Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಪಿಚ್ ದೂಷಿಸುವ ಮೂಲಕ ನಾವು ನಮಗೇ ಅಪಚಾರ ಮಾಡುತ್ತಿದ್ದೇವೆ: ಇಂಗ್ಲೆಂಡ್ ಬ್ಯಾಟಿಂಗ್ ಕೋಚ್

We would be doing ourselves a disservice by blaming the pitch says england batting coach Trott

ಇಂಗ್ಲೆಂಡ್ ಕ್ರಿಕೆಟ್ ತಂಡದ ಬ್ಯಾಟಿಂಗ್ ಕೋಚ್ ಜೊನಾಥನ್ ಟ್ರಾಟ್ ಪಿಚ್ ಬಗ್ಗೆ ಎದ್ದಿರುವ ವಿವಾದಕ್ಕೆ ಪ್ರತಿಕ್ರಿಯಿಸಿದ್ದಾರೆ. ಮೊಟೇರಾ ಪಿಚ್ ಕಠಿಣವಾಗಿತ್ತು ಎಂದು ಜೊನಾಥನ್ ಟ್ರಾಟ್ ಒಪ್ಪಿಕೊಂಡಿದ್ದಾರೆ. ಆದರೆ 22 ಅಡಿಗಳ ಪಿಚ್‌ಅನ್ನು ದೂಷಿಸಿ ಅಪಚಾರ ಮಾಡುವ ಬದಲಿಗೆ ನಮ್ಮ ಸಾಮರ್ಥ್ಯವನ್ನು ವೃದ್ಧಿಸಿಕೊಳ್ಳಬೇಕು ಎಂದಿದ್ದಾರೆ.

ಪಿಚ್ ವಿಚಾರವಾಗಿ ಕೇಳಿ ಬರುತ್ತಿರುವ ಟೀಕೆಗಳಿಗೆ ಉತ್ತರಿಸಲು ಜೊನಾಥನ್ ಟ್ರಾಟ್ ನಿರಾಕರಿಸಿದರು." ಟೀಕೆಗಳನ್ನು ಮಾಡುವ ಬದಲಿಗೆ ನಾವು ಯಾವುದನ್ನು ಚೆನ್ನಾಗಿ ಮಾಡಬಹುದಾಗಿತ್ತು ಎಂಬ ಕಡೆಗೆ ಗಮನ ಹರಿಸಲು ಬಯಸುತ್ತೇನೆ" ಎಂದು ಜೊನಾಥನ್ ಟ್ರಾಟ್ ಹೇಳಿದ್ದಾರೆ.

ಮೂರನೇ ಟೆಸ್ಟ್ ಪಂದ್ಯದಲ್ಲಿ ಮೊದಲ ಇನ್ನಿಂಗ್ಸ್‌ನಲ್ಲಿ ನಾವು 200ರಿಂದ 259 ರನ್ ಗಳಿಸಿದ್ದರೆ ಅದು ವಿಭಿನ್ನ ಆಟವಾಗಿರುತ್ತಿತ್ತು. ಎರಡನೇ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ ವೇಳೆ ವಿಭಿನ್ನ ಮನಸ್ಥಿತಿಯನ್ನು ಹೊಂದಿರುತ್ತಿದ್ದೆವು ಎಂದು ಜೊನಾಥನ್ ಟ್ರಾಟ್ ಹೇಳಿದ್ದಾರೆ.

ಪಿಚ್‌ಅನ್ನು ನೋಡಿಕೊಂಡು ಟೀಕೆಯನ್ನು ಮಾಡುವುದು ನನ್ನ ಪ್ರಕಾರ ನಾವು ನಮಗೇ ಮಾಡಿಕೊಳ್ಳುವ ಅಪಚಾರ. ಹೌದು, ಚೆಂಡು ತಿರುವುಗಳನ್ನು ಪಡೆದುಕೊಳ್ಳುತ್ತಿತ್ತು. ಕೆಲ ಎಸೆತಗಳು ಸ್ಕಿಡ್ ಆಗುತ್ತಿದ್ದವು. ಆದರೆ ಇದು ಎರಡು ತಂಡಗಳಿಗೂ ಸಮವಾಗಿದ್ದವು ಎಂದು ಟ್ರಾಟ್ ಹೇಳಿದ್ದಾರೆ.

ಇನ್ನು ಎರಡನೇ ದಿನಕ್ಕೆ ಪಂದ್ಯ ಅಂತ್ಯವಾದ ಬಗ್ಗೆ ಟ್ರಾಟ್ ಪ್ರತಿಕ್ರಿಯಿಸಿದರು. "ಪಂದ್ಯ ಎರಡನೇ ದಿನದಲ್ಲಿ ಅಂತ್ಯವಾಗಿರಬಹುದು ಅಥವಾ ಏನೇ ಆಗಿರಬಹುದು. ಆದರೆ ನೀವು ಯಾವಾಗಲೂ ಉತ್ತಮ ಕ್ರಿಕೆಟ್ ಆಟವನ್ನು ನೀಡಲು ಬಯಸಬೇಕು. ಅದು ಬ್ಯಾಟ್ ಮತ್ತು ಚೆಮಡಿನ ನಡುವಿನ ಕಠಿಣ ಹೋರಾಟವಾಗಿರಬೇಕು. ಈ ಸರಣಿಯಲ್ಲಿ ಬೌಲರ್‌ಗಳು ಮೇಲುಗೈ ಸಾಧಿಸಿದ್ದಾರೆ. ಅಂತಿಮ ಪಂದ್ಯದಲ್ಲಿ ಏನಾಗಲಿದೆ ಎಂಬುದನ್ನು ನಾವು ಕಾದು ನೋಡೋಣ ಎಂದು ಜೊನಾಥನ್ ಟ್ರಾಟ್ ಹೇಳಿದ್ದಾರೆ.

Story first published: Sunday, February 28, 2021, 14:03 [IST]
Other articles published on Feb 28, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+