೇಟು ಹಾಕುತ್ತಿದ್ದಾರೆ ಎಂಬ ವರದಿಯ ಹಿನ್ನೆಲೆಯಲ್ಲಿ ವೇಡ್ ಈ ಪ್ರತಿಕ್ರಿಯೆ ನೀಡಿದ್ದಾರೆ.
ಕ್ವೀನ್ಸ್‌ಲ್ಯಾಂಡ್ ಸರ್ಕಾರ 14 ದಿನಗಳ ಕಠಿಣ ಕ್ವಾರಂಟೈನ್ ವಿಧಿಸುವ ನಿಯಮಹೊಂದಿರುವ ಕಾರಣದಿಂದಾಗಿ ಟೀಮ್ ಇಂಡಿಯಾ ಆಟಗಾರರು ಬ್ರಿಸ್ಬೇನ್‌ಗೆ ತೆರಳಲು ಹಿಂದೇಟು ಹಾಕುತ್ತಿದ್ದಾರೆ ಎಂದು ವರದಿಯಾಗಿದೆ. ಐಪಿಎಲ್ ಮುಕ್ಯಾಯದ ಬಳಿಕ ಸಿಡ್ನಿಗೆ ಆಗಮಿಸಿ 14 ದಿನಗಳ ಕ್ವಾರಂಟೈನ್‌ಗೆ ಒಳಗಾಗಿದ್ದ ಟೀಮ್ ಇಂಡಿಯಾ ಆಟಗಾರರು ಮತ್ತೊಮ್ಮೆ ಅದೇ ರೀತಿ ಕಠಿಣ ಕ್ವಾರಂಟೈನ್‌ಗೆ ಒಳಗಾಗಲು ಬಯಸುತ್ತಿಲ್ಲ ಎನ್ನಲಾಗಿದೆ.
ಈ ಬೆಳವಣಿಗೆಯ ಬಗ್ಗೆ ಕ್ರಿಕೆಟ್ ಆಸ್ಟ್ರೇಲಿಯಾ ಭಾನವಾರ ಪ್ರತಿಕ್ರಿಯಿಸಿದ್ದು ಈ ವಿಚಾರವಾಗಿ ಟೀಮ್ ಇಂಡಿಯಾ ಈ ಬಗ್ಗೆ ಅಧಿಕರತವಾಗಿ ಯಾವುದೇ ಸಂಗತಿಗಳನ್ನು ಹಂಚಿಕೊಂಡಿಲ್ಲ. ಆದರೆ ಎರಡು ರಾಷ್ಟ್ರಗಳ ಮಂಡಳಿಗಳು ನಿರಂತರವಾಗಿ ಸಂಪರ್ಕದಲ್ಲಿದೆ ಎಂದಿದೆ. ಬ್ರಿಸ್ಬೇನ್ನ ಗಾಬಾ ಕ್ರೀಡಾಂಗಣದಲ್ಲಿ ಟೆಸ್ಟ್ ಸರಣಿಯ ನಾಲ್ಕನೇ ಹಾಗೂ ಅಂತಿಮ ಟೆಸ್ಟ್ ಪಂದ್ಯ ಜನವರಿ 15ರಿಂದ ನಿಗದಿಯಾಗಿದೆ.
"ಈ ಬಗ್ಗೆ ನಾನು ಈಗಷ್ಟೇ ತಿಳಿದುಕೊಂಡಿದ್ದೇನೆ. ನಾವು ಕೆಲ ಅಡೆತಡೆಗಳನ್ನು ಹೊಂದಲಿದ್ದೇವೆ ಎಂದು ತಿಳಿದಿತ್ತು. ಅದರಲ್ಲಿ ಇದು ಕೂಡ ಒಂದು. ವೇಳಾಪಟ್ಟಿ ಈಗ ಹೇಗಿದೆಯೋ ನಾವು ಅದರ ಪ್ರಕಾರವೇ ಆಡಲು ಬಯಸುತ್ತೇವೆ" ಎಂದು ವೇಡ್ ಹೇಳಿಕೆಯನ್ನು ನೀಡಿದ್ದಾರೆ.
ನಾವು ಬ್ರಿಸ್ಬೇನ್‌ಗೆ ತೆರಳಿ ಗಾಬಾದಲ್ಲಿ ಆಡಲು ಬಯಸುತ್ತೇವೆ. ಕ್ವಾರಂಟೈನ್‌ನಂತಾ ಪರಿಸ್ಥೀತಿ ನಿರ್ಮಾಣವಾದರೂ ನಾವು ಬ್ರಿಸ್ಬೇನ್‌ಗೆ ತೆರಳಲು ಬಯಸುತ್ತೇವೆ ಎಂದಿದ್ದಾರೆ ಮ್ಯಾಥ್ಯೂವೇಡ್. ಆಸ್ಟ್ರೇಲಿಯಾ ತಂಡಕ್ಕೆ ಗಾಬಾ ಕ್ರೀಡಾಂಗಣ ಫೇವರಿಟ್ ತಾಣ ಎನಿಸಿಕೊಂಡಿದೆ. 1988ರ ಬಳಿಕ ಇಲ್ಲಿ ನಡೆದ ಯಾವುದೇ ಪಂದ್ಯದಲ್ಲಿ ಆಸ್ಟ್ರೇಲಿಯಾ ಸೋಲನ್ನು ಕಂಡಿಲ್ಲ.