ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ನಾವು ನಮ್ಮ ಅತ್ಯುತ್ತಮ ಪ್ರದರ್ಶನ ನೀಡಿಲ್ಲ: ಆರ್‌ಸಿಬಿ ಪ್ರದರ್ಶನದ ಬಗ್ಗೆ ಎಬಿಡಿ

We havent played our absolute best, says ABD on RCBs performance

ಅಬುಧಾಬಿ: ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ 2021ರ ಐಪಿಎಲ್‌ ಸೀಸನ್‌ನಲ್ಲಿ ಪ್ಲೇ ಆಫ್ಸ್‌ಗೆ ಪ್ರವೇಶಿಸಿದೆ. ನೆಟ್‌ ರನ್‌ರೇಟ್‌ನ ಹಂಗಿಲ್ಲದೆ ಪಂದ್ಯಗಳನ್ನು ಗೆದ್ದು ಪಾಯಿಂಟ್ಸ್ ಆಧಾರದಲ್ಲೇ ಆರ್‌ಸಿಬಿ ಈ ಬಾರಿ ಪ್ಲೇ ಆಫ್ಸ್‌ಗೆ ಪ್ರವೇಶಿಸಿದೆ. ಹೀಗಾಗಿ ಈ ಬಾರಿ ಆರ್‌ಸಿಬಿ ಬಗ್ಗೆ ನಿರೀಕ್ಷೆಗಳೂ ಹೆಚ್ಚಿವೆ.

ಭಾವನಾತ್ಮಕ ಸಂದೇಶ ಬರೆದು ಐಪಿಎಲ್‌ಗೆ ಗುಡ್‌ಬೈ ಹೇಳಿದ ಡೇವಿಡ್ ವಾರ್ನರ್ಭಾವನಾತ್ಮಕ ಸಂದೇಶ ಬರೆದು ಐಪಿಎಲ್‌ಗೆ ಗುಡ್‌ಬೈ ಹೇಳಿದ ಡೇವಿಡ್ ವಾರ್ನರ್

ಕಪ್‌ ಗೆಲ್ಲದ ತಂಡಗಳಾದ ಡೆಲ್ಲಿ ಕ್ಯಾಪಿಟಲ್ಸ್, ಪಂಜಾಬ್ ಕಿಂಗ್ಸ್ ಸಾಲಿನಲ್ಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಈ ಬಾರಿ ಕಪ್‌ ಗೆಲ್ಲುವ ನಿರೀಕ್ಷೆ ಮೂಡಿಸಿದೆ. ಮುಖ್ಯವಾಗಿ ಲೀಗ್‌ ಹಂತದ ಕೊನೇ ಪಂದ್ಯದಲ್ಲಿ ಅಂಕಪಟ್ಟಿಯ ಅಗ್ರಸ್ಥಾನದಲ್ಲಿರುವ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಕೊನೇ ಎಸೆತಕ್ಕೆ ಸಿಕ್ಸ್ ಚಚ್ಚಿ ಪಂದ್ಯ ಗೆದ್ದಿತ್ತು.

ಲೀಗ್ ಹಂತದಲ್ಲಿ ಆಡಿದ 14 ಪಂದ್ಯಗಳಲ್ಲಿ 9ರಲ್ಲಿ ಗೆದ್ದಿರುವ ಆರ್‌ಸಿಬಿ 18 ಪಾಯಿಂಟ್ಸ್‌ಗಳೊಂದಿಗೆ ಸದ್ಯ ಐಪಿಎಲ್ ಅಂಕಪಟ್ಟಿಯಲ್ಲಿ ತೃತೀಯ ಸ್ಥಾನದಲ್ಲಿ ಲೀಗ್ ಸ್ಪರ್ಧೆ ಮುಗಿಸಿದೆ. 2016ರಲ್ಲಿ ಫೈನಲ್‌ ಪ್ರವೇಶಿಸಿದ್ದ ಆರ್‌ಸಿಬಿ ಮುಂದಿನ ಹಂತದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಸವಾಲು ಸ್ವೀಕರಿಸಲಿದೆ.

ಲಾಸ್ಟ್ ಬಾಲ್ ಸಿಕ್ಸ್‌ ಸಿಡಿಸಿ ಹೀರೋ ಆದ ಭರತ್ ಆ ಒಂದೇ ಒಂದು ಪಂದ್ಯದಲ್ಲಿ ಗಳಿಸಿದ ಹಣವೆಷ್ಟು ಗೊತ್ತಾ?ಲಾಸ್ಟ್ ಬಾಲ್ ಸಿಕ್ಸ್‌ ಸಿಡಿಸಿ ಹೀರೋ ಆದ ಭರತ್ ಆ ಒಂದೇ ಒಂದು ಪಂದ್ಯದಲ್ಲಿ ಗಳಿಸಿದ ಹಣವೆಷ್ಟು ಗೊತ್ತಾ?

"ನಾವು ಹೇಗೆ ಆಡಬೇಕು ಅಂದುಕೊಂಡಿದ್ದೇವೋ ಆ ಆಟವನ್ನು ಆಡಬೇಕು ಎಂದು ಅನ್ನಿಸುತ್ತಿದೆ. ಬಹುಶಃ ಮುಂದಿನ ಪಂದ್ಯಗಳಲ್ಲಿ ಆ ಆಟ ಆಡುತ್ತೇವೆ. ನಾವು ಸರಿಯಾದ ಸಮಯದಲ್ಲಿ ಎತ್ತರದ ಆಟ ನೀಡಲು ಯೋಚಿಸುತ್ತಿದ್ದೇವೆ. ನಮ್ಮ ಅತ್ಯುತ್ತಮ ಆಟವನ್ನು ನಾವು ಆಡಿಲ್ಲ. ಆದರೆ ನಾವು ಅದರ ಸಮೀಪಕ್ಕೆ ಹೋಗುತ್ತಿದ್ದೇವೆ. ಆ ಆಟವನ್ನು ನಾವು ಫೈನಲ್‌ನಲ್ಲಿ ಎರಡು ಸಾರಿ ತಂದರೂ ಅತ್ಯುತ್ತಮ ಫಲಿತಾಂಶ ನಮ್ಮಪರವಾಗಲಿದೆ," ಎಂದು ಸ್ಟಾರ್‌ ಸ್ಪೋರ್ಟ್ಸ್ ಜೊತೆ ಮಾತನಾಡಿದ ಎಬಿ ಡಿ ವಿಲಿಯರ್ಸ್ ಹೇಳಿದ್ದಾರೆ.

Story first published: Sunday, October 10, 2021, 0:37 [IST]
Other articles published on Oct 10, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X