For Quick Alerts
ALLOW NOTIFICATIONS  
For Daily Alerts
 

ಸಾರ್ವಕಾಲಿಕ 'ಸಿಕ್ಸರ್' ದಾಖಲೆ ಮುರಿದಿದ್ದಕ್ಕಾಗಿ 'ಹಿಟ್‌ಮ್ಯಾನ್' ಬಗ್ಗೆ 'ಯೂನಿವರ್ಸ್ ಬಾಸ್' ಹೇಳಿದ್ದೇನು?

ಬುಧವಾರ, ಅಕ್ಟೋಬರ್ 11ರಂದು ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಅವರು 84 ಎಸೆತಗಳಲ್ಲಿ 16 ಬೌಂಡರಿ ಮತ್ತು 5 ಸಿಕ್ಸರ್ ಸಹಿತ 131 ರನ್ ಗಳಿಸುವ ಮೂಲಕ ಹಲವು ದಾಖಲೆಗಳನ್ನು ಮುರಿದು ಹೊಸ ದಾಖಲೆ ನಿರ್ಮಿಸಿದರು.

ನವದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ 2023ರ ಐಸಿಸಿ ಏಕದಿನ ವಿಶ್ವಕಪ್‌ನ ತಮ್ಮ ಎರಡನೇ ಪಂದ್ಯದಲ್ಲಿ ಅಫ್ಘಾನಿಸ್ತಾನ ವಿರುದ್ಧ ಭಾರತ ತಂಡ ಎಂಟು ವಿಕೆಟ್‌ಗಳ ಗೆಲುವು ಸಾಧಿಸಿತು.

What Chris Gayle Said about Rohit Sharma Breaking His Most Sixes Record in ODI?

ಈ ಇನ್ನಿಂಗ್ಸ್‌ನಲ್ಲಿ ರೋಹಿತ್ ಶರ್ಮಾ ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ ವೆಸ್ಟ್ ಇಂಡೀಸ್ ಲೆಜೆಂಡ್ ಕ್ರಿಕೆಟಿಗ ಕ್ರಿಸ್ ಗೇಲ್ ಅವರ ಸಾರ್ವಕಾಲಿಕ ದಾಖಲೆಯನ್ನು ಅಳಿಸಿ ಹಾಕಿದರು.

ಭಾರತ ತಂಡದ ನಾಯಕ ರೋಹಿತ್ ಶರ್ಮಾ ಇದೀಗ ಒಟ್ಟು 453 ಪಂದ್ಯಗಳಲ್ಲಿ 555 ಸಿಕ್ಸರ್‌ಗಳನ್ನು ಬಾರಿಸಿದ್ದು, ಕ್ರಿಸ್ ಗೇಲ್ ತಮ್ಮ ಅಂತಾರಾಷ್ಟ್ರೀಯ ವೃತ್ತಿಜೀವನವನ್ನು 553 ಸಿಕ್ಸರ್‌ಗಳೊಂದಿಗೆ ಕೊನೆಗೊಳಿಸಿದರು.

ತಮ್ಮ 'ಸಿಕ್ಸರ್' ದಾಖಲೆ ಮುರಿದ ನಂತರ 'ಯೂನಿವರ್ಸ್ ಬಾಸ್' ಕ್ರಿಸ್ ಗೇಲ್ ಸಾಮಾಜಿಕ ಮಾಧ್ಯಮ ಖಾತೆ ಎಕ್ಸ್‌ (ಟ್ವಿಟ್ಟರ್)ನಲ್ಲಿ 'ಹಿಟ್‌ಮ್ಯಾನ್' ರೋಹಿತ್ ಶರ್ಮಾರನ್ನು ಶ್ಲಾಘಿಸಿದರು.

What Chris Gayle Said about Rohit Sharma Breaking His Most Sixes Record in ODI?

"ಅಭಿನಂದನೆಗಳು, ರೋಹಿತ್ ಶರ್ಮಾ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಸಿಕ್ಸರ್ ದಾಖಲೆ ಮುರಿದಿರುವುದು ವಿಶೇಷವಾಗಿದೆ," ಎಂದು ಕ್ರಿಸ್ ಗೇಲ್ ಬುಧವಾರ ಟ್ವೀಟ್ ಮಾಡಿದ್ದಾರೆ.

ಭಾರತ ತಂಡದ ನಾಯಕ ರೋಹಿತ್ ಶರ್ಮಾ ಅವರು ಕ್ರಿಸ್ ಗೇಲ್ ಅವರ ಟ್ವೀಟ್‌ಗೆ ಪ್ರತಿಕ್ರಿಯಿಸಿ, "ಧನ್ಯವಾದಗಳು ಕ್ರಿಸ್ ಗೇಲ್, ನಮ್ಮ ನೆಚ್ಚಿನ ಸಂಖ್ಯೆ 6' ಎಂದು ತಿಳಿಸಿದರು.

ರೋಹಿತ್ ಶರ್ಮಾ ವಿಶ್ವಕಪ್ ಪಂದ್ಯಗಳಲ್ಲಿ ತಮ್ಮ 7ನೇ ಶತಕವನ್ನು ಗಳಿಸುವ ಮಾರ್ಗದಲ್ಲಿ ಇತರ ಹಲವು ದಾಖಲೆಗಳನ್ನು ಮುರಿದರು. ಸಚಿನ್ ತೆಂಡೂಲ್ಕರ್ ಅವರನ್ನು ಹಿಂದಿಕ್ಕಿದ ರೋಹಿತ್ ಶರ್ಮಾ, ಏಕದಿನ ವಿಶ್ವಕಪ್‌ನಲ್ಲಿ ಏಳು ಶತಕಗಳನ್ನು ಗಳಿಸಿದ ಮೊದಲ ಬ್ಯಾಟರ್ ಎನಿಸಿಕೊಂಡರು.

ಇನ್ನು ರೋಹಿತ್ ಶರ್ಮಾ ತಮ್ಮ 31ನೇ ಏಕದಿನ ಶತಕದೊಂದಿಗೆ ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ಅವರನ್ನು ಹಿಂದಿಕ್ಕಿ ಮೂರನೇ ಸ್ಥಾನಕ್ಕೆ ಏರಿದರು.

ಈಗ ಏಕದಿನ ಶತಕಗಳಲ್ಲಿ ಮೊದಲ ಮೂರು ಸ್ಥಾನಗಳನ್ನು ಭಾರತೀಯ ಬ್ಯಾಟರ್‌ಗಳು ಆಕ್ರಮಿಸಿಕೊಂಡಿದ್ದಾರೆ. ತೆಂಡೂಲ್ಕರ್ (49), ವಿರಾಟ್ ಕೊಹ್ಲಿ (47) ಮತ್ತು ರೋಹಿತ್ ಶರ್ಮಾ (31).

ಶನಿವಾರ, ಅಕ್ಟೋಬರ್ 14ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿರುವ 2023ರ ಐಸಿಸಿ ಏಕದಿನ ವಿಶ್ವಕಪ್‌ನಲ್ಲಿ ಭಾರತ ತನ್ನ ಮುಂದಿನ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಎದುರಿಸಲಿದೆ.

"ನಾವು ಬಾಹ್ಯ ಅಂಶಗಳ ಬಗ್ಗೆ ಚಿಂತಿಸದಿರುವುದು ಮತ್ತು ನಾವು ನಿಯಂತ್ರಿಸಬಹುದಾದ ವಿಷಯಗಳನ್ನು ನೋಡುವುದು ನಮಗೆ ನಿರ್ಣಾಯಕವಾಗಿದೆ. ನಾವು ನಮ್ಮ ಸಾಮರ್ಥ್ಯ ತೋರಿಸಬೇಕು ಮತ್ತು ಉತ್ತಮವಾಗಿ ಕಾರ್ಯನಿರ್ವಹಿಸಬೇಕು," ಎಂದು ರೋಹಿತ್ ಶರ್ಮಾ ತಿಳಿಸಿದರು.

"ಪಿಚ್ ಹೇಗಿದೆ, ನಾವು ಯಾವ ಸಂಯೋಜನೆಯನ್ನು ಆಡಬಹುದು ಎಂಬುದನ್ನು ನಾವು ನಿಯಂತ್ರಿಸಬಹುದು. ಹೊರಗೆ ಏನಾಗುತ್ತದೆಯೋ ಅದರ ಬಗ್ಗೆ ನಾವು ಚಿಂತಿಸುವುದಿಲ್ಲ. ಇದು ಕೇವಲ ಆಟಗಾರರಾಗಿ ನಾವು ಏನು ಮಾಡಬಹುದು ಮತ್ತು ನಾವು ಹೇಗೆ ಪ್ರದರ್ಶನ ನೀಡಬಹುದು ಎಂಬುದರ ಮೇಲೆ ಕೇಂದ್ರೀಕರಿಸುವುದಾಗಿದೆ," ಎಂದು ರೋಹಿತ್ ಶರ್ಮಾ ಅವರು ಭಾರತ ಮತ್ತು ಪಾಕಿಸ್ತಾನ ಪಂದ್ಯದ ಕುರಿತು ಹೇಳಿದರು.

Story first published: Thursday, October 12, 2023, 16:52 [IST]
Other articles published on Oct 12, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+