Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

'ರೋಹಿತ್‌-ಕೊಹ್ಲಿ ಮಿಸ್‌ ಮಾಡಿಕೊಳ್ಳುತ್ತೇವೆ'; ಹಾರ್ದಿಕ್‌ ಪಾಂಡ್ಯ

ಜೂನ್ 30 ಭಾನುವಾರ, ಭಾರತ ಕ್ರಿಕೆಟ್‌ ತಂಡದ ಇಬ್ಬರು ಶ್ರೇಷ್ಠ ಆಟಗಾರರಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರು ವಿಶ್ವಕಪ್ 2024ರ ಪ್ರಶಸ್ತಿಯನ್ನು ಗೆದ್ದ ನಂತರ ಟಿ20 ಅಂತರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ.

ಈ ಬಾರಿಯ ಟಿ20 ವಿಶ್ವಕಪ್‌ ಗೆಲ್ಲುವುದು ಟೀಮ್ ಇಂಡಿಯಾದ ಕನಸಾಗಿತ್ತು. ಏಕೆಂದರೆ ಟೀಮ್‌ ಇಂಡಿಯಾ ಹೆಡ್‌ ಕೋಚ್‌ ರಾಹುಲ್‌ ದ್ರಾವಿಡ್‌ ಕ್ರಿಕೆಟ್‌ ನಿಂದ ದೂರ ಸರಿಯುವ ಬಗ್ಗೆ ಮುಂಚೆಯೇ ಹೇಳಿದ್ದರು. ಅಲ್ಲದೆ ವಿರಾಟ್‌ ಕೊಹ್ಲಿ ಮತ್ತು ನಾಯಕ ರೋಹಿತ್‌ ಶರ್ಮಾ ಸಹಾ ಈ ಬಾರಿ ಕೊನೆಯ ಟಿ20 ವಿಶ್ವಕ್‌ ಆಡುತ್ತಿರುವ ಬಗ್ಗೆ ಮಾತು ಕೇಳಿ ಬಂದಿದ್ದವು.

What did Hardik Pandya say about Rohit Sharma- Virat Kohli

ಇದೀಗ ಒಂದು ಗೆಲುವಿನ ಸಂತಸದ ದಿನ ಟೀಮ್‌ ಇಂಡಿಯಾದ ಮೂವರು ದಿಗ್ಗಜರು ನಿವೃತ್ತಿ ಘೋಷಿಸಿರುವುದು ಅಭಿಮಾನಿಗಳಿಗೆ ನೋವು ತಂದಿದೆ. ತಮ್ಮ ನೆಚ್ಚಿನ ಕ್ರಿಕೆಟಿಗನನ್ನು ಇನ್ನು ಮುಂದೆ ಚುಟುಕು ಕ್ರಿಕೆಟ್‌ನಲ್ಲಿ ನೋಡುವುದಿಲ್ಲ ಎಂಬ ಬೇಸರ ಅಭಿಮಾನಿಗಳಲ್ಲಿ ಆಗಿದೆ.

ಇದರ ಬೆನ್ನಲ್ಲೇ ಟೀಮ್‌ ಇಂಡಿಯಾ ಉಪನಾಯಕ ಹಾರ್ದಿಕ್ ಪಾಂಡ್ಯ ಅವರು ವಿರಾಟ್‌ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರ ಟಿ20 ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿರುವ ಬಗ್ಗೆ ಪಂದ್ಯದ ನಂತರ ಮಾತನಾಡಿದ್ದಾರೆ.

'ರೋಹಿತ್ ಮತ್ತು ವಿರಾಟ್ ಇಬ್ಬರಿಗೂ ತುಂಬಾ ಖುಷಿಯಾಗಿದೆ. ಭಾರತೀಯ ಕ್ರಿಕೆಟ್‌ನ ಇಬ್ಬರು ಶ್ರೇಷ್ಠರು ಮತ್ತು ದಂತಕಥೆಗಳು ಟಿ20 ವಿಶ್ವಕಪ್‌ಗೆ ಸಂಪೂರ್ಣವಾಗಿ ಅರ್ಹರಾಗಿದ್ದಾರೆ.

ಕೊಹ್ಲಿ ಮತ್ತು ರೋಹಿತ್‌ ಜೊತೆ ಇಷ್ಟು ವರ್ಷ ಆಡಿದ್ದು ತುಂಬಾ ಖುಷಿ ತಂದಿದೆ. ನಾವೆಲ್ಲರೂ ಅವರನ್ನು ಮಿಸ್‌ ಮಾಡಿಕೊಳ್ಳುತ್ತದ್ದೇವೆ. ಆದರೆ ಇದೇ ವೇಳೆ ಅವರಿಗೆ ಉತ್ತಮ ವಿದಾಯವಾಗಿದೆ ಎಂದು ಹೇಳಿದ್ದಾರೆ. ಟ್ರೋಫಿ ಗೆದ್ದ ನಂತರ ಪಾಂಡ್ಯ ತುಂಬಾ ಖುಷಿಯಿಂದ ಕಾಣುತ್ತಿದ್ದರು.

ಫೈನಲ್‌ನಲ್ಲಿ ಹಾರ್ದಿಕ್‌ ಪಾಂಡ್ಯ ಬೆಂಕಿ ಬೌಲಿಂಗ್‌

ದಕ್ಷಿಣ ಆಫ್ರಿಕಾ ವಿರುದ್ಧದ ಫೈನಲ್‌ನಲ್ಲಿ ಹಾರ್ದಿಕ್‌ ಪಾಂಡ್ಯ ಬೆಂಕಿ ಬೌಲಿಂಗ್‌ ಪ್ರದರ್ಶನ ಮಾಡಿದರು. ತಾವು ಮಾಡಿದ ಮೂರು ಓವರ್‌ಗಳಲ್ಲಿ 20 ರನ್‌ ಬಿಟ್ಟುಕೊಟ್ಟಿ 3 ವಿಕೆಟ್‌ ಪಡೆದು ಮಿಂಚಿದರು.

ಅದರಲ್ಲೂ ಕೊನೆಯ ಓವರ್‌ನಲ್ಲಿ ದಕ್ಷಿಣ ಆಫ್ರಿಕಾ ಗೆಲುವಿಗೆ 16 ರನ್‌ಗಳ ಬೇಕಿದಾಗ ಯಶಸ್ವಿಯಾಗಿ ಹಾರ್ದಿಕ್‌ ಪಾಂಡ್ಯ ಬೌಲಿಂಗ್‌ ಮಾಡಿದರು. ಕೊನೆಯ ಓವರ್ ಮೊದಲ ಎಸೆತದಲ್ಲಿ ಡೇವಿಡ್ ಮಿಲ್ಲರ್ (17 ಎಸೆತಗಳಲ್ಲಿ 21 ರನ್) ವಿಕೆಟ್ ಪಡೆದು ಪಂದ್ಯವನ್ನು ಭಾರತದ ಪರವಾಗಿ ತಿರುಗಿಸಿದರು.

ಇದರೊಂದಿಗೆ 2024ರ ಟಿ20 ವಿಶ್ವಕಪ್‌ನ ಫೈನಲ್‌ನಲ್ಲಿ ಭಾರತ ತಂಡವು ದಕ್ಷಿಣ ಆಫ್ರಿಕಾ ವಿರುದ್ಧ 7 ರನ್‌ಗಳಿಂದ ಗೆದ್ದಿತು. ಇದಕ್ಕೂ ಮುನ್ನ ಟೀಮ್‌ ಇಂಡಿಯಾ ಸ್ಪಿನ್ನರ್‌ಗಳ ವಿರುದ್ಧ ಹೆನ್ರಿಚ್ ಕ್ಲಾಸೆನ್ ಅಬ್ಬರಿಸಿದರು.

ಈ ವೇಳೆ ದಾಳಿಗಿಳಿದ ಹಾರ್ದಿಕ್‌ ಪಾಂಡ್ಯ ಕ್ಲಾಸೆನ್‌ ವಿಕೆಟ್‌ ಪಡೆಯುವ ಮೂಲಕ ಭಾರತವನ್ನು ಮತ್ತೆ ಆಟಕ್ಕೆ ಹಾರ್ದಿಕ್ ಕರೆ ತಂದರು. ಕ್ಲಾಸೆನ್ 27 ಎಸೆತಗಳಲ್ಲಿ 5 ಸಿಕ್ಸರ್ ಮತ್ತು 2 ಬೌಂಡರಿಗಳ ಸಹಾಯದಿಂದ 52 ರನ್ ಗಳಿಸಿದರು.

Story first published: Sunday, June 30, 2024, 13:23 [IST]
Other articles published on Jun 30, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+