Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಕೊಹ್ಲಿ ತರದ ನಾಯಕನೇ ನಮಗೆ ಬೇಕು ಎಂದ ಮಾಜಿ ಕ್ರಿಕೆಟಿಗ

We Need A Captain Like Him Says Madan Lal

ಟೀಮ್ ಇಂಡಿಯಾ ನಾಯಕನ ಅಗ್ರೆಸ್ಸಿವ್ ವ್ಯಕ್ತಿತ್ವ ಕೆಲವರಿಗೆ ಇಷ್ಟವಾದರೆ ಅನೇಕರಿಗೆ ಅದು ಇಷ್ಟವಾಗುವುದಿಲ್ಲ. ಕೊಹ್ಲಿಯ ಈ ವ್ಯಕ್ತಿತ್ವ ಪ್ರತಿ ಬಾರಿಯೂ ಚರ್ಚೆಯಲ್ಲಿರುವುದು ಮಾತ್ರ ಸುಳ್ಳಲ್ಲ. ಅನೇಕ ಮಾಜಿ ಆಟಗಾರರು ಕೂಡ ಈ ಬಗ್ಗೆ ತಮ್ಮ ಅಭಿಪ್ರಾಯಗಳನ್ನ ವ್ಯಕ್ತಪಡಿಸಿದ್ದಾರೆ.

ಇದೀಗ ಟೀಮ್ ಇಂಡಿಯಾದ ಮಾಜಿ ಆಟಗಾರ ಮತ್ತು ಬಿಸಿಸಿಐನ ಕ್ರಿಕೆಟ್ ಸಲಹಾ ಸಮಿತಿಯ ಸದಸ್ಯರಾದ ಮದನ್ ಲಾಲ್ ಈ ಬಗ್ಗೆ ಹೇಳಿಕೆಯನ್ನು ನೀಡಿದ್ದಾರೆ. ಟೀಮ್ ಇಂಡಿಯಾ ನಾಯಕನ ಅಗ್ರೆಸಿವ್ ವ್ಯಕ್ತಿತ್ವದ ಬಗ್ಗೆ ಸಕಾರಾತ್ಮಕ ಮಾತುಗಳನ್ನಾಡಿದ್ದಾರೆ.

ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ಮದನ್ ಲಾಲ್ ತಮ್ಮ ವ್ಯಕ್ತಿತ್ವದಲ್ಲಿ ಯಾವುದೇ ಬದಲಾವಣೆಯನ್ನು ಮಾಡಿಕೊಳ್ಳಬೇಕಾಗಿಲ್ಲ ಎಂದು ಹೇಳಿದ್ದಾರೆ. ಜೊತೆಗೆ ವಿರಾಟ್ ಕೊಹ್ಲಿ ಅಂಗಳದಲ್ಲಿರುವ ರೀತಿ ನನಗೆ ಇಷ್ಟ ಎಂದು ಮದನ್ ಲಾಲ್ ಅಭಿಪ್ರಾಯವನ್ನು ನೀಡಿದ್ದಾರೆ.

ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತಮ್ಮ ಅಗ್ರೆಶನ್‌ಅನ್ನು ಕಡಿಮೆ ಮಾಡಿಕೊಳ್ಳಬೇಕು ಎಂದು ಹಲವರು ಹೇಳುತ್ತಾರೆ. ಯಾವ ಕಾರಣಕ್ಕಾಗಿ ಅವರು ಬದಲಾಗಬೇಕು ಎಂದು ನನಗೆ ಅರ್ಥವಾಗುತ್ತಿಲ್ಲ ಎಂದು ಮದನ್‌ಲಾಲ್ ಖಾಸಗಿ ಸುದ್ದಿಸಂಸ್ಥೆಯ ಜೊತೆಗೆ ಮಾತನಾಡುತ್ತಾ ಹೇಳಿದ್ದಾರೆ

ಆರಂಭದಲ್ಲಿ ವಿರಾಟ್ ಕೊಹ್ಲಿಯ ಅಗ್ರೆಸ್ಸಿವ್‌ನೆಸ್‌ಅನ್ನು ಸಾಕಷ್ಟು ಹೊಗಳಲಾಗುತ್ತಿತ್ತು. ಅಗ್ರೆಸ್ಸಿವ್ ನಾಯಕ ಎಂದು ಖುಷಿಯಿಂದ ಹೇಳಿಕೊಳ್ಳುತ್ತಿದ್ದರು. ಆದರೆ ಈಗ ವಿರಾಟ್ ಬದಲಾಗಬೇಕು ಎಂದು ಹೇಳಿತ್ತಿದ್ದಾರೆ ಎಂದು ಬೇಸರವನ್ನು ವ್ಯಕ್ತಪಡಿಸುತ್ತಿದ್ದಾರೆ.

Story first published: Tuesday, March 17, 2020, 10:20 [IST]
Other articles published on Mar 17, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+