Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಡೆಲ್ಲಿ ವಿರುದ್ಧ ಮೂಲಭೂತ ಅಂಶಗಳನ್ನು ಬಳಸಬೇಕಿದೆ: ರಶೀದ್ ಖಾನ್

We just need to do the basics right against Delhi Capitals: Rashid Khan

ದುಬೈ: ಇಂಡಿಯನ್ ಪ್ರೀಮಿಯರ್ ಲೀಗ್ ಕ್ವಾಲಿಫೈಯರ್ 2ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ತಂಡಗಳು ಮುಖಾಮುಖಿಯಾಗಲಿವೆ. ಪಂದ್ಯ ಗೆಲ್ಲಬೇಕಾದರೆ ನಾವು ಮೂಲಭೂತ ಅಂಶಗಳನ್ನು ಬಳಸಿದರೆ ಸಾಕಷ್ಟೆ ಎಂದು ಹೈದರಾಬಾದ್‌ನ ಸ್ಪಿನ್ನರ್ ರಶೀದ್ ಖಾನ್ ಹೇಳಿದ್ದಾರೆ.

ಶುಕ್ರವಾರ ನಡೆದಿದ್ದ ಎಲಿಮಿನೇಟರ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಸನ್ ರೈಸರ್ಸ್ ಹೈದರಾಬಾದ್ 6 ವಿಕೆಟ್ ರೋಚಕ ಗೆಲುವು ಕಂಡಿತ್ತು. ಕೇನ್ ವಿಲಿಯಮ್ಸನ್ 50, ಜೇಸನ್ ಹೋಲ್ಡರ್ 24, ಮನೀಶ್ ಪಾಂಡೆ 24 ರನ್ ಬಾರಿಸಿ ಪಂದ್ಯವನ್ನು ಗೆಲ್ಲಿಸಿಕೊಟ್ಟರು. ಹೀಗಾಗಿ ಎಸ್‌ಆರ್‌ಎಚ್ ಕ್ವಾಲಿಫೈಯರ್ 2ಕ್ಕೆ ಪ್ರವೇಶ ಗಿಟ್ಟಿಸಿಕೊಂಡಿತ್ತು.

'ಮೊದಲೆಲ್ಲ ಪಿಚ್ ಹೆಚ್ಚು ಸ್ಲೋ ಆಗಿತ್ತು ಹೆಚ್ಚು ಸ್ಕಿಡ್ ಆಗ್ತಿರಲಿಲ್ಲ. ಈಗ ಹಾಗಿಲ್ಲ. ನೀವು ಒಂದು ಸಾಮಾನ್ಯ ಸಂಗತಿ ತಲೆಯಲ್ಲಿಡಬೇಕು, ಅದೇನೆಂದರೆ ಬ್ಯಾಕ್‌ ಲೆಂತ್. ಡೆಲ್ಲಿ ವಿರುದ್ಧ ಮೂಲಭೂತ ಅಂಶಗಳನ್ನು ಬಳಸಬೇಕು,' ಎಂದು ರಶೀದ್ ಖಾನ್ ಹೇಳಿದ್ದಾರೆ.

ಎರಡನೇ ಕ್ವಾಲಿಫೈಯರ್ ಪಂದ್ಯ ನವೆಂಬರ್ 8ರ ಭಾನುವಾರ ಅಬುಧಾಬಿಯ ಶೈಕ್ ಝಾಯೆದ್ ಸ್ಟೇಡಿಯಂನಲ್ಲಿ ನಡೆಯಲಿದೆ. 7.30 pmಗೆ ಪಂದ್ಯ ನಡೆಯಲಿದ್ದು, 7 pmಗೆ ಟಾಸ್ ನಡೆಯಲಿದೆ. ಇಲ್ಲಿ ಗೆಲ್ಲುವ ತಂಡ ನವೆಂಬರ್‌ 10ರಂದು ಮುಂಬೈ ಇಂಡಿಯನ್ಸ್ ಎದುರು ಫೈನಲ್‌ನಲ್ಲಿ ಸೆಣಸಾಡಲಿದೆ.

Story first published: Saturday, November 7, 2020, 17:29 [IST]
Other articles published on Nov 7, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+