For Quick Alerts
ALLOW NOTIFICATIONS  
For Daily Alerts
 

10 ವರ್ಷದ ಹಿಂದೆ ಇಂಟರ್ನೆಟ್ ನಲ್ಲಿ ಧೂಳೆಬ್ಬಿಸಿದ್ದ ವಿರಾಟ್ ಕೊಹ್ಲಿಯ ಆ ವಾರೆ ನೋಟ!!

By ಮೈಖೇಲ್ ಡೆಸ್ಕ್

ಕ್ರಿಕೆಟ್ ಮೈದಾನದಲ್ಲಿ ಇದ್ದಾಗ ವಿರಾಟ್ ಕೊಹ್ಲಿಯ ರೀತಿಯಲ್ಲಿ ಅಗ್ರೆಸ್ಸೀವ್ ಆಗಿ ಇರಬೇಕು ಎಂದು ಪಾಕಿಸ್ತಾನದ ಮಾಜಿ ವಿಕೆಟ್ ಕೀಪರ್ ಕಮ್ರನ್ ಅಕ್ಮಲ್, ಟೀಂ ಇಂಡಿಯಾದ ನಾಯಕ ರೋಹಿತ್ ಶರ್ಮಾಗೆ ಸಲಹೆಯನ್ನು ನೀಡಿದ್ದರು. ಜೊತೆಗೆ, ರೋಹಿತ್ ಶರ್ಮಾ ನಾಯಕತ್ವ ಗುಣವನ್ನು ಇನ್ನೂ ಬೆಳೆಸಿಕೊಳ್ಲಬೇಕು ಎನ್ನುವ ಮಾತನ್ನೂ ಅಕ್ಮಲ್ ಹೇಳಿದ್ದರು.

ಟೀಂ ಇಂಡಿಯಾ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ಮಾಜಿ ನಾಯಕ ವಿರಾಟ್ ಕೊಹ್ಲಿ ಸದಾ ಸುದ್ದಿಯಲ್ಲಿ ಇರುವವರು. ಮೈದಾನದಲ್ಲಿನ ಚುರುಕುತನದ ಮತ್ತು ಆಕ್ರಮಣಕಾರಿ ವರ್ತನೆಯಿಂದ ಹಲವು ಬಾರಿ ಟೀಕೆಗೂ ಒಳಗಾದವರು. ಆದರೆ, ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದ ಕೊಹ್ಲಿ ತನ್ನ ತನವನ್ನು ಬಿಟ್ಟು ಕೊಡದೇ ತಮ್ಮದೇ ಸ್ಟೈಲಿನಲ್ಲಿ ಇರುವವರು.

Week Look Of Virat Kohli

ಹೆಚ್ಚಾಗಿ ವೈಯಕ್ತಿಕ ಹಿತಾಶಕ್ತಿಗೆ ತಲೆಕೆಡಿಸಿಕೊಳ್ಳದೇ ತಂಡ ಗೆಲ್ಲಬೇಕು ಎನ್ನುವ ಅವರ ಆಟದಿಂದಾಗಿ ಅಪಾರ ಅಭಿಮಾನಿಗಳನ್ನು ಹೊಂದಿರುವ ವಿರಾಟ್ ಕೊಹ್ಲಿಯ ಒಂದು ವಾರೆ ನೋಟ ಹತ್ತು ವರ್ಷದ ಹಿಂದೆ ಅಂತರ್ಜಾಲದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು.

ಕಿಂಗ್ಸ್ ಆಫ್ ಗುಡ್ ಟೈಮ್ ಎಂದು ಒಂದು ಕಾಲದಲ್ಲಿ ಹೆಸರುವಾಸಿಯಾಗಿದ್ದ ಕಿಂಗ್ ಫಿಷರ್ ಒಡೆಯ ವಿಜಯ್ ಮಲ್ಯ ಮತ್ತು ಅವರ ಪುತ್ರ ಸಿದ್ದಾರ್ಥ್, ಐಪಿಎಲ್ ನಲ್ಲಿ ತುಂಬಾ ತೊಡಗಿಸಿಕೊಂಡಿದ್ದ ಸಮಯವದು. ರಾಯಲ್ ಚಾಲೆಂಜರ್ಸ್ ಬ್ಯಾಂಗಲೋರಿನ ಮಾಲೀಕರಾಗಿದ್ದ ವಿಜಯ್ ಮಲ್ಯ ಮತ್ತವರ ಪುತ್ರ ಸಿದ್ದಾರ್ಥ್, ಸದಾ ಚಿತ್ರನಟಿಯರ ಜೊತೆ ಗ್ಯಾಲರಿಯಲ್ಲಿ ಕೂತು ಪಂದ್ಯ ವೀಕ್ಷಿಸುತ್ತಿದ್ದರು.

2013ರ ಅವಧಿಯಲ್ಲಿ ವಿರಾಟ್ ಕೊಹ್ಲಿ, ಆರ್ಸಿಬಿ ತಂಡದ ನಾಯಕರಾಗಿದ್ದರು. ಸ್ಯಾಂಡಲ್ ವುಡ್ ತಾರೆಯರಾದ ಪವರ್ ಸ್ಟಾರ್ ಪುನೀತ್ ರಾಜಕುಮಾರ್, ರಮ್ಯಾ, ರಾಗಿಣಿ ದ್ವಿವೇದಿ, ಸಂಜನಾ ಗಲ್ರಾನಿ ಮುಂತಾದವರು ತಂಡದ ಪರವಾಗಿ ಪ್ರಚಾರದಲ್ಲಿದ್ದರು. ಇದಾದ ನಂತರ ಬಾಲಿವುಡ್ ನಟಿಯರಾದ ಕತ್ರಿನಾ ಕೈಫ್ ಮತ್ತು ದೀಪಿಕಾ ಪಡುಕೋಣೆ ಕೂಡಾ ಬೆಂಗಳೂರು ತಂಡಕ್ಕೆ ಚಿಯರ್ಸ್ ಎನ್ನುತ್ತಾ ಮೈದಾನದಲ್ಲಿ ಆಟಗಾರರನ್ನು ಹುರಿದುಂಬಿಸುತ್ತಿದ್ದರು.

Week Look Of Virat Kohli

ಹತ್ತು ವರ್ಷದ ಹಿಂದೆ ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ರಾಯಲ್ ಚಾಲೆಂಜರ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ತಂಡದ ನಡುವೆ ಮ್ಯಾಚ್ ನಡೆಯುತ್ತಿತ್ತು. ಪಂದ್ಯಕ್ಕೂ ಮುನ್ನ ಆಟಗಾರರ ಮೈದಾನದಲ್ಲಿನ ವಾರ್ಮ್ ಅಪ್ ವೇಳೆ ಸ್ಯಾಂಡಲ್ ವುಡ್ ನಟಿ ರಾಗಿಣಿ ದ್ವಿವೇದಿ ತುಂಡುಡುಗೆ ತೊಟ್ಟುಕೊಂಡು ಮೈದಾನಕ್ಕೆ ಬರುತ್ತಾರೆ.

ರಾಗಿಣಿಯನ್ನು ವಾರೆ ನೋಟದಿಂದ ವಿರಾಟ್ ಕೊಹ್ಲಿ ನೋಡುವ ದೃಶ್ಯ ಕ್ಯಾಮರಾ ಕಣ್ಣಲ್ಲಿ ಸೆರೆಯಾಗಿತ್ತು. ಇದೇ ರೀತಿ ಸಂಜನಾ ಗಲ್ರಾನಿ ಮೈದಾನಕ್ಕೆ ಬಂದಾಗಲೂ ಕೊಹ್ಲಿ ನೋಟದ ಪಿಚ್ಚರ್ ಫುಲ್ ವೈರಲ್ ಆಗಿತ್ತು. 2013ರ ದೃಶ್ಯ ಇದಾಗಿತ್ತು, ಡಿಸೆಂಬರ್ 2017ರಲ್ಲಿ ಕೊಹ್ಲಿಗೆ ಅನುಷ್ಕಾ ಶರ್ಮಾ ಜೊತೆ ಮದುವೆಯಾಗಿತ್ತು.

Story first published: Monday, July 10, 2023, 11:43 [IST]
Other articles published on Jul 10, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+