'ಟೀಮ್ ಇಂಡಿಯಾಕ್ಕೆ ಗಂಭೀರ್ ಹೊಸ ಆಲೋಚನೆಗಳು'; ರವಿಶಾಸ್ತ್ರಿ!
ಜುಲೈ 26 ಶುಕ್ರವಾರ, ಭಾರತ ತಂಡದ ನೂತನ ಹೆಡ್ ಕೋಚ್ ಆಗಿ ಗೌತಮ್ ಗಂಭೀರ್ ನೇಮಕಗೊಂಡ ನಂತರ ಆಟಗಾರರಲ್ಲಿ ಉತ್ಸಾಹ ಹೆಚ್ಚಿಸಿದೆ. ಇನ್ನೊಂದೆಡೆ ಗೌತಮ್ ಗಂಭೀರ್ ಬಗ್ಗೆ ಟೀಮ್ ಇಂಡಿಯಾದ ಹೆಡ್ ಮುಖ್ಯ ಕೋಚ್ ರವಿಶಾಸ್ತ್ರಿ ತೆರೆಮರೆಯ ಕಥೆಯನ್ನು ಹೇಳಿದ್ದಾರೆ.
ಗೌತಮ್ ಗಂಭೀರ್ ಕೂಡ ರವಿಶಾಸ್ತ್ರಿ ಅವರ ಕೋಚಿಂಗ್‌ನಲ್ಲಿ ಆಡಿದ್ದಾರೆ. ಹೀಗಾಗಿ ಗೌತಮ್ ಗಂಭೀರ್ ಅವರದು ಎಂತಹ ವ್ಯಕ್ತಿತ ಎಂಬುದು ರವಿಶಾಸ್ತ್ರಿ ಅವರಿಗೆ ಗೊತ್ತಿದೆ. ಹೀಗಾಗಿ ಗಂಭೀರ್ ಅವರ ಕೋಚಿಂಗ್‌ನಲ್ಲಿ ಟೀಮ್ ಇಂಡಿಯಾ ಲಾಭ ಪಡೆಯುವ ಬಗ್ಗೆ ರವಿಶಾಸ್ತ್ರಿ ತಿಳಿಸಿದ್ದಾರೆ.

ಗೌತಮ್ ಗಂಭೀರ್ ಇನ್ನೂ ತುಂಬಾ ಚಿಕ್ಕವರಾಗಿದ್ದಾರೆ. ಇದರಿಂದಾಗಿ ಅವರು ಟೀಮ್ ಇಂಡಿಯಾಕ್ಕೆ ಹೊಸ ಆಲೋಚನೆಗಳನ್ನು ತರಬಹುದು ರವಿಶಾಸ್ತ್ರಿ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.
ಗೌತಮ್ ಗಂಭೀರ್ ಐಪಿಎಲ್‌ನಲ್ಲಿ ತಂಡಗಳ ಭಾಗವಾಗಿರುವುದರಿಂದ ವಿಶೇಷವಾಗಿ ವೈಟ್-ಬಾಲ್ ಸ್ವರೂಪದಲ್ಲಿ ಹೆಚ್ಚಿನ ಆಟಗಾರರನ್ನು ತಿಳಿದಿದ್ದಾರೆ. ಹಾಗಾಗಿ ಇದು ರಿಫ್ರೆಶ್ ಆಗಿದೆ ಎಂದು ನಾನು ಭಾವಿಸುತ್ತೇನೆ.
ಗೌತಮ್ ಬಗ್ಗೆ ನಮಗೆ ತಿಳಿದಿದೆ. ಅವರು ಸರಳ ವ್ಯಕ್ತಿಯಾಗಿದ್ದು, ತಮ್ಮದೇ ಆದ ಅಭಿಪ್ರಾಯಗಳನ್ನು ಹೊಂದಿರುತ್ತಾರೆ. ಗಂಭೀರ್‌ಗೆ ಒಳ್ಳೆಯ ವಿಷಯವೆಂದರೆ ಅವರು ಪ್ರಬುದ್ಧ ಮತ್ತು ಸ್ಥಿರವಾದ ಭಾರತ ತಂಡವನ್ನು ಹೊಂದಿದ್ದಾರೆ ಎಂದು ಗಂಭೀರ್ ಅವರನ್ನು ರವಿಶಾಸ್ತ್ರಿ ಹೊಗಳಿದ್ದಾರೆ.
ಆಟಗಾರರನ್ನು ನಿರ್ವಹಿಸುವುದು ಮುಖ್ಯ
ಎಲ್ಲಕ್ಕಿಂತ ಮುಖ್ಯವಾಗಿ ಕೋಚ್ ಆದವರು ಆಟಗಾರರನ್ನು ನಿರ್ವಹಿಸುವುದು ಮುಖ್ಯವಾಗಿದೆ. ಹೀಗಾಗಿ ಗಂಭೀರ್ ಯಾವ ರೀತಿ ಪ್ರದರ್ಶನ ನೀಡುತ್ತಾರೆ ಎಂಬುದು ಕುತೂಹಲ ಮೂಡಿಸಿದೆ. ಗಂಭೀರ್ ಬಳಿ ಎಲ್ಲಾ ಸಂಪನ್ಮೂಲಗಳಿವೆ.
ಕೋಚ್ ಕೆಲಸಕ್ಕೆ ಎಲ್ಲವನ್ನೂ ಹೊಂದಿದ್ದು, ಸಾಕಷ್ಟು ಅನುಭವವೂ ಇದೆ. ಗಂಭೀರ್ ಅವರ ಯಶಸ್ಸಿಗೆ ಪ್ರತಿಯೊಬ್ಬ ಆಟಗಾರನನ್ನು ಅರ್ಥಮಾಡಿಕೊಳ್ಳುವುದು ಮತ್ತು ನಿರ್ವಹಿಸುವುದು ಮುಖ್ಯ ಎಂದು ಶಾಸ್ತ್ರಿ ವಿವರಿಸಿದ್ದಾರೆ.
ಹಲವು ಆಟಗಾರನ್ನು ನೋಡಿರುವ ಗಂಭೀರ್
ನಮ್ಮ ಆಟಗಾರರನ್ನು ಸಾಧ್ಯವಾದಷ್ಟು ಬೇಗ ಗಂಭೀರ್ ಅರ್ಥಮಾಡಿಕೊಳ್ಳುಬೇಕು. ಆಟಗಾರರ ಸಾಮರ್ಥ್ಯಗಳು ಯಾವುವು?, ಯಾವ ರೀತಿಯ ವ್ಯಕ್ತಿತ್ವಗಳು ಮತ್ತು ಅವರ ಸ್ವಭಾವವೇನು? ಒಬ್ಬ ವ್ಯಕ್ತಿಯನ್ನು ಅರ್ಥಮಾಡಿಕೊಳ್ಳಲು ತೆರೆಮರೆಯಲ್ಲಿ ಇಂತವು ಬಹಳಷ್ಟು ನಡೆಯುತ್ತದೆ.
ಇದು ಗಂಭೀರ್‌ನ ಪ್ರಮುಖ ಕೆಲಸ ಎಂದು ನಾನು ಭಾವಿಸುತ್ತೇನೆ. ಅವರು ಸಮಕಾಲೀನನಾಗಿರುವುದರಿಂದ ಮತ್ತೊಮ್ಮೆ ಸಮಸ್ಯೆಯಾಗಬಾರದು ಎಂದು ನಾನು ಭಾವಿಸುತ್ತೇನೆ. ಗಂಭೀರ್ ಅವರು ಕೆಕೆಆರ್ ಮತ್ತು ಲಕ್ನೋ ಸೂಪರ್ ಜೈಂಟ್ಸ್‌ನಲ್ಲಿದ್ದಾಗ ಅನೇಕ ಆಟಗಾರರೊಂದಿಗೆ ಕೆಲಸ ಮಾಡಿದ್ದಾರೆ ಎಂದು ರವಿಶಾಸ್ತ್ರಿ ತಿಳಿಸಿದ್ದಾರೆ.
ಭಾರತ ಮತ್ತು ಶ್ರೀಲಂಕಾ ನಡುವೆ ಜುಲೈ 27 ರಿಂದ ಜುಲೈ 30ರವರೆಗೆ ಮೂರು ಪಂದ್ಯಗಳ ಟಿ20 ಸರಣಿ ನಡೆಯಲಿದೆ. ಇದರ ನಂತರ, ಆಗಸ್ಟ್ 2 ರಿಂದ ಆಗಸ್ಟ್ 7 ರವರೆಗೆ ಅದೇ ಸಂಖ್ಯೆಯ ಪಂದ್ಯಗಳ ಏಕದಿನ ಸರಣಿಯನ್ನು ನಡೆಯಲಿದೆ. ಶ್ರೀಲಂಕಾ ಪ್ರವಾಸದಲ್ಲಿ ಗಂಭೀರ್ ಮೊದಲ ಬಾರಿಗೆ ಕೋಚ ಆಗಿ ಕಾರ್ಯನಿರ್ವಹಿಸಲಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications