ನಾವು ಬೌಲಿಂಗ್, ಬ್ಯಾಟಿಂಗ್‌ನಲ್ಲಿ ಬಲಿಷ್ಠರಿದ್ದೇವೆ: ರೋಹಿತ್ ಶರ್ಮಾ

ಅಬುಧಾಬಿ: ನಾವು ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಸಾಕಷ್ಟು ಬಲಿಷ್ಠರಾಗಿದ್ದೇವೆ. ಇದೇ ಕಾರಣಕ್ಕೆ ನಾವು ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ 8 ವಿಕೆಟ್‌ಗಳ ಸುಲಭ ಗೆಲುವು ದಾಖಲಿಸಿದ್ದೇವೆ ಎಂದು ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ ಹೇಳಿದ್ದಾರೆ.
ಶುಕ್ರವಾರ (ಅಕ್ಟೋಬರ್ 16) ಅಬುಧಾಬಿಯ ಶೈಕ್ ಝಾಯೆದ್ ಸ್ಟೇಡಿಯಂನಲ್ಲಿ ನಡೆದಿದ್ದ ಇಂಡಿಯನ್ ಪ್ರೀಮಿಯರ್ ಲೀಗ್ 32ನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ ಪಾರಮ್ಯ ಮೆರೆದಿತ್ತು. ಕ್ವಿಂಟನ್ ಡಿ ಕಾಕ್ ಸ್ಫೋಟಕ ಅರ್ಧ ಶತಕ (44 ಎಸೆತಗಳಿಗೆ 78 ರನ್) ಕೊಡುಗೆ ನೀಡಿದ್ದರು.
'ನಾವು ಬ್ಯಾಟಿಂಗ್‌ನಲ್ಲಿ ಬಲಿಷ್ಠರಿದ್ದೇವೆ. ಬೌಲಿಂಗ್‌ನಲ್ಲೂ ಬಲಿಷ್ಠರಾಗಿದ್ದೇವೆ. ಅದೇ ಪ್ರದರ್ಶನವನ್ನು ನಾವು ಅಲ್ಲಿ ಎದುರು ನೋಡುತ್ತಿದ್ದೆವು,' ಎಂದು ರೋಹಿತ್ ಶರ್ಮಾ ಹೇಳಿದ್ದಾರೆ. ಮೊದಲು ಬ್ಯಾಟಿಂಗ್ ಮಾಡಿದ್ದ ಕೋಲ್ಕತ್ತಾ 148 ರನ್ ಗಳಿಸಿತ್ತು. ಗುರಿ ಬೆನ್ನಟ್ಟಿದ ಮುಂಬೈ 16.5ನೇ ಓವರ್‌ನಲ್ಲೇ 149 ರನ್ ಮಾಡಿತು.
'ಆಡಿದ ನಾಲ್ಕು ಪಂದ್ಯಗಳಲ್ಲಿ ನಾಲ್ಕರಲ್ಲೂ ಗೆದ್ದಿದ್ದು ಅಂದರೆ ಸವಾಲಿನದ್ದೇ. ಆ ಗೆಲುವಿನ ಬಲವನ್ನು ಪಂದ್ಯದ ದಿನ ಹೇಗೆ ಬಳಸಿಕೊಳ್ಳುತ್ತೀರಿ ಅನ್ನೋದು ಮುಖ್ಯ. ನಾವು ಅದನ್ನು ಚೆನ್ನಾಗಿ ಬಳಸಿಕೊಂಡಿದ್ದೇವೆ,' ಎಂದು ರೋಹಿತ್ ವಿವರಿಸಿದ್ದಾರೆ. ಮುಂಬೈ ತಂಡ ಹಿಂದೆ ಆಡಿದ ಐದು ಪಂದ್ಯಗಳಲ್ಲೂ ಸತತ ಗೆಲುವು ಕಂಡಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications