Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Ravi Shastri: ವೈಭವ್ ಮುಂದಿರುವ ದೊಡ್ಡ ಸವಾಲಿನ ಬಗ್ಗೆ ರವಿಶಾಸ್ತ್ರಿ ಹೇಳಿದ್ದೇನು?

ಎಲ್ಲೆಡೆ 14 ವರ್ಷದ ಕ್ರಿಕೆಟಿಗ ವೈಭವ್ ಸೂರ್ಯವಂಶಿ ಹೆಸರು ಸದ್ದು ಮಾಡುತ್ತಿದೆ. ಐಪಿಎಲ್ ಮೆಗಾ ಹರಾಜಿನಿಂದಲೂ ವೈಭವ್ ಸೂರ್ಯವಂಶಿ ಸುದ್ದಿಯಲ್ಲಿದ್ದಾರೆ. ಕೇವಲ 13ನೇ ವಯಸ್ಸಿನಲ್ಲಿ ಅವರು ಐಪಿಎಲ್‌ಗೆ ಆಯ್ಕೆಯಾದರು. ಈಗ 14ನೇ ವಯಸ್ಸಿನಲ್ಲಿ ಅವರು ತಮ್ಮ ವೃತ್ತಿಜೀವನದ ಮೊದಲ ಶತಕ ಸಿಡಿಸಿದ್ದಾರೆ. ವೈಭವ್ ಸೂರ್ಯವಂಶಿ ಕೇವಲ ಶತಕ ಗಳಿಸಿದ್ದಲ್ಲದೆ, ಐಪಿಎಲ್ ಇತಿಹಾಸದಲ್ಲಿ ಎರಡನೇ ವೇಗದ ಶತಕ ಗಳಿಸಿದ ಸಾಧನೆಯನ್ನೂ ಮಾಡಿದರು. ಈ ಮೂಲಕ ಅವರು ಎಲ್ಲೆಡೆ ಚರ್ಚೆಯಾಗುತ್ತಿದ್ದಾರೆ.

ವೈಭವ್ ಸೂರ್ಯವಂಶಿ ಆಟಕ್ಕೆ ಹಾಲಿ ಮತ್ತು ಮಾಜಿ ಕ್ರಿಕೆಟಿಗರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಟೀಮ್ ಇಂಡಿಯಾದ ಮಾಜಿ ಹೆಡ್‌ಕೋಚ್ ರವಿಶಾಸ್ತ್ರಿ ಅವರು ವೈಭವ್ ಸೂರ್ಯವಂಶಿ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ. ವೈಭವ್ ಸೂರ್ಯವಂಶಿ ಅವರ ಮುಂದಿನ ದೊಡ್ಡ ಸವಾಲು ಏನು ಮತ್ತು ಅದನ್ನು ಹೇಗೆ ಎದುರಿಸಬೇಖು ಎಂಬುದನ್ನು ಅವರು ಹೇಳಿದ್ದಾರೆ.

ಜೈಪುರದಲ್ಲಿ ನಡೆದ ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ಪರ ವೈಭವ್ ಸೂರ್ಯವಂಶಿ ಕೇಔಲ 35 ಎಸೆತಗಳಲ್ಲಿ ಅಮೋಘ ಶತಕ ಗಳಿಸಿದರು. ಅವರು ತಮ್ಮ ಇನ್ನಿಂಗ್ಸ್‌ನಲ್ಲಿ 11 ಭರ್ಜರಿ ಸಿಕ್ಸರ್ ಸಿಡಿಸಿದರು. ಅವರು ಈಗ ಐಪಿಎಲ್ ಇತಿಹಾಸದಲ್ಲಿ ಅತಿ ವೇಗದ ಶತಕ ಗಳಿಸಿದ ಎರಡನೇ ಬ್ಯಾಟರ್ ಎನಿಸಿಕೊಂಡಿದ್ದಾರೆ. ಈ ದಾಖಲೆಯ ಪಟ್ಟಿಯಲ್ಲಿ ವೆಸ್ಟ್‌ ಇಂಡೀಸ್‌ ಮಾಜಿ ದಿಗ್ಗಜ ಬ್ಯಾಟರ್ ಕ್ರಿಸ್‌ಗೇಲ್ ಹೆಸರಿನಲ್ಲಿದೆ. ಅವರು ಕೇವಲ 30 ಎಸೆತಗಳಲ್ಲಿ ಶತಕ ಗಳಿಸಿದರು. ಇದಲ್ಲದೆ, ವೈಭವ್ ಈಗ ಐಪಿಎಲ್‌ನಲ್ಲಿ ಅತಿ ವೇಗದ ಶತಕ ಗಳಿಸಿದ ಭಾರತ ಆಟಗಾರ ಎಂಬ ಹೆಗ್ಗಳಿಕೆ ಪಾತ್ರರಾಗಿದ್ದಾರೆ. ಈ ಮೂಲಕ 37 ಎಸೆತಗಳಲ್ಲಿ ಶತಕ ಗಳಿಸಿದ್ದ ಯೂಸುಫ್ ಪಠಾಣ್ ದಾಖಲೆಯನ್ನು ಮುರಿದರು.

ರವಿಶಾಸ್ತ್ರಿ ಸಲಹೆ

ವೈಭವ್ ಸೂರ್ಯವಂಶಿ ಶತಕ ಗಳಿಸಿ ಹಲವು ದಾಖಲೆಗಳನ್ನು ಮಾಡುತ್ತಿದ್ದಂತೆ ಸಾಕಷ್ಟು ಮೆಚ್ಚುಗೆ ಸಂಪಾದಿಸಿದರು. ಇದಾದ ಬಳಿಕ ರವಿಶಾಸ್ತ್ರಿ ಅವರು ವೈಭವ್ ಮುಂದಿರುವ ಸವಾಲಿನ ಬಗ್ಗೆ ಮಾತನಾಡಿದ್ದಾರೆ.

"ಈಗ ವೈಭವ್ ಸೂರ್ಯವಂಶಿ ತುಂಬಾ ಚಿಕ್ಕವನು. ಇಂತಹ ಪರಿಸ್ಥಿತಿಯಲ್ಲಿ, ಅವರನ್ನು ಆಡಲು ಬಿಡಿ. ಈ ವಯಸ್ಸಿನಲ್ಲಿಯೂ ನೀವು ವೈಫಲ್ಯವನ್ನು ಎದುರಿಸುತ್ತೀರಿ. ಅವರು ವೈಫಲ್ಯವನ್ನು ಹೇಗೆ ನಿಭಾಯಿಸುತ್ತಾರೆ ಎಂಬುದರ ಮೇಲೆ ಅದು ನಿರ್ಧಾರವಾಗಿರುತ್ತದೆ. ಆಟಗಾರರು ಸಹ ಅನೇಕ ಹೊಸ ವಿಷಯಗಳನ್ನು ಕಂಡು ಹಿಡಿಯುತ್ತಾರೆ. ಮುಂದಿನ ಬಾರಿ ಅವರು ಬ್ಯಾಟಿಂಗ್ ಮಾಡಲು ಬಂದಾಗ, ಅವರ ವಿರುದ್ಧ ಶಾರ್ಟ್ ಬಾಲ್‌ಗಳನ್ನು ಹೆಚ್ಚಾಗಿ ಬಳಸಲಾಗುತ್ತದೆ. ನೀವು ಮೊದಲ ಎಸೆತದಲ್ಲಿ ಸಿಕ್ಸ್ ಹೊಡೆದಾಗ ನಿಮಗೆ ಯಾವುದೇ ಕರುಣೆ ತೋರಿಸುವುದಿಲ್ಲ. ಅವರು 14, 12 ಅಥವಾ 20 ವರ್ಷ ವಯಸ್ಸಿನವರಾಗಿದ್ದರೂ ನಿಮಗೆ ಚಿಂತೆಯಿಲ್ಲ. ಅವರು ಅದೇ ರೀತಿಯ ಮುಂದಿನ ದಿನಗಳಲ್ಲಿ ಕಠಿಣ ಬೌಲಿಂಗ್ ದಾಳಿಯನ್ನು ಎದುರಿಸುತ್ತಾರೆ' ಎಂದು ರವಿಶಾಸ್ತ್ರಿ ತಿಳಿಸಿದ್ದಾರೆ.

Story first published: Tuesday, April 29, 2025, 15:24 [IST]
Other articles published on Apr 29, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+