For Quick Alerts
ALLOW NOTIFICATIONS  
For Daily Alerts
 

KL Rahul: ಆಸ್ಟ್ರೇಲಿಯಾ ವಿರುದ್ಧ ಪಂದ್ಯ ಗೆಲ್ಲಿಸಿದ ಕೆಎಲ್ ರಾಹುಲ್ ಬಗ್ಗೆ ಕನ್ನಡಿಗ ಅನಿಲ್ ಕುಂಬ್ಳೆ ಹೇಳಿದ್ದೇನು?

ಸೋಮವಾರ, ಅಕ್ಟೋಬರ್ 8ರಂದು ಚೆನ್ನೈನಲ್ಲಿ ನಡೆದ 2023ರ ಏಕದಿನ ವಿಶ್ವಕಪ್‌ನ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಕೆಎಲ್ ರಾಹುಲ್ ಮತ್ತು ವಿರಾಟ್ ಕೊಹ್ಲಿ ಜೋಡಿಯ ಅದ್ಭುತ ಜೊತೆಯಾಟದ ನೆರವಿನಿಂದ ಭಾರತ ತಂಡ ಭರ್ಜರಿ ಗೆಲುವು ಸಾಧಿಸಿದೆ.

ಇದೀಗ ಭಾರತ ತಂಡದ ಮಾಜಿ ಸ್ಪಿನ್ನರ್ ಅನಿಲ್ ಕುಂಬ್ಳೆ ಅವರು ಆಸ್ಟ್ರೇಲಿಯಾ ವಿರುದ್ಧದ ಮ್ಯಾಚ್ ವಿನ್ನಿಂಗ್ ಪ್ರದರ್ಶನಕ್ಕಾಗಿ ಕರ್ನಾಟಕ ಕುವರ ಕೆಎಲ್ ರಾಹುಲ್ ಅವರನ್ನು ಶ್ಲಾಘಿಸಿದ್ದಾರೆ.

ಕೆಎಲ್ ರಾಹುಲ್ ತಮ್ಮ ಮೂಲ ಆಟಕ್ಕೆ ಮರಳಿದ್ದಾರೆ. ಆಟಕ್ಕೆ ಅನುಭವ ಮತ್ತು ಮಧ್ಯಮ ಕ್ರಮಾಂಕದ ಬ್ಯಾಟಿಂಗ್‌ನಲ್ಲಿ ಶಕ್ತಿಯನ್ನು ತರುತ್ತಿದ್ದಾರೆ ಎಂದು ಅನಿಲ್ ಕುಂಬ್ಳೆ ಹೇಳಿದರು.

kl-rahul-match-winning-innings

ವಿರಾಟ್ ಕೊಹ್ಲಿ ಮತ್ತು ಕೆಎಲ್ ರಾಹುಲ್ ನಡುವಿನ ಶಾಂತ ಜೊತೆಯಾಟವು ತಮ್ಮ ಐಸಿಸಿ ಏಕದಿನ ವಿಶ್ವಕಪ್ ಅಭಿಯಾನವನ್ನು ಅತ್ಯುತ್ತಮವಾಗಿ ಆರಂಭಿಸಲು ಚೆನ್ನೈನ ಚೆಪಾಕ್ ಕ್ರೀಡಾಂಗಣದಲ್ಲಿ ಆಸ್ಟ್ರೇಲಿಯಾ ವಿರುದ್ಧ 6 ವಿಕೆಟ್‌ಗಳ ಜಯ ಸಾಧಿಸಲು ಭಾರತಕ್ಕೆ ನೆರವಾಯಿತು.

"ನಾವೆಲ್ಲರೂ ನೋಡಿದಂತೆ ಕೆಎಲ್ ರಾಹುಲ್ ಅವರು ತಮ್ಮ ಮೂಲ ಸ್ವರೂಪಕ್ಕೆ ಮರಳಿದ್ದಾರೆಂದು ತೋರುತ್ತಿದೆ ಮತ್ತು ಮೈದಾನದಲ್ಲಿ ಅವರು ಏನು ಮಾಡುತ್ತಾರೆ ಎಂಬುದು ನಮಗೆಲ್ಲಾ ತಿಳಿದಿದೆ. ಯಾವುದೇ ಪಿಚ್‌ನಲ್ಲಿ ಅವರ ಕೌಶಲ್ಯ ಮತ್ತು ಕ್ಲಾಸ್ ಆಟ, ಸ್ಪಿನ್ ಮತ್ತು ವೇಗದ ಬೌಲಿಂಗ್ ಎದುರಿಸುವ ಸಾಮರ್ಥ್ಯ ಅದ್ಭುತವಾಗಿದೆ. ಅಲ್ಲದೆ ಆತನ ಸ್ಥಿರತೆ ಆಕರ್ಷಕವಾಗಿದೆ," ಎಂದು ಅನಿಲ್ ಕುಂಬ್ಳೆ ಇಎಸ್‌ಪಿಎನ್ ಕ್ರಿಕ್‌ಇನ್‌ಫೋ ವಿಡಿಯೋದಲ್ಲಿ ಹೇಳಿದ್ದಾರೆ.

"ಕೆಎಲ್ ರಾಹುಲ್ ತನಗೆ ವಹಿಸಿರುವ ಪಾತ್ರವನ್ನು ಚೆನ್ನಾಗಿ ಅರ್ಥಮಾಡಿಕೊಂಡಿದ್ದಾನೆ ಎಂದು ನಾನು ಭಾವಿಸುತ್ತೇನೆ. ಆತ ಸ್ಪಿನ್ ವಿರುದ್ಧ ಆಡುವ ಅಸಾಧಾರಣ ಸಾಮರ್ಥ್ಯವನ್ನು ಹೊಂದಿದ್ದಾನೆ. ಮಧ್ಯಮ ಕ್ರಮಾಂಕದ ಬ್ಯಾಟರ್ ಆಗಿ ಅದು ಬೇಕಾಗಿದೆ,"ಎಂದರು.

kl-rahul-match-winning-innings

ಪರಿಸ್ಥಿತಿಗೆ ತಕ್ಕಂತೆ ಸ್ವಲ್ಪ ಹೆಚ್ಚು ಸಮಯ ಕಳೆಯಬೇಕು

"ಕೆಎಲ್ ರಾಹುಲ್, ವಿರಾಟ್ ಕೊಹ್ಲಿ ಮತ್ತು ಇತರ ಬ್ಯಾಟರ್‌ಗಳ ಕೆಲಸವೆಂದರೆ ಉತ್ತಮ ಎಸೆತಗಳನ್ನು ಬಾರಿಸುವ ಅವರ ಸಾಮರ್ಥ್ಯ. ಏಕದಿನ ಕ್ರಿಕೆಟ್‌ನಲ್ಲಿ ಕೇವಲ ಬೌಂಡರಿ ಮತ್ತು ಸಿಕ್ಸರ್‌ಗಳನ್ನು ಹೊಡೆಯುವುದು ಮಾತ್ರವಲ್ಲ, ಒತ್ತಡವನ್ನು ನಿಭಾಯಿಸಿ ಮತ್ತು ಪರಿಸ್ಥಿತಿಗೆ ತಕ್ಕಂತೆ ಸ್ವಲ್ಪ ಹೆಚ್ಚು ಸಮಯ ಕಳೆಯಬೇಕು".

"ಕೆಎಲ್ ರಾಹುಲ್ ಉತ್ತಮ ಆಟ ಆಡಿದ್ದಾರೆ. ಇದು ತಂಡದ ಹಲವು ಸಮಸ್ಯೆಗಳನ್ನು ಪರಿಹರಿಸುತ್ತದೆ. ಅವರು ಆ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಲು ಅವರ ಅನುಭವ ಮತ್ತು ಕೊನೆಯವರೆಗೂ ಕ್ರೀಸ್‌ನಲ್ಲಿರುವುದು ನಿಜವಾಗಿಯೂ ಭಾರತ ತಂಡಕ್ಕೆ ಒಳ್ಳೆಯದನ್ನು ನೀಡುತ್ತದೆ," ಎಂದು ಅನಿಲ್ ಕುಂಬ್ಳೆ ತಿಳಿಸಿದರು.

ಕೆಎಲ್ ರಾಹುಲ್ ಮಧ್ಯಮ ಕ್ರಮಾಂಕದ ಪಾತ್ರವನ್ನು ಇಷ್ಟಪಟ್ಟಿದ್ದಾರೆ

ಈ ವರ್ಷ 14 ಏಕದಿನ ಪಂದ್ಯಗಳ 13 ಇನ್ನಿಂಗ್ಸ್‌ಗಳಲ್ಲಿ ಕೆಎಲ್ ರಾಹುಲ್ 78.50ರ ಸರಾಸರಿ ಮತ್ತು 86ಕ್ಕಿಂತ ಹೆಚ್ಚು ಸ್ಟ್ರೈಕ್ ರೇಟ್‌ನಲ್ಲಿ 628 ರನ್ ಗಳಿಸಿದ್ದಾರೆ. ಕೆಎಲ್ ರಾಹುಲ್ ಅಜೇಯ 111 ರನ್ ಅತ್ಯುತ್ತಮ ಸ್ಕೋರ್‌ನೊಂದಿಗೆ ಒಂದು ಶತಕ ಮತ್ತು ಐದು ಅರ್ಧಶತಕಗಳನ್ನು ಗಳಿಸಿದ್ದಾರೆ.

kl-rahul-match-winning-innings

ಕೆಎಲ್ ರಾಹುಲ್ ಸ್ಪಷ್ಟವಾಗಿ ಮಧ್ಯಮ ಕ್ರಮಾಂಕದ ಪಾತ್ರವನ್ನು ಇಷ್ಟಪಟ್ಟಿದ್ದಾರೆ. ನಾಲ್ಕನೇ ಸ್ಥಾನದಲ್ಲಿ ಆಡಿದ 11 ಏಕದಿನ ಪಂದ್ಯಗಳಲ್ಲಿ 60.12ರ ಸರಾಸರಿ ಮತ್ತು 88ಕ್ಕಿಂತ ಹೆಚ್ಚಿನ ಸ್ಟ್ರೈಕ್ ರೇಟ್‌ನಲ್ಲಿ 481 ರನ್‌ ಗಳಿಸಿದ್ದಾರೆ. ಅವರು ಇಲ್ಲಿ ಎರಡು ಶತಕಗಳು ಮತ್ತು ಎರಡು ಅರ್ಧಶತಕಗಳನ್ನು ಹೊಂದಿದ್ದಾರೆ.

ಐದನೇ ಕ್ರಮಾಂಕವೂ ಕೆಎಲ್ ರಾಹುಲ್‌ಗೆ ಪರಿಪೂರ್ಣವಾಗಿದೆ ಎಂದು ತೋರುತ್ತದೆ. ಈ ಸ್ಥಾನದಲ್ಲಿ ಆಡಿದ 21 ಏಕದಿನ ಪಂದ್ಯಗಳಲ್ಲಿ 56.50ರ ಸರಾಸರಿ ಮತ್ತು 96ಕ್ಕಿಂತ ಹೆಚ್ಚಿನ ಸ್ಟ್ರೈಕ್ ರೇಟ್‌ನಲ್ಲಿ 904 ರನ್‌ ಬಾರಿಸಿದ್ದಾರೆ. ಅಲ್ಲಿ 21 ಇನ್ನಿಂಗ್ಸ್‌ಗಳಲ್ಲಿ 112ರ ಅತ್ಯುತ್ತಮ ಸ್ಕೋರ್‌ನೊಂದಿಗೆ ಒಂದು ಶತಕ ಮತ್ತು ಎಂಟು ಅರ್ಧಶತಕಗಳನ್ನು ಗಳಿಸಿದ್ದಾರೆ.

ಈ ವರ್ಷ ಕೆಎಲ್ ರಾಹುಲ್‌ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ್ದಾರೆ. ಒಟ್ಟಾರೆ 32 ಏಕದಿನ ಪಂದ್ಯಗಳಲ್ಲಿ ನಾಲ್ಕು ಮತ್ತು ಐದನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿ 57.70ರ ಸರಾಸರಿಯಲ್ಲಿ 1,385 ರನ್ ಗಳಿಸಿದ್ದಾರೆ. ಅವರು ಮಧ್ಯಮ ಕ್ರಮಾಂಕದಲ್ಲಿ ಮೂರು ಶತಕಗಳು ಮತ್ತು 10 ಅರ್ಧಶತಕಗಳನ್ನು ಗಳಿಸಿದ್ದಾರೆ.

Story first published: Monday, October 9, 2023, 14:59 [IST]
Other articles published on Oct 9, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+