ನಾವು ರನ್‌ಗಳಿಸದ ವಿರಾಟ್ ಕೊಹ್ಲಿಯನ್ನು ಬಯಸುತ್ತೇವೆ: ಪತ್ರಕರ್ತರ ಪ್ರಶ್ನೆಗೆ ಬೆನ್‌ಸ್ಟೋಕ್ಸ್ ಉತ್ತರ

ಭಾರತ ಹಾಗೂ ಇಂಗ್ಲೆಂಡ್ ನಡುವಿನ ಸರಣಿಯಲ್ಲಿ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅದ್ಭುತವಾದ ಲಯದಲ್ಲಿದ್ದು ಉತ್ತಮವಾಗಿ ರನ್‌ಗಳಸಿಯತ್ತಿದ್ದಾರೆ. ಈ ಮಧ್ಯೆ ವಿರಾಟ್ ಕೊಹ್ಲಿ ಅಂಗಳದಲ್ಲಿ ಎಂದಿನಂತೆಯೇ ಎದುರಾಳಿ ತಂಡದ ವಿರುದ್ಧ ತಮ್ಮ ಆಕ್ರಮಣಕಾರಿ ಪ್ರವೃತ್ತಿಯನ್ನೂ ತೋರುವ ಮೂಲಕ ಸವಾಲಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಇಂಗ್ಲೆಂಡ್ ಆಲ್‌ರೌಂಡರ್ ಬೆನ್ ಸ್ಟೋಕ್ಸ್‌ಗೆ ಪ್ರಶ್ನೆಯೊಂದು ಎದುರಾಗಿತ್ತು.
"ನೀವು ಉತ್ತಮವಾದ ವಿರಾಟ್ ಕೊಹ್ಲಿಯನ್ನು ಅಂಗಣದಲ್ಲಿ ನೋಡಲು ಬಯಸುತ್ತೀರಾ ಅಥವಾ ತೀಕ್ಷ್ಣವಾದ ಕೊಹ್ಲಿಯನ್ನಾ?" ಎಂಬ ಪ್ರಶ್ನೆ ಬೆನ್ ಸ್ಟೋಕ್ಸ್‌ಗೆ ಎದುರಾಗಿತ್ತು. ಈ ಪ್ರಶ್ನೆಗೆ ಇಂಗ್ಲೆಂಡ್ ಆಲ್‌ರೌಂಡರ್ ಅದ್ಭುತವಾದ ಉತ್ತರವನ್ನು ನೀಡಿದ್ದು ಇಂಗ್ಲೆಂಡ್ ತಂಡಕ್ಕೆ ಕೊಹ್ಲಿ ಎಷ್ಟು ಆತಂಕ ಮೂಡಿಸಿದ್ದಾರೆ ಎಂಬುದನ್ನು ಹೇಳುವಂತಿದೆ.
ಪತ್ರಕರ್ತರ ಪ್ರಶ್ನೆಗೆ ಬೆನ್ ಸ್ಟೋಕ್ಸ್ "ವೈಯಕ್ತಿಕವಾಗಿ ನಾನು ರನ್ ಗಳಿಸದ ವಿರಾಟ್ ಕೊಹ್ಲಿಯನ್ನು ಬಯಸುತ್ತೇವೆ. ಯಾಕೆಂದರೆ ಕೊಹ್ಲಿ ರನ್ ಗಳಿಸುವುದು ನಮಗೆ ಉತ್ತಮವಾದ ಸಂಗತಿಯಲ್ಲ" ಎಂದು ನಗುಮೊಗದಿಂದಲೇ ಉತ್ತರವನ್ನು ನೀಡಿದರು.
ಇನ್ನು ಇದೇ ಸಂದರ್ಭದಲ್ಲಿ ವಿರಾಟ್ ಕೊಹ್ಲಿಯ ಆಕ್ರಮಣಕಾರಿ ದೃಷ್ಟಿಕೋನದಿಂದಾಗಿ ಇಂಗ್ಲೆಂಡ್ ತಂಡದ ಮೇಲೆ ಯಾವುದೇ ರೀತಿಯ ಪರಿಣಾಮ ಬೀರುವುದಿಲ್ಲ. ಅವರು ವರ್ಷಗಳಿಂದಲೂ ಅದೇ ರೀತಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ ಎಂದು ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
"ಪ್ರತಿ ತಂಡ ಹಾಗೂ ಪ್ರತಿ ಆಟಗಾರನೂ ಕೂಡ ಅಂಗಳದಲ್ಲಿ ತನ್ನದೇ ರೀತಿಯಲ್ಲಿ ಕಾರ್ಯಾಚರಿಸುತ್ತಾರೆ. ಹಾಗಾಗಿ ಅವರು ಯಶಸ್ವಿಯಾಗುತ್ತಾರೆ. ಕಳೆದ ನಾಲ್ಕೈದು ವರ್ಷಗಳಿಂದೀಚೆಗೆ ನಮಗೆ ಆ ರೀತಿಯ ಕಾರ್ಯಾಚರನೆ ಕಾರ್ಯನಿರ್ವಹಿಸುವುದಿಲ್ಲ" ಎಂದು ಬೆನ್ ಸ್ಟೋಕ್ಸ್ ಹೇಳಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications