Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಸೇನೆಯಲ್ಲಿರುವ ಎಂಎಸ್ ಧೋನಿ ನೆನೆದು ಸಂದೇಶ ಬರೆದ ಪತ್ನಿ ಸಾಕ್ಷಿ ಧೋನಿ

ಧೋನಿಯನ್ನು ಮಿಸ್ ಮಾಡಿಕೊಳ್ಳುತ್ತಿರುವ ಸಾಕ್ಷಿ ಮಾಡಿದ್ದೇನು ಗೊತ್ತಾ..? | Oneindia Kannada
‘Welcome home red beast’: MS Dhoni gets new car, Sakshi shares image

ನವದೆಹಲಿ, ಆಗಸ್ಟ್ 10: ಟೀಮ್ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿಗೆ ಬೈಕ್‌, ಕಾರ್‌ಗಳ ಬಗೆಗಿನ ಕ್ರೇಝ್‌ ಬಗ್ಗೆ ಹೆಚ್ಚಿನವರಿಗೆ ಗೊತ್ತಿದೆ. ಸದ್ಯ ಕಾಶ್ಮೀರದಲ್ಲಿ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಧೋನಿಯನ್ನು ನೆನೆದು ಅವರ ಪತ್ನಿ ಸಾಕ್ಷಿ ಧೋನಿ ಇನ್‌ಸ್ಟಾಗ್ರಾಮ್‌ನಲ್ಲಿ ಸಂದೇಶವನ್ನು ಬರೆದುಕೊಂಡಿದ್ದಾರೆ.

ಕಾರ್‌ ಪ್ರಿಯ ಧೋನಿ ಮನೆಗೆ ಹೊಸದೊಂದು ಅತಿಥಿ ಬಂದಿದೆ. ಗ್ರ್ಯಾಂಡ್ ಚೆರೋಕೀ ಎನ್ನುವ ನೂತನ ಕಾರೊಂದು ಧೋನಿ ಮನೆ ತಲುಪಿದೆ. ಹೊಸ ಕಾರಿನ ಫೋಟೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಾಕಿಕೊಂಡಿರುವ ಸಾಕ್ಷಿ, 'ವೆಲ್‌ಕಮ್ ಹೋಮ್ #ರೆಡ್‌ಬೀಸ್ಟ್! ನಿನ್ನ ಆಟಿಕೆ ಕೊನೆಗೂ ಮನೆಗೆ ಬಂದಿದೆ ಧೋನಿ. ನಿಜಕ್ಕೂ ನಿನ್ನನ್ನು ಮಿಸ್‌ ಮಾಡಿಕೊಳ್ಳುತ್ತಿದ್ದೇನೆ' ಅಂತ ಸಾಲನ್ನು ಬರೆದುಕೊಂಡಿದ್ದಾರೆ.

ನಾಲ್ಕು ಚಕ್ರಗಳ ವಾಹನಗಳನ್ನು ತೆಗೆದುಕೊಂಡರೆ ಫೆರಾರಿ 599 ಜಿಟಿಒ, ಹಮ್ಮರ್ ಎಚ್‌2, ಜಿಎಂಸಿ ಸಿಯೆರಾ, ದ್ವಿಚಕ್ರ ವಾಹನಗಳಿಗೆ ಬಂದರೆ ಕವಾಸಕಿ ನಿಂಜ ಎಚ್‌2, ಕಾನ್ಫಿಡರೇಟ್ ಹೆಲ್‌ಕಾಟ್, ಬಿಎಸ್‌ಎ, ಸುಝುಕಿ ಹಯಾಬುಝ, ನಾರ್ಟನ್ ವಿಂಟೇಜ್ ಇಂಥ ದೊಡ್ಡ ಕಂಪನಿಗಳ ವಾಹನಗಳ ಮಾಲಕತ್ವವನ್ನು ಧೋನಿ ಹೊಂದಿದ್ದಾರೆ.

ಅಂದ್ಹಾಗೆ ಧೋನಿ ಮನೆಗೆ ಬಂದಿರುವ ಜೀಪ್‌ ಮಾದರಿಯ 'ಗ್ರ್ಯಾಂಡ್ ಚೆರೋಕೀ' ಕಾರಿನ ಬೆಲೆ ಭಾರತದಲ್ಲಿ ಸುಮಾರು 80-90 ಲಕ್ಷ ರೂ. ಭಾರತೀಯ ಸೇನೆಯಲ್ಲಿ ಗೌರವ ಲೆಫ್ಟಿನೆಂಟ್ ಆಗಿರುವ ಧೋನಿ ತಾನು 2 ತಿಂಗಳ ಕಾಲ ಸೇವೆಯಲ್ಲಿ ಸೇನೆ ಸಲ್ಲಿಸಲು ಬಯಸಿರುವುದರಿಂದ ಅವರಿಗೆ ಕಾಶ್ಮೀರದಲ್ಲಿ ಗಸ್ತು ತಿರುಗುವ, ಕಾವಲು ಕಾಯುವ ಜವಾಬ್ದಾರಿ ನೀಡಲಾಗಿದೆ.

Story first published: Saturday, August 10, 2019, 17:24 [IST]
Other articles published on Aug 10, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+