ರಾಹುಲ್, ಪಂತ್‌ಗೆ ಇನ್ನೊಂದಿಷ್ಟು ಕಾಲಾವಕಾಶ ಕೊಡಬಯಸಿದ್ದೇವೆ: ಕೊಹ್ಲಿ

ವಿಶಾಖಪಟ್ನಂ, ಫೆಬ್ರವರಿ 25: ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ಆಸ್ಟ್ರೇಲಿಯಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ತಂಡದ ಕಳಪೆ ಬ್ಯಾಟಿಂಗ್‌ಗೆ ಬಗ್ಗೆ ಕಳವಳ ಇದ್ದಂತಿಲ್ಲ. ಬದಲಿಗೆ ಕೊಹ್ಲಿ ಯುವ ಬ್ಯಾಟ್ಸ್ಮನ್‌ಗಳಾದ ಕೆಎಲ್ ರಾಹುಲ್ ಮತ್ತು ರಿಷಬ್ ಪಂತ್‌ಗೆ ಇನ್ನೊಂದಿಷ್ಟು ಕಾಲಾವಕಾಶ ನೀಡಲು ಬಯಸಿರುವುದಾಗಿ ತಿಳಿಸಿದ್ದಾರೆ.
ಭಾನುವಾರ (ಫೆಬ್ರವರಿ 24) ಆಸೀಸ್ ವಿರುದ್ಧ ಮೊದಲ ಟಿ20ಯಲ್ಲಿ 3 ವಿಕೆಟ್ ಸೋಲು ಅನುಭವಿಸಿದ ಬಳಿಕ ಕೊಹ್ಲಿ ಮಾತನಾಡಿ, ಈ ಅಭಿಪ್ರಾಯ ಹಂಚಿಕೊಂಡರು. ಮುಂಬರಲಿರುವ ವಿಶ್ವಕಪ್ ಟೂರ್ನಿಯನ್ನು ಗಮನದಲ್ಲಿಟ್ಟುಕೊಂಡು ರಾಹುಲ್-ಪಂತ್‌ಗೆ ಇನ್ನಷ್ಟು ಅವಕಾಶ ನೀಡ ಬಯಸುತ್ತೇವೆ ಎಂದವರು ಹೇಳಿದರು.
ಪಂದ್ಯದಲ್ಲಿ ರಾಹುಲ್ ಉತ್ತಮ ಪ್ರದರ್ಶನ ನೀಡಿದ್ದರು. 36 ಎಸೆತಗಳಿಗೆ ರಾಹುಲ್ ಭರ್ತಿ 50 ರನ್ ಸಿಡಿಸಿದ್ದರು. ಆದರೆ ಪಂತ್ ಅನಗತ್ಯ ರನ್ ಕದಿಯಲು ಹೋಗಿ ರನ್ ಔಟ್ ಆಗಿದ್ದರು. ಇನ್ನು ಕೊಹ್ಲಿ 24, ಎಂಎಸ್ ಧೋನಿ 29 ರನ್ ಸೇರಿಸಿದ್ದು ಬಿಟ್ಟರೆ ಉಳಿದ ಬ್ಯಾಟ್ಸ್ಮನ್‌ಗಳ ಕಳಪೆ ಪ್ರದರ್ಶನ ತಂಡವನ್ನು ಸೋಲಿನಂಚಿಗೆ ತಳ್ಳಿತ್ತು.
'ರಾಹುಲ್ ಮತ್ತು ಪಂತ್‌ಗೆ ಹೆಚ್ಚಿನ ಕಾಲಾವಕಾಶ ನೀಡಲು ಬಯಸಿದ್ದೇವೆ. ರಾಹುಲ್ ನಿಜಕ್ಕೂ ಉತ್ತಮ ಆಟ ಪ್ರದರ್ಶಿಸಿದರು. ನಾವೊಂದು ವೇಳೆ ಆ ಪಿಚ್‌ನಲ್ಲಿ 150 ರನ್ ಗಳಿಸಿದ್ದರೆ, ಜಯ ನಮ್ಮದಾಗುತ್ತಿತ್ತು. ಆದರೆ ಆಸ್ಟ್ರೇಲಿಯಾ ಇನ್ನೂ ಉತ್ತಮ ಆಟದ ಮೂಲಕ ಫಲಿತಾಂಶವನ್ನು ತನ್ನಡೆಗೆ ಸೆಳೆದುಕೊಂಡಿತು' ಎಂದು ಕೊಹ್ಲಿ ಹೇಳಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications