ಟೀಮ್ ಇಂಡಿಯಾದ ಸ್ಪಿನ್ ಬೌಲರ್ ವರುಣ್ ಚಕ್ರವರ್ತಿ ಇತ್ತೀಚಿಗೆ ಅಮೋಘ ಪ್ರದರ್ಶನ ನೀಡಿ ಗಮನ ಸೆಳೆದಿದ್ದರು. ಇವರು ತವರಿನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧ ಟಿ20 ಸರಣಿಯಲ್ಲಿ ಸ್ಥಿರ ಪ್ರದರ್ಶನ ನೀಡಿ ಎಲ್ಲರ ಗಮನ ಸೆಳೆದಿದ್ದರು. ಇವರ ಸ್ಥಿರ ಪ್ರದರ್ಶನದ ಫಲವಾಗಿ ಇವರನ್ನು ಐಸಿಸಿ ತಿಂಗಳು ಆಟಗಾರರ ಪ್ರಶಸ್ತಿಗೆ ನಾಮ ನಿರ್ದೇಶನ ಮಾಡಲಾಗಿತ್ತು. ಆದರೆ ಈಗ ನಿರಾಸೆ ಆಗಿದೆ.
ಭಾರತದಲ್ಲಿ ನಡೆದಿದ್ದ ಇಂಗ್ಲೆಂಡ್ ವಿರುದ್ಧ 5 ಪಂದ್ಯಗಳ ಸರಣಿಯಲ್ಲಿ ವರುಣ್ ಚಕ್ರವತ್ತಿ 14 ವಿಕೆಟ್ ಪಡೆದು ಅಬ್ಬರಿಸಿದ್ದರು. ಅಲ್ಲದೆ ಈ ವೇಳೆ ಒಮ್ಮೆ ಐದು ವಿಕೆಟ್ ಸಾಧನೆ ಮಾಡಿದ್ದರು. ಇವರ ಅಮೋಘ ಪ್ರದರ್ಶನದ ಫಲವಾಗಿ ಇವರನ್ನು ಐಸಿಸಿ ತಿಂಗಳು ಆಟಗಾರ ಪ್ರಶಸ್ತಿಗೆ ನಾಮ ನಿರ್ದೇಶನ ಮಾಡಲಾಗಿತ್ತು. ಆದರೆ ಜನವರಿ ತಿಂಗಳ ಆಟಗಾರ ಪ್ರಶಸ್ತಿಯನ್ನು ವೆಸ್ಟ್ ಇಂಡೀಸ್ ತಂಡದ ಸ್ಪಿನ್ ಬೌಲರ್ ಜೊಮ್ಮೆಲ್ ವಾರಿಕನ್ ಪಡೆದಿದ್ದಾರೆ.

ಈ ಬಾರಿ ಪ್ರಶಸ್ತಿಗೆ ನಾಮ ನಿರ್ದೇಶನಗೊಂಡ ಆಟಗಾರರು ಎಲ್ಲರೂ ಸ್ಪಿನ್ ಬೌಲರ್‌ಗಳೇ ಆಗಿರುವುದು ವಿಶೇಷ. ವೆಸ್ಟ್ ಇಂಡೀಸ್ ತಂಡದ ಜೋಮ್ಮೆಲ್ ವಾರಿಕನ್ ಪಾಕಿಸ್ತಾನ ವಿರುದ್ಧದ ಟೆಸ್ಟ್ ಸರಣಿಯಲ್ಲಿ 19 ವಿಕೆಟ್ ಪಡೆದು ಅಬ್ಬರಿಸಿದ್ದರು. ಇವರಿಗೆ ಈ ಪ್ರಶಸ್ತಿ ಸಂದಿದೆ. ಅಸಲಿಗೆ ವರುಣ್ ಚಕ್ರವರ್ತಿ ಅವರನ್ನು ಐಸಿಸಿ ತಿಂಗಳು ಆಟಗಾರ ಪ್ರಶಸ್ತಿಯ ಪ್ರಬಲ ಸ್ಪರ್ಧಿ ಎಂದು ಪರಿಗಣಿಸಲಾಗಿತ್ತು. ಆದರೆ ಈಗ ವರುಣ್‌ಗೆ ನಿರಾಸೆ ಆಗಿದೆ. ಇನ್ನು ಪಾಕ್ ಆಟಗಾರ ನೋಮನ್ ಅಲಿಗೂ ಆಘಾತವಾಗಿದೆ.
ಈ ಪ್ರಶಸ್ತಿ ಸಿಕ್ಕಿರುವುದು ನಿಜಕ್ಕೂ ಸಂತಸ ತಂದಿದೆ. ಈ ವರ್ಷ ಟೆಸ್ಟ್ ಕ್ರಿಕೆಟ್‌ನಲ್ಲಿ ಐದು ವಿಕೆಟ್ ಪಡೆಯುವುದೇ ನನ್ನ ಗುರಿಯಾಗಿತ್ತು. ಇದನ್ನು ಪಾಕ್ ವಿರುದ್ಧ ಸಾಧಿಸಿದ ಸಮಾಧಾನ ಇದೆ ಎಂದು ವೆಸ್ಟ್ ಇಂಡೀಸ್ ಸ್ಪಿನ್ನರ್ ಜೋಮೆಲ್ ವಾರಿಕನ್ ತಿಳಿಸಿದ್ದಾರೆ. ಈ ಸಾಧನೆ ಕ್ರಿಕೆಟ್ ಪ್ರಯಾಣದ ಸಣ್ಣ ಹೆಜ್ಜೆ ಎಂದು ನೋಡುತ್ತೇನೆ. ಈ ಪ್ರಶಸ್ತಿ ಮುಂದಿನ ದಿನಗಳಲ್ಲಿ ನನ್ನ ಆತ್ಮ ವಿಶ್ವಾಸವನ್ನು ವೃದ್ಧಿಸಲಿದೆ. ಪಾಕ್ ವಿರುದ್ಧದ ಸರಣಿಯಲ್ಲಿ ಸ್ಥಿರ ಪ್ರದರ್ಶನ ನೀಡುವುದಾಗಿ ನಾನು ನಾಯಕನಿಗೆ ಮಾತು ಕೊಟ್ಟಿದ್ದೇ ಎಂದು ವಿಂಡೀಸ್ ಪ್ಲೇಯರ್ ತಿಳಿಸಿದ್ದಾರೆ.

ವರುಣ್ ಚಕ್ರವರ್ತಿ ಇಂಗ್ಲೆಂಡ್ ವಿರುದ್ಧ ಟಿ20 ಸರಣಿಯಲ್ಲಿ ಅಮೋಘ ಪ್ರದರ್ಶನ ನೀಡಿದರು. ಪರಿಣಾಮ 5 ಟಿ20 ಪಂದ್ಯಗಳಲ್ಲಿ ವರುಣ್ ಚಕ್ರವರ್ತಿ 9.86 ಸರಾಸರಿಯಲ್ಲಿ 14 ವಿಕೆಟ್‌ಗಳನ್ನು ಪಡೆದಿದ್ದಾರೆ. ಇವರ ಅಮೋಘ ಪ್ರದರ್ಶನದ ಫಲವಾಗಿ ಇವರನ್ನು, ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಗೂ ತಂಡವನ್ನು ಸೇರಿಕೊಂಡರು. ಅಲ್ಲದೆ ಕಟಕ್‌ನಲ್ಲಿ ನಡೆದ ಪಂದ್ಯದಲ್ಲಿ ಭಾರತದ ಪರ ಪದಾರ್ಪಣೆ ಸಹ ಮಾಡಿದರು. ಆದರೆ ಟಿ20 ಕ್ರಿಕೆಟ್‌ನಲ್ಲಿ ನೀಡಿದ ಪ್ರದರ್ಶನವನ್ನು ಈ ಫಾರ್ಮೆಟ್‌ನಲ್ಲಿ ನೀಡುವಲ್ಲಿ ವಿಫಲರಾದರು.