ODI World Cup: ವಿಶ್ವಕಪ್ 2023ರ ಟಿಕೆಟ್ ನೋಂದಣಿ ಶುರು: ವೆಬ್‌ಸೈಟ್ ವಿಳಾಸ, ಬುಕಿಂಗ್ ಮಾಹಿತಿ
ಐಸಿಸಿ ಏಕದಿನ ವಿಶ್ವಕಪ್ 2023ರ ಆರಂಭಕ್ಕೆ ದಿನಗಣನೆ ಆರಂಭವಾಗಿದೆ. ದೇಶದ 12 ನಗರಗಳಲ್ಲಿ ವಿಶ್ವಕಪ್ ಪಂದ್ಯಗಳು ನಡೆಯಲಿದ್ದು, ಅಭಿಮಾನಿಗಳು ಪಂದ್ಯವನ್ನು ಸ್ಟೇಡಿಯಂನಲ್ಲಿ ವೀಕ್ಷಿಸಲು ತುದಿಗಾಲಲ್ಲಿ ಕಾಯುತ್ತಿದ್ದಾರೆ. ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದ ದಿನ ಬಂದಿದ್ದು, ಆಗಸ್ಟ್ 15ರಿಂದ ವಿಶ್ವಕಪ್ ಪಂದ್ಯಗಳ ಟಿಕೆಟ್‌ಗಾಗಿ ನೋಂದಣಿ ಆರಂಭವಾಗಿದೆ.
ಐಸಿಸಿ ವೆಬ್‌ಸೈಟ್‌ನಲ್ಲಿ ವಿಶ್ವಕಪ್ 2023 ಗಾಗಿ ಟಿಕೆಟ್‌ಗಳನ್ನು ಪೂರ್ವ-ನೋಂದಣಿ ಮಾಡಲು ಇಂದಿನಿಂದ ಅವಕಾಶ ಮಾಡಿಕೊಡಲಾಗಿದೆ. ಮಧ್ಯಾಹ್ನ 3.30ರಿಂದ ನೋಂದಣಿ ಆರಂಭವಾಗಿದ್ದು, ಆಗಸ್ಟ್ 25ರಿಂದ ಟಿಕೆಟ್‌ಗಳನ್ನು ಮಾರಾಟ ಮಾಡಲಿದೆ.

ಭಾರತ ತಂಡ ವಿವಿಧ ವಿಶ್ವಕಪ್ ಸ್ಥಳಗಳಲ್ಲಿ ಒಂಬತ್ತು ಪಂದ್ಯಗಳನ್ನು ಆಡಲಿದೆ. ಪ್ರತಿ ಆಟದ ಟಿಕೆಟ್ ಬುಕಿಂಗ್ ಅನ್ನು ಬೇರೆ ಬೇರೆ ದಿನಾಂಕಗಳಲ್ಲಿ ಮಾಡಲಾಗುತ್ತದೆ. ಅಕ್ಟೋಬರ್ 5ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಇಂಗ್ಲೆಂಡ್-ನ್ಯೂಜಿಲೆಂಡ್ ನಡುವಿನ ಪಂದ್ಯದ ಮೂಲಕ ಏಕದಿನ ವಿಶ್ವಕಪ್‌ಗೆ ಚಾಲನೆ ಸಿಗಲಿದೆ.
ಐಪಿಎಲ್ 2023 ರ ಋತುವಿನಲ್ಲಿ ಕಂಡುಬಂದ ಟಿಕೆಟ್‌ಗಳಿಗೆ ಭಾರಿ ಬೇಡಿಕೆಯ ನಡುವೆ ಕಾಲ್ತುಳಿತದಂತಹ ಪರಿಸ್ಥಿತಿಯನ್ನು ತಪ್ಪಿಸಲು ಬಿಸಿಸಿಐ ಮತ್ತು ಐಸಿಸಿ ಟಿಕೆಟ್‌ಗಳನ್ನು ಸುಧಾರಿತ ರೀತಿಯಲ್ಲಿ ಮಾರಾಟ ಮಾಡಲು ನಿರ್ಧರಿಸಿದೆ. ಮೊದಲ ಲಾಟ್‌ನಲ್ಲಿ, ಅಭಿಮಾನಿಗಳು ಆಗಸ್ಟ್ 25 ರಂದು ಭಾರತ ಹೊರತುಪಡಿಸಿ ಉಳಿದ ತಂಡಗಳು ಆಡುವ ಎಲ್ಲಾ ಪಂದ್ಯಗಳಿಗೆ ಟಿಕೆಟ್‌ಗಳನ್ನು ಖರೀದಿಸಬಹುದು. ಆಗಸ್ಟ್ 31 ರಿಂದ ಸೆಪ್ಟೆಂಬರ್ 3 ರವರೆಗೆ, ಅಭಿಮಾನಿಗಳು ಭಾರತದ ಪಂದ್ಯಗಳ ಟಿಕೆಟ್‌ಗಳನ್ನು ಬುಕ್ ಮಾಡಬಹುದು.
ಟಿಕೆಟ್ ಮಾರಾಟದಲ್ಲಿ ಗೊಂದಲ ತಪ್ಪಿಸಲು ಮಾರಾಟ ವಿಧಾನವನ್ನು ವಿನ್ಯಾಸಗೊಳಿಸಲಾಗಿದೆ. ಅಭಿಮಾನಿಗಳ ಅನುಕೂಲಕ್ಕಾಗಿ ಸಿಸ್ಟಮ್ ಅನ್ನು ನಿರ್ವಹಿಸಲು ಇದು ಅತ್ಯಂತ ಪರಿಣಾಮಕಾರಿ ಮಾರ್ಗವಾಗಿದೆ ಎಂದು ಅಧಿಕಾರಿಗಳಿ ತಿಳಿಸಿರುವುದಾಗಿ ಕ್ರಿಕ್‌ಬುಜ್ ವರದಿ ಮಾಡಿದೆ.
ಈ ವೆಬ್‌ಸೈಟ್‌ನಲ್ಲಿ ನೋಂದಣಿ ಮಾಡಿಕೊಳ್ಳಿ
https://www.cricketworldcup.com/register ವೆಬ್‌ಸೈಟ್‌ಗೆ ತೆರಳಿ ಟಿಕೆಟ್‌ಗಾಗಿ ನೋಂದಾಯಿಸಿಕೊಳ್ಳಬೇಕು. ಇದು ಅವರಿಗೆ ಮೊದಲು ಟಿಕೆಟ್ ಸುದ್ದಿಯನ್ನು ಸ್ವೀಕರಿಸಲು ಮತ್ತು ವಿಶ್ವಕಪ್‌ನಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಸಹಾಯ ಮಾಡುತ್ತದೆ. ಅಭಿಮಾನಿಗಳು ಬಾಕ್ಸ್ ಆಫೀಸ್ ಕೌಂಟರ್‌ಗಳಿಂದ ಟಿಕೆಟ್‌ಗಳನ್ನು ಸಂಗ್ರಹಿಸಬೇಕಾಗಿರುವುದರಿಂದ ಯಾವುದೇ ಇ-ಟಿಕೆಟ್ ಸೌಲಭ್ಯಗಳು ಇರುವುದಿಲ್ಲ. ಅಭಿಮಾನಿಗಳು ಟಿಕೆಟ್‌ಗಳನ್ನು ಕೊರಿಯರ್ ನಲ್ಲಿ ಸ್ವೀಕರಿಸುವ ಅಥವಾ ಕ್ರೀಡಾಂಗಣದಲ್ಲಿರುವ ಬಾಕ್ಸ್ ಆಫೀಸ್ ಕೌಂಟರ್‌ಗಳಿಂದ ಸಂಗ್ರಹಿಸುವ ಆಯ್ಕೆಯನ್ನು ಹೊಂದಿರುತ್ತಾರೆ.
ಭಾರತ-ಪಾಕಿಸ್ತಾನ ನಡುವಿನ ಪಂದ್ಯ ಅಕ್ಟೋಬರ್ 14ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದ್ದು ವಿಶ್ವದಾಖಲೆಯ ಸಂಖ್ಯೆಯಲ್ಲಿ ಅಭಿಮಾನಿಗಳು ಕ್ರೀಡಾಂಗಣದಲ್ಲಿ ಸೇರಲಿದ್ದಾರೆ. ಈ ಒಂದು ಪಂದ್ಯದ ಟಿಕೆಟ್‌ಗಾಗಿ ಭಾರಿ ಪೈಪೋಟಿ ಉಂಟಾಗಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications