Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IPL 2025: ಐಪಿಎಲ್‌ನಿಂದ ಬ್ರೂಕ್ ನಿಷೇಧದ ಬಗ್ಗೆ ಇಂಗ್ಲೆಂಡ್ ಆಟಗಾರ ಹೇಳಿದ್ದೇನು?

ಐಪಿಎಲ್ 2025ರ ಟೂರ್ನಿ ಮಾರ್ಚ್ 22 ರಿಂದ ಪ್ರಾರಂಭವಾಗಲಿದೆ. ಇದಕ್ಕೂ ಮುನ್ನ, ಹೆಚ್ಚು ಚರ್ಚಿಸಲ್ಪಟ್ಟ ಒಂದು ಹೆಸರು ಇಂಗ್ಲೆಂಡ್‌ನ ಸ್ಟಾರ್ ಬ್ಯಾಟರ್ ಹ್ಯಾರಿ ಬ್ರೂಕ್. ಅವರು ಐಪಿಎಲ್ 2025ರಿಂದ ತಮ್ಮ ಹೆಸರನ್ನು ಹಿಂತೆಗೆದುಕೊಂಡಿದ್ದಾರೆ. ಇದರಿಂದಾಗಿ ಬಿಸಿಸಿಐ ಅವರನ್ನು ಐಪಿಎಲ್‌ನಿಂದ 2 ವರ್ಷಗಳ ಕಾಲ ನಿಷೇಧಿಸಿದೆ. ಈ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಈಗ ಇಂಗ್ಲೆಂಡ್ ಸ್ಟಾರ್ ಮಾಜಿ ಆಲ್‌ರೌಂಡರ್ ಮೊಯಿನ್ ಅಲಿ ಈಗ ಶಿಕ್ಷೆ ಬಗ್ಗೆ ತಮ್ಮ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.

ಐಪಿಎಲ್‌ನಿಂದ ಕೊನೆಯ ಕ್ಷಣದಲ್ಲಿ ಹಿಂದೆ ಸರಿದ ಹ್ಯಾರಿ ಬ್ರೂಕ್ ಮೇಲೆ ಬಿಸಿಸಿಐ ಎರಡು ವರ್ಷಗಳ ನಿಷೇಧ ಹೇರಿದ್ದು ಕಠಿಣವಲ್ಲ ಎಂದು ಇಂಗ್ಲೆಂಡ್‌ ಮೊಯಿನ್ ಅಲಿ ಅಭಿಪ್ರಾಯಪಟ್ಟಿದ್ದಾರೆ. ಬ್ರೂಕ್ ಸತತ ಎರಡನೇ ಬಾರಿಗೆ ಐಪಿಎಲ್‌ನಿಂದ ತಮ್ಮ ಹೆಸರನ್ನು ಹಿಂತೆಗೆದುಕೊಂಡಿದ್ದಾರೆ. ಮೆಗಾ ಹರಾಜಿನಲ್ಲಿ ಬ್ರೂಕ್ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್ 6.5 ಕೋಟಿ ರೂ.ಗೆ ಖರೀದಿಸಿತು. ಪ್ರಸ್ತುತ ಡೆಲ್ಲಿ ತಂಡ ಬದಲಿ ಆಟಗಾರನನ್ನು ಹುಡುಕುತ್ತಿದೆ.

What did Moeen Ali say about Harry Brook ban from IPL

ಸಂದರ್ಶನವೊಂದರಲ್ಲಿ ಮಾತನಾಡಿದ ಮೊಯೀನ್, ಹ್ಯಾರಿ ಬ್ರೂಕ್ ಅವರನ್ನು ನಿಷೇಧ ಮಾಡಿರುವುದನ್ನು ನಾನು ಒಪ್ಪುತ್ತೇನೆ. ಅನೇಕ ಆಟಗಾರರು ಸರಿದು ನಂತರ ಹಿಂತಿರುಗಿ ಉತ್ತಮ ಆರ್ಥಿಕ ಪ್ಯಾಕೇಜ್ ಪಡೆಯುತ್ತಾರೆ. ಇದು ಬಹಳಷ್ಟು ಅವ್ಯವಸ್ಥೆಗೆ ಕಾರಣವಾಗುತ್ತದೆ. ಬಹಳಷ್ಟು ಬದಲಾವಣೆಗಳನ್ನು ಮಾಡಬೇಕಾಗಿದೆ. ಅದನ್ನು ಮರೆತುಬಿಡಿ, ನೀವು ಹೆಸರನ್ನು ಹಿಂತೆಗೆದುಕೊಂಡರೆ, ಕೌಟುಂಬಿಕ ಕಾರಣಗಳು ಅಥವಾ ಗಾಯದ ಕಾರಣಗಳಿಲ್ಲದಿದ್ದರೆ ನಿಮ್ಮನ್ನು ನಿಷೇಧಿಸಲಾಗುವುದು ಎಂದು ತಮ್ಮದೇ ದೇಶದ ಆಟಗಾರರ ಮೇಲೆ ಬೇಸರ ವ್ಯಕ್ತಪಡಿಸಿದ್ದಾರೆ.

ಐಪಿಎಲ್ 2025ರ ಟೂರ್ನಿಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ಹಲವು ಬದಲಾವಣೆಗಳಾಗಿವೆ. ಕಳೆದ ಸೀಸನ್‌ವರೆಗೆ ಡೆಲ್ಲಿ ನಾಯಕತ್ವ ರಿಷಭ್ ಪಂತ್ ಅವರ ಕೈಯಲ್ಲಿತ್ತು. ಆದರೆ ಈಗ ತಂಡದ ನಾಯಕತ್ವವನ್ನು ಅಕ್ಸರ್ ಪಟೇಲ್ ಅವರಿಗೆ ಹಸ್ತಾಂತರಿಸಲಾಗಿದೆ. ಇದಲ್ಲದೆ, ಆರ್‍‌ಸಿಬಿ ಮಾಜಿ ನಾಯಕ ಫಾಫ್ ಡು ಪ್ಲೆಸಿಸ್ ಅವರಿಗೆ ಡೆಲ್ಲಿ ಉಪನಾಯಕನ ಪಟ್ಟ ನೀಡಿದೆ. ಐಪಿಎಲ್‌ನ ಉದ್ಘಾಟನಾ ಪಂದ್ಯ ಮಾರ್ಚ್ 22 ರಂದು ಆರ್‌ಸಿಬಿ ಮತ್ತು ಕೆಕೆಆರ್ ನಡುವೆ ನಡೆಯಲಿದೆ.

ಡೆಲ್ಲಿ ಕ್ಯಾಪಿಟಲ್ಸ್ ತಂಡ: ಅಕ್ಸರ್ ಪಟೇಲ್ (ನಾಯಕ), ಫಾಫ್ ಡು ಪ್ಲೆಸಿಸ್ (ಉಪನಾಯಕ), ಕುಲದೀಪ್ ಯಾದವ್, ಟ್ರಿಸ್ಟಾನ್ ಸ್ಟಬ್ಸ್, ಅಭಿಷೇಕ್ ಪೊರೆಲ್, ಮಿಚೆಲ್ ಸ್ಟಾರ್ಕ್, ಕೆಎಲ್ ರಾಹುಲ್, ಜೇಕ್ ಫ್ರೇಸರ್-ಮೆಕ್‌ಗುರ್ಕ್, ಟಿ ನಟರಾಜನ್, ಕರುಣ್ ನಾಯರ್, ಸಮೀರ್ ರಿಜ್ವಿ, ಅಶುತೋಷ್ ಶರ್ಮಾ, ಮೋಹಿತ್ ಶರ್ಮಾ, ಮುಖೇಶ್ ಕುಮಾರ್, ದರ್ಶನ್ ನಲ್ಕಂಡೆ, ವಿಪ್ರಜ್ ನಿಗಮ್, ದುಷ್ಮಂತ ಚಮೀರಾ, ಡೊನೊವನ್ ಫೆರೇರಾ, ಅಜಯ್ ಮಂಡಲ್, ಮನ್ವಂತ್ ಕುಮಾರ್, ತ್ರಿಪುರಾನ ವಿಜಯ್, ಮಾಧವ್ ತಿವಾರಿ.

Story first published: Tuesday, March 18, 2025, 9:11 [IST]
Other articles published on Mar 18, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+