Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Champions Trophy: ಪ್ರಶಸ್ತಿ ಗೆಲುವಿನ ಬಳಿಕ ಆ ಒಂದು ಪಂದ್ಯ ನೆನಪಿಸಿಕೊಂಡ ಹಾರ್ದಿಕ್ ಪಾಂಡ್ಯ

ದುಬೈ ಅಂಗಳಲ್ಲಿ ಟೀಮ್ ಇಂಡಿಯಾ ಇತಿಹಾಸ ಸೃಷ್ಟಿಸಿದೆ. ಚಾಂಪಿಯನ್ಸ್ ಟ್ರೋಫಿ 2025ರ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು ಮಣಿಸಿ ಭಾರತ ಪ್ರಶಸ್ತಿ ಗೆದ್ದಿದೆ. ಪ್ರಶಸ್ತಿ ಗೆಲುವಿನ ಬಳಿಕ ಟೀಮ್ ಇಂಡಿಯಾ ಆಟಗಾರರು ಮೈದಾನದಲ್ಲಿ ಕುಣಿದು ಕುಪ್ಪಳಿಸಿದರು. ಅವರು ಸಂತೋಷಕ್ಕೆ ಮಿತಿಯೇ ಇರಲಿಲ್ಲ. ಹಾರ್ದಿಕ್ ಪಾಂಡ್ಯ ಕೂಡ ಟೀಮ್ ಇಂಡಿಯಾದ ಯಶಸ್ಸನ್ನು ಆಚರಿಸಿದರು. ತಮ್ಮದೇ ಆದ ಶೈಲಿಯಲ್ಲಿ ಹಾರ್ದಿಕ್ ಪಾಂಡ್ಯ ಮೈದಾನದಲ್ಲಿ ಸಂಭ್ರಮಾಚರಣೆ ಮಾಡಿದರು.

ಚಾಂಪಿಯನ್ಸ್ ಟ್ರೋಫಿ ಗೆದ್ದ ನಂತರ, ಹಾರ್ದಿಕ್ ಪಾಂಡ್ಯ ತಮ್ಮ ಮನಸ್ಸಿನಲ್ಲಿದ್ದ ಆ ಒಂದು ಪಂದ್ಯದ ಸೋಲಿನ ನೋವನ್ನು ಹೊರಹಾಕಿದ್ದಾರೆ. ಹಾರ್ದಿಕ್ ಪಾಂಡ್ಯ 2017ರ ಚಾಂಪಿಯನ್ಸ್ ಟ್ರೋಫಿ ಫೈನಲ್ ಸೋಲು ಇನ್ನೂ ನೆನಪಿದೆ ಎಂದು ಹೇಳಿದ್ದಾರೆ.

What did Hardik Pandya say after winning the Champions Trophy 2025

ಚಾಂಪಿಯನ್ಸ್ ಟ್ರೋಫಿ 2017ರ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಭಾರತ ಸೋತಿತು. ಹಾರ್ದಿಕ್ ಪಾಂಡ್ಯ ಕೂಡ ಭಾರತ ತಂಡದಲ್ಲಿದ್ದರು. ಈಗ ಫೈನಲ್‌ನಲ್ಲಿ ಚಾಂಪಿಯನ್ಸ್ ಟ್ರೋಫಿ ಗೆಲ್ಲುವಲ್ಲಿ ಯಶಸ್ವಿಯಾಗಿರುವ ಹಾರ್ದಿಕ್ ಪಾಂಡ್ಯ ಸಂತಸ ವ್ಯಕ್ತಪಡಿಸಿದ್ದಾರೆ. ಐಸಿಸಿ ಟೂರ್ನಮೆಂಟ್ ಗೆಲ್ಲುವುದು ಯಾವಾಗಲೂ ಅದ್ಭುತವಾಗಿದೆ. ನನಗೆ 2017 ಚೆನ್ನಾಗಿ ನೆನಪಿದೆ. ಆ ಸಮಯದಲ್ಲಿ ನಾನು ಪಂದ್ಯವನ್ನು ಗೆಲ್ಲಿಸಲು ಸಾಧ್ಯವಾಗಲಿಲ್ಲ. ಆದರೆ ಇಂದು ಅದನ್ನು ಮಾಡಲು ಸಾಧ್ಯವಾಯಿತು ಎಂದು ನನಗೆ ಸಂತೋಷವಾಗಿದೆ ಎಂದಿದ್ದಾರೆ. 2017 ರ ಚಾಂಪಿಯನ್ಸ್ ಟ್ರೋಫಿ ಫೈನಲ್‌ನಲ್ಲಿ ಹಾರ್ದಿಕ್ ಪಾಂಡ್ಯ 43 ಎಸೆತಗಳಲ್ಲಿ 76 ರನ್ ಗಳಿಸಿದ್ದರು.

ನ್ಯೂಜಿಲೆಂಡ್ ವಿರುದ್ಧ ಫೈನಲ್‌ನಲ್ಲಿ ಅಜೇಯ 34 ರನ್ ಗಳಿಸಿದ ಕೆಎಲ್ ರಾಹುಲ್ ಅವರನ್ನು ಹಾರ್ದಿಕ್ ಪಾಂಡ್ಯ ಕೂಡ ಶ್ಲಾಘಿಸಿದರು. 'ಕೆಎಲ್ ಶಾಂತವಾಗಿದ್ದರು ಮತ್ತು ಸರಿಯಾದ ಸಮಯದಲ್ಲಿ ತಮ್ಮ ಶಾಟ್‌ಗಳನ್ನು ಆಡಿದರು. ಅವರು ತುಂಬಾ ಪ್ರತಿಭಾನ್ವಿತರಾಗಿದ್ದು, ಅವರಂತಹ ಸಮಯಪ್ರಜ್ಞೆ ಯಾರಿಗೂ ಇಲ್ಲ. ಒಂದು ಹಂತದಲ್ಲಿ 42ನೇ ಓವರ್‌ನಲ್ಲಿ ಐದು ವಿಕೆಟ್‌ಗಳಿಗೆ 203 ರನ್‌ಗಳ ಸ್ಕೋರ್ ಗಳಿಸಿದ್ದಾಗ ಕೆಎಲ್ ರಾಹುಲ್ ಭಾರತದ ಇನ್ನಿಂಗ್ಸ್‌ ಅನ್ನು ಗೆಲುವಿನ ಕಡೆ ಮುನ್ನಡೆಸಿದರು ಎಂದು ಪಾಂಡ್ಯ ಹೇಳಿದ್ದಾರೆ.

ಕೆಎಲ್ ರಾಹುಲ್ ಹೇಳಿದ್ದೇನು?

ನಮ್ಮನ್ನು ಗೆಲುವಿನತ್ತ ಕೊಂಡೊಯ್ಯುತ್ತೇನೆ ಎಂಬ ವಿಶ್ವಾಸ ನನಗಿತ್ತು. ಶಾಂತವಾಗಿರುವುದು ಮುಖ್ಯವಾಗಿತ್ತು. ಈ ಬಾರಿ ನಿಮ್ಮನ್ನು ಗೆಲ್ಲಿಸಲು ಸಾಧ್ಯವಾಯಿತು ಎಂದು ನನಗೆ ಸಂತೋಷವಾಗಿದೆ. ನಾನು ಐದು ಪಂದ್ಯಗಳಲ್ಲಿ ಮೂರು ಬಾರಿ ಈ ರೀತಿ ಬ್ಯಾಟಿಂಗ್ ಮಾಡಿದ್ದೇನೆ. ಪದಗಳಲ್ಲಿ ಹೇಳುವುದು ಕಷ್ಟ, ಆದರೆ ಈ ತಂಡದಲ್ಲಿ ಪ್ರತಿಭೆ ಇದೆ. ನಾವೆಲ್ಲರೂ ಆರಂಭಿಕ ದಿನಗಳಲ್ಲಿ ಕ್ರಿಕೆಟ್ ಆಡಿದ ರೀತಿ ಮತ್ತು ವೃತ್ತಿಪರ ಕ್ರಿಕೆಟಿಗರಾದ ನಂತರ ಒತ್ತಡವನ್ನು ಎದುರಿಸಿದ ರೀತಿ ಎಲ್ಲರನ್ನೂ ಬಿಸಿಸಿಐ ಸಿದ್ಧಪಡಿಸಿತು ಎಂದು ರಾಹುಲ್ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಟೀಮ್ ಇಂಡಿಯಾದ ಮೂವರು ಸ್ಪಿನ್ನರ್‌ಗಳು ನ್ಯೂಜಿಲೆಂಡ್‌ ತಂಡದ ಬೆನ್ನೆಲುಬನ್ನು ಮುರಿದರು. ವರುಣ್ ಚಕ್ರವರ್ತಿ ಮತ್ತು ಕುಲದೀಪ್ ಯಾದವ್ ತಲಾ 2 ವಿಕೆಟ್ ಪಡೆದರೆ, ಜಡೇಜಾ 1 ವಿಕೆಟ್ ಪಡೆದರು. ಟೀಮ್ ಇಂಡಿಯಾ ಸ್ಪಿನ್ನರ್‌ಗಳ ಅತ್ಯುತ್ತಮ ಪ್ರದರ್ಶನದಿಂದಾಗಿ ನ್ಯೂಜಿಲೆಂಡ್ ತಂಡವು ಕೇವಲ 251 ರನ್‌ಗಳ ಕಲೆ ಹಾಕಿತು. ಭಾರತ 49ನೇ ಓವರ್‌ನಲ್ಲಿ ಈ ಗುರಿ ತಲುಪಿತು.

Story first published: Monday, March 10, 2025, 19:18 [IST]
Other articles published on Mar 10, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+