Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Kuldeep Yadav Marriage: ಬಾಲಿವುಡ್ ನಟಿ ಜೊತೆ ಕ್ರಿಕೆಟಿಗ ಕುಲದೀಪ್ ಯಾದವ್ ಮದುವೆ?; ಚೈನಾಮ್ಯಾನ್‌ ಬೌಲರ್‌ ಹೇಳಿದ್ದೇನು?

ಜುಲೈ 8 ಸೋಮವಾರ, ಭಾರತ ತಂಡದ ಸ್ಟಾರ್‌ ಸ್ಪಿನ್ನರ್‌ ಕುಲದೀಪ್‌ ಯಾದವ್‌ ತಮ್ಮ ಮದುವೆಯ ಬಗ್ಗೆ ಬಹಿರಂಗಪಡಿಸಿದ್ದು, ಶೀಘ್ರದಲ್ಲೇ ಒಳ್ಳೆಯ ಸುದ್ದಿ ಸಿಗಲಿದೆ ಎಂದು ಹೇಳಿದ್ದಾರೆ.

ಇತ್ತೀಚೆಗಷ್ಟೇ ಬಾರ್ಬಡೋಸ್‌ನಲ್ಲಿ ನಡೆದ 2024ರ ಟಿ20 ವಿಶ್ವಕಪ್ ಫೈನಲ್‌ನಲ್ಲಿ ಭಾರತ ತಂಡವು ದಕ್ಷಿಣ ಆಫ್ರಿಕಾವನ್ನು ಸೋಲಿಸಿ ಪ್ರಶಸ್ತಿ ಗೆದ್ದುಕೊಂಡಿತ್ತು. ಭಾರತ ಈ ಬಾರಿಯ ವಿಶ್ವಕಪ್ ಗೆಲ್ಲುವಲ್ಲಿ ಕುಲದೀಪ್ ಯಾದವ್ ಕೂಡ ಪ್ರಮುಖ ಪಾತ್ರ ವಹಿಸಿದ್ದಾರೆ.

What did Kuldeep Yadav say about marriage with Bollywood actress

ಟೀಮ್‌ ಇಂಡಿಯಾ ಪರ ಕುಲದೀಪ್ ಯಾದವ್‌ ಅನೇಕ ಸಂದರ್ಭಗಳಲ್ಲಿ ಎದುರಾಳಿ ತಂಡಗಳ ಪ್ರಮುಖ ವಿಕೆಟ್‌ಗಳನ್ನು ಕಬಳಿಸುವ ಮೂಲಕ ಭಾರತದ ಪುನರಾಗಮನವನ್ನು ಮಾಡಿದರು. ಇದೀಗ ಈ ವಿಶ್ವ ಚಾಂಪಿಯನ್ ಕ್ರಿಕೆಟಿಗ ತಮ್ಮ ಮದುವೆಯ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.

ಮುಂಬೈನಲ್ಲಿ ಟೀಮ್‌ ಇಂಡಿಯಾ ವಿಕ್ಟರಿ ಪರೇಡ್‌ ನಡೆಸಲು ಹೋದಾಗ ಅಭಿಮಾನಿಗಳು ಅದ್ಧೂರಿ ಸ್ವಾಗತ ಕೋರಿದರು. ಇದಾದ ನಂತರ ಕುಲದೀಪ್‌ ಯಾದವ್ ಕಾನ್ಪುರ ತಲುಪಿದರು.

ಕುಲದೀಪ್ ಅವರನ್ನು ಅಲ್ಲಿಯೂ ಅಭಿಮಾನಿಗಳು ಆತ್ಮೀಯವಾಗಿ ಸ್ವಾಗತಿಸಿದರು. ಇದೇ ವೇಳೆ ಕುಲದೀಪ್‌ ತಮ್ಮ ಮದುವೆಯ ಯೋಜನೆಗಳ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಬಾಲಿವುಡ್ ನಟಿ ಜೊತೆ ಮದುವೆ ವಿಚಾರಕ್ಕೆ ಸಂಬಂಧಸಿದಂತೆ ಪ್ರತಿಕ್ರಿಯಿಸಿದ್ದ, ಇದೆಲ್ಲಾ ಊಹಪೋಹಗಳು ಯಾವುದೇ ಬಾಲಿವುಡ್ ನಟಿಯನ್ನು ಮದುವೆಯಾಗುವುದಿಲ್ಲ ಎಂದಿದ್ದಾರೆ.

ಟಿವಿ ವಾಹಿನಿಯೊಂದರಲ್ಲಿ ನೀಡಿದ ಸಂದರ್ಶನದಲ್ಲಿ ಕುಲದೀಪ್ ಯಾದವ್, 'ನಿಮಗೆ ಶೀಘ್ರದಲ್ಲೇ ಒಳ್ಳೆಯ ಸುದ್ದಿ ಸಿಗುತ್ತದೆ, ಆದರೆ ಅದು ಯಾವುದೇ ನಟಿಯಾಗುವುದಿಲ್ಲ. ಅವರು ನನ್ನನ್ನು ಮತ್ತು ನನ್ನ ಕುಟುಂಬವನ್ನು ನೋಡಿಕೊಳ್ಳುವುದು ಮುಖ್ಯ ಎಂದು ವದಂತಿಗಳಿಗೆ ತೆರೆ ಎಳೆದಿದ್ದಾರೆ.

ಪ್ರಧಾನಿ ಭೇಟಿ ಬಗ್ಗೆ ಕುಲದೀಪ್‌ ಹೇಳಿದ್ದೇನು?

ಕುಲದೀಪ್ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾದ ಬಗ್ಗೆಯೂ ಮಾತನಾಡಿದರು. ಎಎನ್‌ಐ ಜೊತೆ ಮಾತನಾಡಿದ ಕುಲದೀಪ್, 'ನಾವು ತುಂಬಾ ಸಂತೋಷವಾಗಿದ್ದೇವೆ. ಇದಕ್ಕಾಗಿ ನಾವು ಬಹಳ ಸಮಯದಿಂದ ಕಾಯುತ್ತಿದ್ದೆವು. ಇಲ್ಲಿರುವ ನಮ್ಮ ಜನರನ್ನು ನೋಡುವುದೇ ದೊಡ್ಡ ಅನುಭವ.

ವಿಶ್ವಕಪ್ ತಂದಿರುವುದು ತುಂಬಾ ಖುಷಿ ತಂದಿದೆ. ಇದು ನಮಗಾಗಿ ಅಲ್ಲ, ನಮ್ಮ ಭಾರತಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಭೇಟಿಯಾಗಲು ಸಂತೋಷವಾಯಿತು ಎಂದು ತಿಳಿಸಿದ್ದಾರೆ.

ಟೀಮ್‌ ಇಂಡಿಯಾಗೆ ಭಾರೀ ಬಹುಮಾನ

ಟಿ20 ವಿಶ್ವಕಪ್ ಗೆದ್ದ ಟೀಮ್‌ ಇಂಡಿಯಾಗೆ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) 125 ಕೋಟಿ ರೂಪಾಯಿ ಬಹುಮಾನ ನೀಡಿದೆ. ಬಾರ್ಬಡೋಸ್‌ನಿಂದ ಹಿಂತಿರುಗಿದ ನಂತರ ಟೀಮ್‌ ಇಂಡಿಯಾ ಆಟಗಾರರಿಗೆ ಅಭಿಮಾನಿಗಳು ಅದ್ಧೂರಿ ಸ್ವಾಗತ ನೀಡಿದರು.

ಮುಂಬೈನ ಮರೈನ್ ಡ್ರೈವ್‌ನಲ್ಲಿ ಟೀಮ್ ಇಂಡಿಯಾದ ವಿಜಯೋತ್ಸವದ ಮೆರವಣಿಗೆ ನಡೆಯಿತು. ನಂತರ ಭಾರತ ತಂಡಕ್ಕೆ ವಾಂಖೆಡೆ ಸ್ಟೇಡಿಯಂನಲ್ಲಿ ಅಭಿನಂದನೆ ಕಾರ್ಯಕ್ರಮ ಜರುಗಿತು. ಈ ವೇಳೆ ಬಿಸಿಸಿಐ 125 ಕೋಟಿ ರೂಪಾಯಿಗಳ ಬಹುಮಾನವನ್ನು ನೀಡಲಾಯಿತು.

Story first published: Monday, July 8, 2024, 11:26 [IST]
Other articles published on Jul 8, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+