Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ನಾವು ಉತ್ತಮ ತಂಡಗಳ ಸೋಲಿಸಿ WTC ಫೈನಲ್‌ಗೆ ಬಂದಿದ್ದೇವೆ: ಯಾದವ್

We reached WTC final after defeating good teams, says Umesh Yadav

ನವದೆಹಲಿ: ಕೆಲವಾರು ವರ್ಷಗಳ ಹಿಂದೆ ಟೀಮ್ ಇಂಡಿಯಾಕ್ಕೆ ಬೌಲಿಂಗ್‌ ಬಲ ತುಂಬಿ ಮಿಂಚಿದ್ದವರು ವೇಗಿ ಉಮೇಶ್ ಯಾದವ್. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಬೆಸ್ಟ್ ಬೌಲರ್‌ಗಳ ಸಾಲಿನಲ್ಲೂ ಯಾದವ್ ಕಾಣಿಸಿಕೊಂಡಿದ್ದ ದಿನಗಳಿವೆ. ಮಧ್ಯದಲ್ಲಿ ಕೊಂಚ ದುಬಾರಿ ಬೌಲರ್ ಆಗಿದ್ದರೂ ಟೀಮ್ ಇಂಡಿಯಾಕ್ಕೆ ಯಾದವ್ ಅವರದ್ದೇ ಕೊಡುಗೆ ನೀಡಿದ್ದಾರೆ.

ಮುಂಬರಲಿರುವ ಐಸಿಸಿ ವರ್ಲ್ಡ್ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತ ಸ್ಪರ್ಧಿಸಲಿದೆ. ಈ ಪಂದ್ಯ ಕುತೂಹಲ ಮೂಡಿಸಿದೆ. ಆದರೆ ಫೈನಲ್‌ನಲ್ಲಿ ಭಾರತ ಗೆಲ್ಲಲಿದೆ. ಯಾಕೆಂದರೆ ನಮಗೆ ವರ್ಲ್ಡ್ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್ ಪಂದ್ಯ ವಿಶ್ವಕಪ್‌ನಷ್ಟೇ ಪ್ರಮುಖ ಎಂದು ಉಮೇಶ್ ಯಾದವ್ ಹೇಳಿದ್ದಾರೆ.

ಇಂಗ್ಲೆಂಡ್‌ನಲ್ಲಿ ಪಂದ್ಯ ಗೆಲ್ಲೋದು ಸಾಧ್ಯವೇ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಯಾದವ್, 'ಒಮ್ಮೆ ನೀವು ಆಡಲಾರಂಭಿಸಿದ ಮೇಲೆ ಎಂಥದ್ದೇ ಸಂದರ್ಭ ಬರಲಿ, ಎಷ್ಟೇ ಕಷ್ಟದ ಪರಿಸ್ಥಿತಿಯಲ್ಲೂ ನೀವು ಗೆಲ್ಲೋದು ಹೇಗೆ ಅನ್ನೋದನ್ನು ಅರಿತುಕೊಳ್ಳಬೇಕು. ಇಂಗ್ಲೆಂಡ್, ಆಸ್ಟ್ರೇಲಿಯಾ ಅಂಥ ತಂಡಗಳೆದುರು ಗೆದ್ದಿರುವುದು ನಮ್ಮದು ಉತ್ತಮ ಪ್ರಯಾಣ ಎಂದು ನನಗನ್ನಿಸುತ್ತದೆ. ಹೀಗಾಗಿ ತಂಡದ ಬಗ್ಗೆ ನನಗೆ ತೃಪ್ತಿಯಿದೆ. ತಂಡ ಸರಿಯಾದ ಮಾರ್ಗದಲ್ಲಿ ಸಾಗುತ್ತಿದೆ,' ಎಂದು ಎಎನ್‌ಐ ಜೊತೆ ಮಾತನಾಡಿದ ಯಾದವ್ ಹೇಳಿದ್ದಾರೆ.

ಜೂನ್ 2ರಂದು ಟೀಮ್ ಇಂಡಿಯಾ ಇಂಗ್ಲೆಂಡ್‌ಗೆ ಪ್ರವಾಸ ಹೋಗಲಿದೆ. ಅಲ್ಲಿ ಜೂನ್ 18-22ರ ವರೆಗೆ ಸೌತಾಂಪ್ಟನ್‌ನಲ್ಲಿ ಐಸಿಸಿ ವರ್ಲ್ಡ್ ಟೆಸ್ಟ್ ಚಾಂಪಿಯನ್‌ಶಿಪ್‌ ನಡೆಯಲಿದೆ. ಅದಾಗಿ ಆಗಸ್ಟ್ 4ರಿಂದ ಇಂಗ್ಲೆಂಡ್ ಮತ್ತು ಭಾರತದ ಮಧ್ಯೆ ಐದು ಪಂದ್ಯಗಳ ಟೆಸ್ಟ್‌ ಸರಣಿ ನಡೆಯಲಿದೆ. ಇಂಗ್ಲೆಂಡ್ ಪ್ರವಾಸಕ್ಕಾಗಿ ಬಿಸಿಸಿಐ ಪ್ರಕಟಿಸಿರುವ ತಂಡದಲ್ಲಿ ಉಮೇಶ್ ಯಾದವ್ ಕೂಡ ಇದ್ದಾರೆ.

Story first published: Friday, May 21, 2021, 14:40 [IST]
Other articles published on May 21, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+