Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

DC vs RR: ಸಂಜು ಸ್ಯಾಮ್ಸನ್‌ ವಿವಾದತ್ಮಾಕ ಔಟ್ ಬಗ್ಗೆ ಮಾಜಿ ಟೀಮ್‌ ಇಂಡಿಯಾ ಕ್ರಿಕೆಟಿಗ ಹೇಳಿದ್ದೇನು?

ಮಂಗಳವಾರ ನವದೆಹಲಿ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದ ರಾಜಸ್ಥಾನ ರಾಯಲ್ಸ್‌ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಿನ 2024ರ ಐಪಿಎಲ್‌ನ 56ನೇ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ವಿವಾದತ್ಮಾಕ ಔಟ್ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದೆ.

ಈ ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ ಮಾಜಿ ಟೀಮ್‌ ಇಂಡಿಯಾ ಕ್ರಿಕೆಟಿಗ ನವಜೋತ್‌ ಸಿಂಗ್ ಸಿದ್ದು ಅವರು ಸಂಜು ಸ್ಯಾಮ್ಸನ್‌ ವಿವಾದತ್ಮಾಕ ಔಟ್ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.‌ ಡೆಲ್ಲಿ ಮತ್ತು ರಾಜಸ್ತಾನ ಪಂದ್ಯದಲ್ಲಿ ಎರಡು ಕೆಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ ಎಂದು ನವಜೋತ್ ಸಿಂಗ್ ಸಿದ್ದು ಅಂಪೈರ್‌ಗಳನ್ನು ಟೀಕಿಸಿದ್ದಾರೆ. ಅಲ್ಲದೆ, ತಂತ್ರಜ್ಞಾನವನ್ನು ಸಮರ್ಪಕವಾಗಿ ಬಳಸಿಕೊಳ್ಳುವಂತೆ ಸಲಹೆ ನೀಡಿದ್ದಾರೆ.

What did Navjot Singh say about Rajasthan Royals captain Sanju Samson controversial out

ಯಾರು ಏನು ಬೇಕಾದರೂ ಹೇಳಬಹುದು. ಒಂದು ಕಡೆಯಿಂದ ನೋಡಿದರೆ ಕ್ಯಾಚ್‌ ಹಿಡಿದ ಮೇಲೆ ಎರಡು ಬಾರಿ ಶಾಯ್‌ ಹೋಪ್‌ ಬೌಂಡರಿ ಗೆರೆ ಮುಟ್ಟಿದ್ದಾರೆ. ಹೀಗಾಗಿ ಒಂದೋ ತಂತ್ರಜ್ಞಾನ ಬಿಡಿ ಇಲ್ಲವೇ ಅದನ್ನು ಸರಿಯಾಗಿ ಬಳಸಿಕೊಳ್ಳಿ ಎಂದು ನವಜೋತ್‌ ಸಿಂಗ್ ಸಿದ್ದು ಹೇಳಿದ್ದಾರೆ.

ಇದಲ್ಲದೇ ಸಂಜು ಸ್ಯಾಮ್ಸನ್ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಅಸಮಾಧಾನ ಹೊರಹಾಕುತ್ತಿದ್ದಾರೆ. ಮೂರನೇ ಅಂಪೈರ್ 3 ನಿಮಿಷಗಳ ಕಾಲ ಸಂಜು ಸ್ಯಾಮ್ಸನ್‌ ಔಟ ಆದ ಬಗ್ಗೆ ಪರಿಶೀಲಿಸುತ್ತಿದ್ದರು. ಬಳಿಕ ಒಂದು ನಿಮಿಷದಲ್ಲಿ ಸಂಜು ಸ್ಯಾಮ್ಸನ್ ಔಟ್‌ ಬಗ್ಗೆ ತೀರ್ಪು ನೀಡಿದರು ಎಂದು ಸಂಜು ಅಭಿಮಾನಿಯೊಬ್ಬ ಬತರೆದುಕೊಂಡು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದಾರೆ.

ಮತ್ತೊಂದೆಡೆ ಈ ಋತುವಿನಲ್ಲಿ ಅಂಪೈರ್‌ಗಳ ನಿರ್ಧಾರಗಳು ಕಳಪೆ ಮಟ್ಟದಾಗಿವೆ ಎಂದು ಬರೆದುಕೊಂಡಿದ್ದಾರೆ. ಸಂಜು ಸ್ಯಾಮ್ಸನ್ ಅವರ ಕ್ಯಾಚ್ ಕ್ಲೀನ್ ಆಗಿರಲಿಲ್ಲ. ಕ್ಯಾಚ್ ಅನ್ನು ಸರಿಯಾಗಿ ಪರಿಶೀಲಿಸದೆ ಅವರನ್ನು ಔಟ್ ಮಾಡಲಾಯಿತು. ಕ್ಯಾಚ್‌ ಹಿಡಿದ ನಂತರ ಶಾಯ್‌ ಹೋಪ್ ಸೇರಿದಂತೆ ಯಾರೂ ಸಂಭ್ರಮಿಸಲಿಲ್ಲ. ಆದರೆ ಮೂರನೇ ಅಂಪೈರ್ ತರಾತುರಿಯಲ್ಲಿ ಸಂಜು ಸ್ಯಾಮ್ಸನ್ ಅವರನ್ನು ಔಟ್ ಮಾಡಿದ್ದಾರೆ ಎಂದು ಇನ್ನೊಬ್ಬ ಅಭಿಮಾನಿ ಬೇಸರ ವ್ಯಕ್ತಪಡಿಸಿದ್ದಾರೆ.

ಸಂಜುಗೆ ಬಿತ್ತು ದಂಡ :

ಮೂರನೇ ಅಂಪೈರ್ ನಿಂದ ಸಂಜು ಸ್ಯಾಮ್ಸನ್‌ ಔಟ್‌ ಎಂದು ನಿರ್ಧಾರ ಬಂದಾಗ ಮತ್ತೊಮ್ಮೆ ಔಟ್‌ ಬಗ್ಗೆ ಪರಿಶೀಲಿಸುವಂತೆ ಆನ್-ಫೀಲ್ಡ್ ಅಂಪೈರ್‌ಗಳೊಂದಿಗೆ ಸಂಜು ತೀವ್ರ ವಾಗ್ವಾದ ನಡೆಸಿದರು. ಈ ವೇಳೆ ಐಪಿಎಲ್‌ನ ನೀತಿ ಸಂಹಿತೆಯ ಆರ್ಟಿಕಲ್ 2.8ರ ಅಡಿಯಲ್ಲಿ ಸಂಜು ಸ್ಯಾಮ್ಸನ್ ಲೆವೆಲ್ 1 ಅಪರಾಧವನ್ನು ಎಸಗಿದ್ದಾರೆ ಎಂದು ಸಂಜು ಸ್ಯಾಮ್ಸನ್ ಅವರಿಗೆ ಪಂದ್ಯದ ಶುಲ್ಕದ ಶೇಕಡಾ 30ರಷ್ಟು ದಂಡ ವಿಧಿಸಲಾಗಿದೆ.

Story first published: Wednesday, May 8, 2024, 14:15 [IST]
Other articles published on May 8, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+