For Quick Alerts
ALLOW NOTIFICATIONS  
For Daily Alerts
 

IPL 2025: ಮುಂದಿನ ಬಾರಿ ಐಪಿಎಲ್‌ನಲ್ಲಿ ಯಾರೊಂದಿಗೆ ಆಡಬೇಕು ಎಂಬುದನ್ನು ಬಹಿರಂಗ ಪಡಿಸಿದ ಕನ್ನಡಿಗ!

ಇತ್ತೀಚಿನ ದಿನಗಳಲ್ಲಿ ಭಾರತದ ಅನುಭವಿ ಬ್ಯಾಟರ್ ಕೆಎಲ್ ರಾಹುಲ್ ಫಾರ್ಮ್ ಸಮಸ್ಯೆ ಎದುರಿಸುತ್ತಿದ್ದಾರೆ. ತವರಿನಲ್ಲಿ ನಡೆದ ಬಾಂಗ್ಲಾದೇಶ ಮತ್ತು ನ್ಯೂಜಿಲೆಂಡ್ ವಿರುದ್ಧ ಟೆಸ್ಟ್ ಸರಣಿಗಳಲ್ಲಿ ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲವಾಗಿದ್ದಾರೆ. ಇದರ ಪರಿಣಾಮ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಕೊನೆಯ ಎರಡು ಪಂದ್ಯಗಳಲ್ಲಿಯೂ ಅವರಿಗೆ ಅವಕಾಶ ಸಿಕ್ಕಿರಲಿಲ್ಲ. ಇದೀಗ ಆಸ್ಟ್ರೇಲಿಯಾ ಪ್ರವಾಸದಲ್ಲಿ ಏನಾದರೂ ಉತ್ತಮ ಸಾಧನೆ ಮಾಡುವ ಸವಾಲು ರಾಹುಲ್ ಮುಂದಿದೆ. ಅಲ್ಲದೆ, ಅವರ ಕಣ್ಣು 2025ರ ಐಪಿಎಲ್ ಮೆಗಾ ಹರಾಜಿನ ಮೇಲೂ ಇದೆ. ಕೆಎಲ್ ಅವರನ್ನು ಐಪಿಎಲ್ 2025ರ ಟೂರ್ನಿಗೂ ಮುನ್ನ ಬಿಡುಗಡೆ ಮಾಡಿರುವುದರಿಂದ ಮೆಗಾ ಹರಾಜಿನಲ್ಲಿ ಅದೃಷ್ಟದ ಪರೀಕ್ಷೆಗಿಳಿದಿದ್ದಾರೆ.

ಐಪಿಎಲ್ 2025ರ ಮೆಗಾ ಹರಾಜು ಅಖಾಡದಲ್ಲಿರುವ ರಾಹುಲ್ ಅವರನ್ನು ಬಿಡ್ ಮಾಡಲು ಹಲವು ತಂಡಗಳು ಸಜ್ಜಾಗಿವೆ. ಐಪಿಎಲ್‌ನಲ್ಲಿ ಅವರು ಬ್ಯಾಟಿಂಗ್ ಜೊತೆಗೆ ವಿಕೆಟ್ ಕೀಪಿಂಗ್ ಮತ್ತು ನಾಯಕತ್ವವನ್ನೂ ಅಚ್ಚುಕಟ್ಟಾಗ ನಿರ್ವಹಿಸಿದ್ದಾರೆ. ಹೀಗಾಗಿ ಮೆಗಾ ಹರಾಜಿನಲ್ಲಿ ರಾಹುಲ್ ಭಾರೀ ಮೊತ್ತಕ್ಕೆ ಬಿಡ್ ಆಗುವ ಸಾಧ್ಯತೆಯಿದೆ. ಇದಕ್ಕೂ ಮುನ್ನ ಸಂದರ್ಶನವೊಂದರಲ್ಲಿ ಕೇಳಿದ ಪ್ರಶ್ನೆಗೆ ಕೆಎಲ್ ರಾಹುಲ್ ಸಿಕ್ಕಿ ಹಾಕಿಕೊಂಡಿದ್ದಾರೆ.

What did KL Rahul say about playing with whom in the next edition of IPL 2025

ಕೆಎಲ್ ರಾಹುಲ್ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 10 ವರ್ಷ ಪೂರೈಸಿದ್ದಾರೆ. ಇದರ ಬೆನ್ನಲ್ಲೇ ಬಾರ್ಡರ್-ಗವಾಸ್ಕರ್ ಟ್ರೋಫಿ ಮತ್ತು ಐಪಿಎಲ್ 2025ರ ಹರಾಜಿಗೂ ಮುನ್ನ ಸಂದರ್ಶನವೊಂದರಲ್ಲಿ ಕೆಎಲ್ ರಾಹುಲ್ ಕೆಲವು ಪ್ರಮುಖ ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ಸಂದರ್ಶನದ ವೇಳೆ ರಾಹುಲ್‌ಗೆ ಹಲವು ಪ್ರಶ್ನೆಗಳನ್ನು ಕೇಳಲಾಗಿದೆ.

ರಾಹುಲ್ ಹೇಳಿದ್ದೇನು?

ಎಂಎಸ್‌ ಧೋನಿ, ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರಲ್ಲಿ ಯಾರೊಂದಿಗೆ ಐಪಿಎಲ್‌ನ ಮುಂದಿನ ಋತುವಿನಲ್ಲಿ ಆಡಲು ಬಯಸುತ್ತೀರಿ ಎಂದು ರಾಹುಲ್‌ಗೆ ಪ್ರಶ್ನೆ ಕೇಳಲಾಯಿತು. ಇದಕ್ಕೆ ತಮಾಷೆಯಾಗಿ ಉತ್ತರಿಸಿರುವ ರಾಹುಲ್, 'ನನಗೆ ಗೊತ್ತಿಲ್ಲ. ಇದು ಕಷ್ಟದ ಪ್ರಶ್ನೆ. ನೀವು ನನ್ನನ್ನು ನಿಜವಾಗಿಯೂ ತೊಂದರೆಗೆ ಸಿಲುಕಿಸಿದ್ದೀರಿ. ನಾನು ಅವರೆಲ್ಲರೊಂದಿಗೆ ಆಡಬೇಕಾದರೆ ಆನಂದಿಸಿದ್ದೇನೆ. ಇದಕ್ಕೆ ಉತ್ತರಿಸುವುದು ತುಂಬಾ ಕಷ್ಟ ಎಂದು ರಾಹುಲ್ ಹೇಳಿದ್ದಾರೆ.

ಇದೇ ವೇಳೆ ಲಕ್ನೋ ನಾಯಕನಾಗಿ ಮೂರು ಆವೃತ್ತಿಗಳಲ್ಲಿ ರಾಹುಲ್ ತಂಡವನ್ನು 2022 ಮತ್ತು 2023 ರಲ್ಲಿ ಪ್ಲೇಆಫ್‌ಗೆ ಕರೆದೊಯ್ದರು. ಆದರೆ, 2024ರಲ್ಲಿ ತಂಡದ ಪ್ರದರ್ಶನ ಕಳಪೆಯಾಗಿತ್ತು. ಹೀಗಾಗಿ ಲಕ್ನೋ 7ನೇ ಸ್ಥಾನದಲ್ಲಿತ್ತು. ಇದಾದ ನಂತರ ರಾಹುಲ್ ನಾಯಕತ್ವದ ಮೇಲೂ ಹಲವು ಪ್ರಶ್ನೆಗಳು ಎದ್ದಿದ್ದವು. ಹೀಗಾಗಿ ರಾಹುಲ್ ಅವರನ್ನು ಲಕ್ನೋ ತಂಡದಿಂದ ಕೈ ಬಿಟ್ಟಿತ್ತು.

ಇದರ ಬಗ್ಗೆ ಮಾತನಾಡಿರುವ ರಾಹುಲ್, ಲಕ್ನೋ ತಂಡದಿಂದ ಬೇರ್ಪಟ್ಟಿದ್ದರೂ, ನಾಯಕತ್ವ ಬೇಕು ಎಂದು ಬಯಸುವುದಿಲ್ಲ. ಆದರೆ ನನ್ನ ನಾಯಕತ್ವದ ಅನುಭವದ ಆಧಾರದ ಮೇಲೆ ಅವಕಾಶವನ್ನು ನೀಡಿದರೆ, ಆ ಪಾತ್ರವನ್ನು ತೆಗೆದುಕೊಳ್ಳಲು ಸಿದ್ಧ. ನನಗೆ ನಾಯಕತ್ವ ಬೇಕು ಎಂದು ನಾನು ಯಾರಿಗೂ ಹೇಳಲು ಹೋಗುವುದಿಲ್ಲ. ನನ್ನ ನಾಯಕತ್ವದ ಕೌಶಲ್ಯವು ಸಾಕಷ್ಟು ಉತ್ತಮವಾಗಿದೆ. ಕಳೆದ ನಾಲ್ಕೈದು ವರ್ಷಗಳಲ್ಲಿ ನಾನು ನನ್ನ ತಂಡವನ್ನು ನಿಭಾಯಿಸಿದ್ದೇನೆ ಎಂದು ರಾಹುಲ್ ಸ್ಪಷ್ಟಪಡಿಸಿದ್ದಾರೆ.

Story first published: Wednesday, November 13, 2024, 14:48 [IST]
Other articles published on Nov 13, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+