For Quick Alerts
ALLOW NOTIFICATIONS  
For Daily Alerts
 

ಐಪಿಎಲ್‌ನಲ್ಲಿ ಯಾವತ್ತಿಗೂ ಈ ತಂಡವೇ ನನಗೆ ನಂಬರ್ 1: ಕ್ರಿಸ್ ಗೇಲ್ ಹೇಳಿಕೆ

West Indies Legend Chris Gayle said Royal Challengers Bangalore will always be my no 1 team in IPL

ವೆಸ್ಟ್ ಇಂಡೀಸ್‌ನ ದಿಗ್ಗಜ ಕ್ರಿಕೆಟಿಗ ಕ್ರಿಸ್ ಗೇಲ್ ಐಪಿಎಲ್‌ನಲ್ಲಿ ಸುದೀರ್ಘ ಕಾಲ ಭಾಗಿಯಾಗಿದ್ದು ಭಾರತೀಯ ಕ್ರಿಕೆಟ್ ಅಭಿಮಾನಿಗಳ ಪಾಲಿಗೆ ಹತ್ತಿರವಾಗಿದ್ದಾರೆ. ತನ್ನ ಸ್ಪೋಟಕ ಬ್ಯಾಟಿಂಗ್‌ನ ಕಾರಣದಿಂದಾಗಿ ವಿಶ್ವಾದ್ಯಂತ ಅಭಿಮಾನಿಗಳ ದೊಡ್ಡ ಪಡೆಯನ್ನೇ ಹೊಂದಿರುವ ಕ್ರಿಸ್ ಗೇಲ್ ಐಪಿಎಲ್‌ನಲ್ಲಿ ತನ್ನ ಪಾಲಿಗೆ ನೆಚ್ಚಿನ ತಂಡ ಯಾವುದು ಎಂಬುದನ್ನು ಹೇಳಿಕೊಂಡಿದ್ದಾರೆ.

ಕ್ರಿಸ್ ಗೇಲ್ ಐಪಿಎಲ್‌ಲ್ಲಿ ಒಟ್ಟು ಮೂರು ತಂಡಗಳನ್ನು ಪ್ರತಿನಿಧಿಸಿದ್ದಾರೆ. ಮೊದಲಿಗೆ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಮೂಲಕ ಐಪಿಎಲ್ ಅಭಿಯಾನ ಆರಂಭಿಸಿದ ದಿಗ್ಗಜ ಆಟಗಾರ ಬಳಿಕ 2011ರಲ್ಲಿ ಆರ್‌ಸಿಬಿ ತಂಡವನ್ನು ಸೇರಿಕೊಂಡರು. ಅದಾದ ಬಳಿಕ ವೃತ್ತಿ ಜೀವನದ ಅಂತ್ಯದ ಸಮಯದಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಪ್ರತಿನಿಧಿಸಿದ್ದರು ಈ ದಿಗ್ಗಜ ಕ್ರಿಕೆಟಿಗ. ಹಾಗಾದರೆ ಈ ದಿಗ್ಗಜ ಆಟಗಾರನಿಗೆ ಹೃದಯಕ್ಕೆ ಹತ್ತಿರವಾದ ತಂಡ ಯಾವುದು? ಈ ವಿಚಾರವನ್ನು ಸ್ವತಃ ಕ್ರಿಕೆಟ್ ಗೇಲ್ ಹೇಳಿಕೊಂಡಿದ್ದಾರೆ.

ಆರ್‌ಸಿಬಿಯೇ ನನ್ನ ಪಾಲಿಗೆ ನಂಬರ್ 1 ತಂಡ

ಆರ್‌ಸಿಬಿಯೇ ನನ್ನ ಪಾಲಿಗೆ ನಂಬರ್ 1 ತಂಡ

ಕ್ರಿಸ್ ಗೇಲ್ ಅತ್ಯಂತ ಹೆಚ್ಚಿನ ಕಾಲ ಪ್ರತಿನಿಧಿಸಿರುವ ತಂಡ ಅಂದರೆ ಅದು ರಾಯಲ್ ಚಾಲೆಂಜರ್ಸ್ ಬೆಂಗಳೂರು. 2011ರ ಆವೃತ್ತಿಯಿಂದ ಆರ್‌ಸಿಬಿ ತಂಡದ ಭಾಗಿವಾಗಿದ್ದರು ಗೇಲ್. ಆರ್‌ಸಿಬಿ ತಂಡದಲ್ಲಿ ಅನೇಕ ಅದ್ಭುತ ಇನ್ನಿಂಗ್ಸ್‌ಗಳನ್ನು ಆಡಿರುವ ಈ ಸ್ಪೋಟಕ ಆಟಗಾರ ತನಗೆ ಐಪಿಎಲ್‌ನಲ್ಲಿ ಆರ್‌ಸಿಬಿ ತಂಡವೇ ನಂಬರ್ 1 ತಂಡ ಎಂದಿದ್ದಾರೆ. ಈ ಮೂಲಕ ಬೆಂಗಳುರು ಮೂಲದ ಫ್ರಾಂಚೈಸಿ ತನ್ನ ಹೃದಯಕ್ಕೆ ಯಾವಾಗಲೂ ಹತ್ತಿರ ಎಂದಿದ್ದಾರೆ ವೆಸ್ಟ್ ಇಂಡೀಸ್‌ನ ಈ ದಿಗ್ಗಜ ಆಟಗಾರ.

ಎಕ್ಸ್‌ಪರ್ಟ್ ಪ್ಯಾನಲ್‌ನಲ್ಲಿ ಕ್ರಿಸ್ ಗೇಲ್

ಎಕ್ಸ್‌ಪರ್ಟ್ ಪ್ಯಾನಲ್‌ನಲ್ಲಿ ಕ್ರಿಸ್ ಗೇಲ್

ದಿಗ್ಗಜ ಆಟಗಾರ ಕಳೆದ ಎರಡು ಆವೃತ್ತಿಗಳಿಂದ ಸ್ಪರ್ಧಾತ್ಮಕ ಕ್ರಿಕೆಟ್‌ನಿಂದ ದೂರವಿದ್ದು ಈ ಬಾರಿಯ ಮಿನಿ ಹರಾಜಿನಲ್ಲಿ ಜಿಯೋ ಸಿನಿಮಾದ ಎಕ್ಸ್‌ಪರ್ಟ್ಸ್ ಪ್ಯಾನೆಲ್‌ನ ಭಾಗವಾಗಿದ್ದರು. ಈ ಸಂದರ್ಭದಲ್ಲಿ ಆರ್‌ಸಿಬಿ ಜೊತೆಗಿನ ತನ್ನ ಬಾಂಧವ್ಯದ ಬಗ್ಗೆ ಸಾಕಷ್ಟು ಮಾತನಾಡಿದ್ದಾರೆ. ಆರ್‌ಸಿಬಿ ತಂಡದಲ್ಲಿ ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್, ಕೆಎಲ್ ರಾಹುಲ್ ಮೊದಲಾದ ಆಟಗಾರರೊಂದಿಗೆ ಡ್ರೆಸ್ಸಿಂಗ್‌ರೂಮ್ ಹಂಚಿಕೊಂಡಿರುವುದು ನನಗೆ ಬಹಳ ಇಷ್ಟದ ವಿಚಾರ ಎಂದಿದ್ದಾರೆ ಕ್ರಿಸ್ ಗೇಲ್.

ಆರ್‌ಸಿಬಿ ಯಾವತ್ತಿಗೂ ನನ್ನ ಟೀಮ್

ಆರ್‌ಸಿಬಿ ಯಾವತ್ತಿಗೂ ನನ್ನ ಟೀಮ್

"ಆರ್‌ಸಿಬಿಯಲ್ಲಿ ನಾನು ಅನೇಕ ಅದ್ಭುತ ಕ್ಷಣಗಣನ್ನು ಹೊಂದಿದ್ದೇನೆ. ವಿರಾಟ್ ಕೊಹ್ಲಿ ಎಬಿ ಡಿವಿಲಿಯರ್ಸ್ ಮಾತ್ರವಲ್ಲದೆ ಉಳಿದ ಆಟಗಾರರೊಂದಿಗೆ ಕೂಡ ಸ್ಮರಣೀಯ ಕ್ಷಣಗಳಿವೆ. ಅದರಲ್ಲೂ ಕೊಹ್ಲಿ ಮತ್ತು ಡಬಿಡಿಯಂತಾ ದಿಗ್ಗಜರೊಂದಿಗೆ ಡ್ರೆಸ್ಸಿಂಗ್ ರೂಮ್ ಹಂಚಿಕೊಂಡಿರುವುದು ಶ್ರೇಷ್ಠ ಅನುಭವ. ನಾವು ಎಲ್ಲರೂ ಪ್ರತಿಯೊಬ್ಬರಿಂದಲೂ ಸಾಕಷ್ಟು ಕಲಿತುಕೊಂಡಿದ್ದೇವೆ. ನಾವು ಟ್ರೋಫಿಯನ್ನು ಗೆಲ್ಲಲು ಬಯಸಿದ್ದೇವು. ಆದರೆ ಅದು ಸಾಧ್ಯವಾಗಲಿಲ್ಲ. ಈ ಫ್ರಾಂಚೈಸಿ ಟ್ರೋಫಿ ಗೆಲ್ಲುವುದನ್ನು ನೋಡಲು ನಾನು ಬಯಸುತ್ತೇನೆ. ಆರ್‌ಸಿಬಿ ಯಾವತ್ತಿಗೂ ನನ್ನ ಟೀಮ್. ನಾನು ಈ ಫ್ರಾಂಚೈಸಿಯನ್ನು ಇಷ್ಟಪಡುತ್ತೇನೆ ಹಾಗೂ ಇದರ ಭಾಗವಾಗಿದ್ದಕ್ಕೆ ಸಂತಸಗೊಂಡಿದ್ದೇನೆ" ಎಂದಿದ್ದಾರೆ ಕ್ರಿಸ್ ಗೇಲ್.

2011ರಿಂದ ಆರ್‌ಸಿಬಿ ತಂಡದ ಭಾಗವಾಗಿದ್ದ ಗೇಲ್

2011ರಿಂದ ಆರ್‌ಸಿಬಿ ತಂಡದ ಭಾಗವಾಗಿದ್ದ ಗೇಲ್

2011ರ ಆವೃತ್ತಿಗೆ ಬದಲಿ ಆಟಗಾರನಾಗಿ ಆರ್‌ಸಿಬಿ ತಂಡವನ್ನು ಸೇರಿಕೊಂಡ ಕ್ರಿಸ್ ಗೇಲ್ ಬಳಿಕ ಒಂದಲ್ಲ ಎರಡಲ್ಲ ಬರೊಬ್ಬರಿ 7 ಆವೃತ್ತಿಗಳಲ್ಲಿ ತಂಡದ ಪ್ರಮುಖ ಭಾಗವಾಗಿದ್ದರು. 2017ರ ಆವೃತ್ತಿಯ ವರೆಗೂ ಕ್ರಿಸ್ ಗೇಲ್ ಆರ್‌ಸಿಬಿ ತಂಡದಲ್ಲಿ ಆಡಿದ್ದಾರೆ. ಅದಾದ ಬಳಿಕ ಎರಡು ಆವೃತ್ತಿಗಳಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಪ್ರತಿನಿಧಿಸಿದ ಈ ದಿಗ್ಗಜ ಆಟಗಾರ ಐಪಿಎಲ್‌ನಲ್ಲಿ ಅನೇಕ ದಾಖಲೆಗಳನ್ನು ಬರೆದಿದ್ದಾರೆ. 142 ಐಪಿಎಲ್ ಪಂದ್ಯಗಳನ್ನು ಆಡಿರುವ ಗೇಲ್ 4965 ರನ್‌ಗಳನ್ನು ಗಳಿಸಿದ್ದಾರೆ. 148.96 ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟಿಂಗ್ ನಡೆಸಿರುವ ಸ್ಪೋಟಕ ಆಟಗಾರ ಆರು ಭರ್ಜರಿ ಶತಕ ಹಾಗೂ 31 ಅರ್ಧ ಶತಕ ದಾಖಲಿಸಿದ್ದಾರೆ.

Story first published: Saturday, December 24, 2022, 11:01 [IST]
Other articles published on Dec 24, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+