For Quick Alerts
ALLOW NOTIFICATIONS  
For Daily Alerts
 

Ananya Pandey: ಶುಭ್‌ಮನ್ ಗಿಲ್ ಜೊತೆಗಿನ ಸಂಬಂಧದ ಬಗ್ಗೆ ನಟಿ ಅನನ್ಯಾ ಪಾಂಡೆ ಹೇಳಿದ್ದೇನು?

ಟೀಮ್ ಇಂಡಿಯಾ ಕ್ರಿಕೆಟಿಗರು ಬಾಲಿವುಡ್ ನಟಿಯರ ಜೊತೆ ಡೇಟಿಂಗ್ ಮಾಡುವುದು ಹೊಸದಲ್ಲ. ಈ ಹಿಂದೆಯೂ ಹಲವು ಟೀಮ್ ಇಂಡಿಯಾ ಕ್ರಿಕೆಟಿಗರು ಬಾಲಿವುಡ್ ನಟಿಯರೊಂದಿಗೆ ಡೇಟಿಂಗ್ ಮಾಡಿ ಸುದ್ದಿಯಾಗಿದ್ದಾರೆ. ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಹೆಸರು ಕೂಡ ಹಲವು ನಟಿಯರೊಂದಿಗೆ ಕೇಳಿಬಂದಿತ್ತು. ಆದರೆ, ಬಾಲಿವುಡ್ ಸ್ಟಾರ್ ನಟಿ ಅನುಷ್ಕಾ ಶರ್ಮಾ ಅವರನ್ನು ವಿರಾಟ್ ಕೊಹ್ಲಿ ಮದುವೆಯಾದರು. ಹೀಗೆ ಕೆಲವು ಕ್ರಿಕೆಟಿಗರು ಡೇಟಿಂಗ್ ನಂತರವೂ ಮದುವೆ ಮಾಡಿಕೊಂಡು ಸಂತೋಷದಿಂದ ಜೀವನ ಸಾಗುತ್ತಿದ್ದಾರೆ. ಇದೀಗ ಟೀಮ್ ಇಂಡಿಯಾದ ಮತ್ತೊಬ್ಬ ಸ್ಟಾರ್ ಬ್ಯಾಟರ್ ಶುಭಮನ್ ಗಿಲ್ ಜೊತೆಗೆ ಬಾಲಿವುಡ್ ನಟಿ ಅನನ್ಯಾ ಪಾಂಡೆ ಡೇಟಿಂಗ್ ಮಾಡುತ್ತಿರುವ ಸುದ್ದಿ ಸದ್ದು ಮಾಡುತ್ತಿದೆ.

ಬಾಲಿವುಡ್‌ನಲ್ಲಿ ಅನನ್ಯಾ ಪಾಂಡೆ ಬಹುಬೇಡಿಕೆ ನಟಿ. ಕಳೆದ ವರ್ಷಾ ಸ್ಟಾರ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಜೊತೆಗೆ ಡೇಟಿಂಗ್ ಮಾಡುತ್ತಿರುವ ವಿಚಾರ ಮುನ್ನಲೆಗೆ ಬಂದಿತ್ತು. ನಂತರ ಅನನ್ಯಾ ಪಾಂಡೆ ಮತ್ತು ಹಾರ್ದಿಕ್ ಪಾಂಡ್ಯ ನಡುವೆ ಯಾವುದೇ ಸಂಬಂಧವಿಲ್ಲ ಎಂದು ನಟಿಯ ಆಪ್ತ ಮೂಲಗಳು ತಿಳಿಸಿದ್ದವು. ಇದಾದ ನಂತರ ಅನನ್ಯಾ ಪಾಂಡೆ ಹೆಸರು ಶುಭಮನ್ ಗಿಲ್ ಅವರೊಂದಿಗೆ ತಳುಕು ಹಾಕಿಕೊಂಡಿದೆ.

What did actress Ananya Panday say about her relationship with Shubman Gill

ಸಾಮಾಜಿಕ ಜಾಲತಾಣದಲ್ಲಿ ಅನನ್ಯಾ ಪಾಂಡೆ ಮತ್ತು ಶುಭಮನ್ ಗಿಲ್ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಅಭಿಮಾನಿಗಳು ಚರ್ಚೆ ನಡೆಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಅನನ್ಯಾ ಪಾಂಡೆ ಅವರು ಶುಭಮನ್ ಗಿಲ್ ಅವರೊಂದಿಗಿನ ತನ್ನ ಸಂಬಂಧದ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.

ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿದ ಅನನ್ಯಾ ಪಾಂಡೆ, ತಮ್ಮ ವೃತ್ತಪರ ಜೀವನದ ಜೊತೆಗೆ ವೈಯಕ್ತಿಕ ಜೀವನದ ಬಗ್ಗೆಯೂ ಅನೇಕ ಪ್ರಶ್ನೆಗಳನ್ನು ಕೇಳಲಾಯಿತು. ಶುಭಮನ್ ಗಿಲ್ ಅವರೊಂದಿಗೆ ಸಂಬಂಧ ಹೊಂದಿದ್ದಾಗ ನಡೆದ ಘಟನೆಯ ಬಗ್ಗೆ ಕೇಳಲಾಯಿತು. ಆ ಘಟನೆಯ ಬಗ್ಗೆ ಮಾತನಾಡುತ್ತಾ, ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ಜಾಹೀರಾತು ಚಿತ್ರೀಕರಣದ ಸಮಯದಲ್ಲಿ ಭೇಟಿಯಾದರು. ಇಲ್ಲಿಂದ ಅವರ ಪ್ರೇಮಕಥೆ ಶುರುವಾಯಿತು. ಇದೇ ರೀತಿ ನೀವು ಮತ್ತು ಶುಭಮನ್ ಗಿಲ್ ಕೂಡ ಒಂದು ಜಾಹೀರಾತು ಚಿತ್ರೀಕರಣದಲ್ಲಿ ಸಮಯದಲ್ಲಿ ಭೇಟಿಯಾದಿರಿ, ನಿಮ್ಮಿಬ್ಬರ ನಡುವೆ ಅಂತಹದ್ದೇನಾದರೂ ಇದೆಯೇ? ಎಂದು ನಿರೂಪಕಿ ಪ್ರಶ್ನೆ ಕೇಳಿದರು.

ಇದಕ್ಕೆ ಉತ್ತರಿಸಿದ ಅನನ್ಯಾ ಪಾಂಡೆ, ನಗುತ್ತಾ "ಇಲ್ಲ, ಅಂತಹದ್ದೇನೂ ಇಲ್ಲ' ಎಂದು ಹೇಳಿದರು. ಬಳಿಕ ನೀವು ಕ್ರಿಕೆಟಿಗರೊಂದಿಗೆ ಡೇಟಿಂಗ್ ಮಾಡುತ್ತೀರಾ ಎಂದು ಕೇಳಿದಾಗ, ಅನನ್ಯಾ ಪಾಂಡೆ ಇಲ್ಲ ಎಂದಿದ್ದಾರೆ.

Story first published: Tuesday, April 15, 2025, 17:55 [IST]
Other articles published on Apr 15, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+