ಕುಂಬ್ಳೆಗೆ ಬೆಂಬಲ ವ್ಯಕ್ತಪಡಿಸಿದ 15 ವರ್ಷಗಳ ಜತೆಗಾರ
ಲಂಡನ್, ಜೂನ್ 01: ಚಾಂಪಿಯನ್ಸ್ ಟ್ರೋಫಿ 2017 ಆರಂಭಕ್ಕೂ ಮುನ್ನ ಟೀಂ ಇಂಡಿಯಾದಲ್ಲಿ ಅಪಸ್ವರ ಕೇಳಿಬಂದಿರುವುದು ಎಲ್ಲರಿಗೂ ಗೊತ್ತೇ ಇದೆ. ಟೀಂ ಇಂಡಿಯಾ ಕೋಚ್ ಅನಿಲ್ ಕುಂಬ್ಳೆ ಬೆಂಬಲಕ್ಕೆ ಹರ್ಭಜನ್ ಸಿಂಗ್ ನಿಂತಿದ್ದಾರೆ.
ನಾಯಕ ವಿರಾಟ್ ಕೊಹ್ಲಿ ಹಾಗೂ ಅನಿಲ್ ಕುಂಬ್ಳೆ ನಡುವಿನ ವಿರಸದ ಬಗ್ಗೆ ದಿನಕ್ಕೊಂದು ಕತೆಗಳು ಬರುತ್ತಿವೆ. ಟೀಂ ಇಂಡಿಯಾ ಆಟಗಾರರು, ಕುಂಬ್ಳೆ ವಿರುದ್ಧ ಬಿಸಿಸಿಸಿಗೆ ದೂರು ನೀಡಿರುವ ಸುದ್ದಿ ಬಂದ ಬಳಿಕ ಕ್ರಿಕೆಟ್ ಜಗತ್ತಿನ ಸಂಚಲನ ಮೂಡಿದೆ. ಈ ಬಗ್ಗೆ ಹಿರಿಯ ಸ್ಪಿನ್ನರ್ ಹರ್ಭಜನ್ ಸಿಂಗ್ ಅವರು ಪ್ರತಿಕ್ರಿಯಿಸಿದ್ದಾರೆ.

ಅನಿಲ್ ಭಾಯ್ ಜತೆ 15 ವರ್ಷ ರಾಷ್ಟ್ರೀಯ ತಂಡದ ಪರ ಆಡಿದ್ದೇನೆ. ಅವರೊಂದಿಗೆ ಯಾವ ಆಟಗಾರರು ಜಗಳ ವಾಡಿದ್ದನ್ನು ನಾನು ಕಂಡಿಲ್ಲ. ಬೌಲಿಂಗ್ ವಿಷಯದಲ್ಲಿ ಸಾಕಷ್ಟು ಪರಿಣತಿ ಹೊಂದಿರುವ ಅವರು, ಯುವ ಆಟಗಾರರಿಗೆ ಉತ್ತಮ ಮಾರ್ಗದರ್ಶಕರು ಹೌದು. ಇದಕ್ಕೆ ಭಾರತ ಕಳೆದ 1 ವರ್ಷದಿಂದ ಉತ್ತಮ ಪ್ರದರ್ಶನ ನೀಡುತ್ತಿರುವುದೇ ಸಾಕ್ಷಿ. ನಾನೊಬ್ಬ ಪರಿಪೂರ್ಣ ಬೌಲರ್ ಆಗಲು ಅವರ ಸಲಹೆ ಮರೆಯುವಂತಿಲ್ಲ ಎಂದಿದ್ದಾರೆ.(ಪಿಟಿಐ)
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications