IND vs AUS: ಜಸ್ಪ್ರೀತ್ ಬುಮ್ರಾ ಬೌಲಿಂಗ್ ಆಕ್ಷನ್ ಬಗ್ಗೆ ಆಸ್ಟ್ರೇಲಿಯಾ ಬ್ಯಾಟರ್ ಹೇಳಿದ್ದೇನು?
ಕ್ರಿಕೆಟ್ ಅಭಿಮಾನಿಗಳು ಕಾತುರದಿಂದ ಕಾಯುತ್ತಿರುವ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಬಾರ್ಡರ್- ಗವಾಸ್ಕರ್ ಟ್ರೋಫಿಯ ಟೆಸ್ಟ್ ಸರಣಿ ನವೆಂಬರ್ 22 ರಿಂದ ಪ್ರಾರಂಭವಾಗಲಿದೆ. ಮೊದಲ ಪಂದ್ಯ ಪರ್ತ್‌ನಲ್ಲಿ ನಡೆಯಲಿದೆ. ಇದಕ್ಕೂ ಮುನ್ನ ಆಸ್ಟ್ರೇಲಿಯಾದ ಬ್ಯಾಟರ್ ಟೀಮ್ ಇಂಡಿಯಾ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಅವರ ಬೌಲಿಂಗ್ ಆಕ್ಷನ್ ಬಗ್ಗೆ ಭಯವನ್ನು ವ್ಯಕ್ತಪಡಿಸಿದ್ದಾರೆ. ಆಸ್ಟ್ರೇಲಿಯಾದ ಎಡಗೈ ಆರಂಭಿಕ ಬ್ಯಾಟರ್ ಉಸ್ಮಾನ್ ಖವಾಜಾ ಅವರು ಜಸ್ಪ್ರೀತ್ ಬುಮ್ರಾ ಅವರ ಬೌಲಿಂಗ್‌ಗೆ ಆಡುವುದು ಕಷ್ಟಕರ ಎಂದು ಹೇಳಿದ್ದಾರೆ.
ಪರ್ತ್ ಟೆಸ್ಟ್ ಆರಂಭಕ್ಕೂ ಮುನ್ನ ಸಂದರ್ಶನವೊಂದರಲ್ಲಿ ಉಸ್ಮಾನ್ ಖವಾಜಾ ಅವರು ಜಸ್ಪ್ರೀತ್ ಬುಮ್ರಾ ಬಗ್ಗೆ ಮಾತನಾಡಿದ್ದಾರೆ. 'ನೀವು ಅವರನ್ನು ಮೊದಲ ಬಾರಿಗೆ ಎದುರಿಸಿದಾಗ, ಅವರ ಬೌಲಿಂಗ್ ಆಕ್ಷನ್ ವ್ಯತ್ಯಾಸ ಉಂಟು ಮಾಡಲಿದೆ. ಇದು ವಿಭಿನ್ನ, ವಿಚಿತ್ರ ರೀತಿಯ ಬೌಲಿಂಗ್ ಶೈಲಿ ಆಗಿದೆ. ಅವರು ಕೈಯಿಂದ ಚೆಂಡನ್ನು ಬಿಡುಗಡೆ ಮಾಡುವ ರೀತಿ ಇತರ ಬೌಲರ್‌ಗಳಿಗಿಂತ ತುಂಬಾ ಭಿನ್ನವಾಗಿದೆ. ಅನೇಕ ಬೌಲರ್‌ಗಳು ಚೆಂಡನ್ನು ಕ್ರೀಸ್ ಬಳಿ ಹಾಕುತ್ತಾರೆ. ಆದರೆ ಬುಮ್ರಾ ಅವರು ಬ್ಯಾಟರ್‌ನ ಮುಂಭಾಗದ ಕಾಲಿನಿಂದ ಸ್ವಲ್ಪ ಮುಂದಕ್ಕೆ ಚೆಂಡನ್ನು ಹಾಕುತ್ತಾರೆ. ಹೀಗಾಗಿ ಬುಮ್ರಾ ಅವರ ಬೌಲಿಂಗ್‌ನಲ್ಲಿ ಚೆಂಡು ಬ್ಯಾಟರ್‌ಗಳನ್ನು ಬೇಗ ತಲುುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಬ್ಯಾಟರ್ ಚೆಂಡನ್ನು ಎದುರಿಸುವುದು ಸ್ವಲ್ಪ ಕಷ್ಟಕರವಾಗುತ್ತದೆ ಎಂದು ಉಸ್ಮಾನ್ ಖವಾಜಾ ಹೇಳಿದ್ದಾರೆ. ಇದುವರೆಗೆ ಬುಮ್ರಾ ವಿರುದ್ಧ ಖವಾಜಾ 7 ಟೆಸ್ಟ್ ಇನ್ನಿಂಗ್ಸ್‌ಗಳಲ್ಲಿ 155 ಎಸೆತಗಳನ್ನು ಎದುರಿಸಿದ್ದಾರೆ. ಔಟಾಗದೆ 43 ರನ್ ಗಳಿಸಿದ್ದಾರೆ.

ಡೇವಿಡ್ ವಾರ್ನರ್ ನಿವೃತ್ತಿ ನಂತರ ಆರಂಭಿಕ ಬ್ಯಾಟರ್ ಹುಡುಕಾಟದಲ್ಲಿದ್ದ ಆಸ್ಟ್ರೇಲಿಯಾ ತಂಡಕ್ಕ ನಾಥನ್ ಮೆಕ್‌ಸ್ವೀನಿ ಅವರು ಸಿಕ್ಕಿದ್ದಾರೆ. ಭಾರತ ವಿರುದ್ಧ ನಾಥನ್ ಮೆಕ್‌ಸ್ವೀನಿ ಮೊದಲ ಬಾರಿಗೆ ಟೆಸ್ಟ್ ಸರಣಿ ಆಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ನಾಥನ್ ಮೆಕ್‌ಸ್ವೀನಿ ಅವರಿಗೆ ಟೀಮ್ ಇಂಡಿಯಾ ಬೌಲಿಂಗ್ ದಾಳಿಯನ್ನು ಎದುರಿಸುವುದೇ ಸವಾಲಾಗಿದೆ. ಇವರಲ್ಲದೆ, ಕೆಳ ಕ್ರಮಾಂಕದ ಕೆಲವು ಪ್ರಮುಖ ಬ್ಯಾಟರ್‌ಗಳು ಕೂಡ ಒತ್ತಡದಲ್ಲಿದ್ದಾರೆ. ಹೀಗಾಗಿ ಭಾರತ ವಿರುದ್ಧದ 5 ಪಂದ್ಯಗಳ ಸರಣಿಯಲ್ಲಿ ಉತ್ತಮ ಆರಂಭ ನೀಡುವ ಜವಾಬ್ದಾರಿ ಖವಾಜಾ ಮೇಲಿದೆ.
ಈ ಬಗ್ಗೆ ಮಾತಾಡಿರುವ ಖವಾಜಾ ಅವರು, ಭಾರತದ ಬೌಲಿಂಗ್ ದಾಳಿಯಲ್ಲಿ ಬುಮ್ರಾ ಮಾತ್ರವಲ್ಲದೆ ಇನ್ನೂ ಅನೇಕ ಉತ್ತಮ ಬೌಲರ್‌ಗಳಿದ್ದು, ಎಚ್ಚರಿಕೆ ವಹಿಸಬೇಕು ಎಂದು ಹೇಳಿದ್ದಾರೆ. ಭಾರತ ಅನೇಕ ಉತ್ತಮ ಬೌಲರ್‌ಗಳನ್ನು ಹೊಂದಿದೆ. ನನ್ನ ಪ್ರಕಾರ ಮೊಹಮ್ಮದ್ ಸಿರಾಜ್ ಒಬ್ಬ ಉತ್ತಮ ಬೌಲರ್. ಅವರು ಬಲ ಮತ್ತು ಎಡಗೈ ಬ್ಯಾಟರ್‌ಗಳ ವಿರುದ್ಧ ಉತ್ತಮವಾಗಿ ಬೌಲಿಂಗ್ ಮಾಡುತ್ತಾರೆ. ಆದ್ದರಿಂದ ನನಗೆ ಕೇವಲ ಬುಮ್ರಾ ಬಗ್ಗೆ ಅಲ್ಲ. ಬುಮ್ರಾ ಮತ್ತು ಇತರ ಬೌಲರ್‌ಗಳ ವಿರುದ್ಧ ಎಲ್ಲಿ ರನ್ ಗಳಿಸಬೇಕೆಂದು ನಾನು ನಿರಂತರವಾಗಿ ಯೋಚಿಸುತ್ತಿದ್ದೇನೆ. ಅವರು ತಪ್ಪು ಮಾಡಿದರೆ ನಾನು ರನ್ ಗಳಿಸುತ್ತೇನೆ. ಒಂದು ವೇಳೆ ಅವರು ಚೆನ್ನಾಗಿ ಬೌಲಿಂಗ್ ಮಾಡಿದರೆ ನಾನು ಅವರಿಗೆ ಗೌರವವನ್ನು ನೀಡುತ್ತೇನೆ. ಇದು ಟೆಸ್ಟ್ ಕ್ರಿಕೆಟ್ ಎಂದು ತಿಳಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications