ಬ್ರಿಸ್ಬೇನ್‌ನಲ್ಲಿ ಬಾರ್ಡರ್-ಗವಾಸ್ಕರ್ ಟ್ರೋಫಿಯ ಮೂರನೇ ಟೆಸ್ಟ್ ಮುಗಿದ ಬಳಿದ ಭಾರತ ತಂಡದ ಅನುಭವಿ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದರು. ಪಂದ್ಯದ ನಂತರ ನಡೆದ ಪತ್ರಿಕಾಗೋಷ್ಠಿಯಲ್ಲಿ ಸ್ವತಃ ಅಶ್ವಿನ್ ತಮ್ಮ 14 ವರ್ಷಗಳ ವೃತ್ತಿಜೀವನಕ್ಕೆ ಅಂತ್ಯ ಹಾಡುವ ಕುರಿತು ಮಾತನಾಡಿರು. ಈ ಸಂದರ್ಭದಲ್ಲಿ ಅಶ್ವಿನ್ ಭಾವುಕರಾಗಿ ಕಾಣಿಸಿಕೊಂಡರು. ನಂತರ ಮಾತನಾಡಿದ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಅವರು ಅಶ್ವಿನ್ ಬಗ್ಗೆ ಬಿಗ್ ರಿವೀಲ್ ಮಾಡಿದ್ದಾರೆ.
ಬ್ರಿಸ್ಬೇನ್ ಟೆಸ್ಟ್ ಪಂದ್ಯದ ಬಳಿಕ ನಡೆದ ಪತ್ರಿಕಾಗೋಷ್ಠಿಯಲ್ಲಿ ಭಾವುಕರಾಗಿ ಮಾತನಾಡಿದ ಅಶ್ವಿನ್, 'ಭಾರತ ತಂಡದ ಆಟಗಾರನಾಗಿ ಅಂತಾರಾಷ್ಟ್ರೀಯ ಕ್ರಿಕೆಟ್‌ನ ಎಲ್ಲಾ ಮಾದರಿಗಳಲ್ಲಿ ಇದು ನನ್ನ ಕೊನೆಯ ದಿನವಾಗಿದೆ ಎಂದಿದ್ದಾರೆ. ಇದಾದ ನಂತರ ಮಾತನಾಡಿದ ರೋಹಿತ್ ಶರ್ಮಾ ಅವರು ಅಶ್ವಿನ್ ನಿವೃತ್ತಿ ಬಗ್ಗೆ ತಿಳಿಸಿದ್ದಾರೆ. ಈ ಕುರಿತು ಮಾಹಿತಿ ಸಂಪೂರ್ಣ ಮಾಹಿತಿ ಇಲ್ಲಿದೆ.

ಪರ್ತ್‌ನಲ್ಲಿ ನಡೆದ ಸರಣಿಯ ಮೊದಲ ಪಂದ್ಯದಲ್ಲಿಯೇ ಅಶ್ವಿನ್ ನಿವೃತ್ತಿ ಘೋಷಣೆ ಮಾಡಲು ರೆಡಿಯಾಗಿದ್ದರು. ಆದರೆ ನಾವು ಅವರನ್ನು ಅಡಿಲೇಡ್ ಟೆಸ್ಟ್ ಪಿಂಕ್ ಬಾಲ್ ಟೆಸ್ಟ್‌ಗೆ ಒಪ್ಪಿಸಿದ್ದವು ಎಂದು ಪತ್ರಿಕಾಗೋಷ್ಠಿಯಲ್ಲಿ ರೋಹಿತ್ ಶರ್ಮಾ ಹೇಳಿದ್ದಾರೆ. 'ನಾನು ಪರ್ತ್ ಟೆಸ್ಟ್ ಪಂದ್ಯಕ್ಕೆ ಬಂದಾಗ ಅಶ್ವಿನ್ ನಿವೃತ್ತಿಯ ಬಗ್ಗೆ ಕೇಳಿದೆ. ಅಶ್ವಿನ್ ತಮ್ಮ ನಿರ್ಧಾರಕ್ಕೆ ಬದ್ಧರಾಗಿದ್ದಾರೆ. ಅವರು ಭಾರತ ಕ್ರಿಕೆಟ್ ತಂಡಕ್ಕೆ ನೀಡಿರುವ ಕೊಡುಗೆ ದೊಡ್ಡದು. ತವರಿನಲ್ಲಿ ಅಶ್ವಿನ್ ಬೌಲಿಂಗ್ ಮ್ಯಾಜಿಕ್‌ನಿಂದ ಹಲವು ಟೆಸ್ಟ್ ಸರಣಿಗಳನ್ನು ಗೆದ್ದಿದ್ದೇವೆ. ಹೀಗಾಗಿ ಅಶ್ವಿನ್ ಮ್ಯಾಚ್ ವಿನ್ನರ್ ಎಂದಿದ್ದಾರೆ.
ಅಶ್ವಿನ್ ಅವರಿಗೆ 17 ವರ್ಷ ವಯಸ್ಸು ಇದ್ದಾಗನಿಂದಲ್ಲೂ ಅವರೊಂದಿಗೆ ನಾನು ಕ್ರಿಕೆಟ್ ಆಡುತ್ತಿದ್ದೇನೆ. ಆರಂಭದಲ್ಲಿ ಅವರು ಇನ್ನಿಂಗ್ಸ್ ತೆರೆಯುತ್ತುದ್ದರು. ಆದರೆ ಕೆಲವು ವರ್ಷಗಳ ಬಳಿಕ ಅವರು 5 ಕ್ಕೂ ಹೆಚ್ಚು ವಿಕೆಟ್‌ಗಳನ್ನು ತೆಗೆದುಕೊಂಡಿದ್ದು ಕೇಳಿ ನಮಗೆ ಅಚ್ಚರಿ ಆಗಿತ್ತು. ಬ್ಯಾಟರ್ ಆಗಿದ್ದ ಅಶ್ವಿನ್ ಬ್ಯಾಲರ್ ಆಗಿ ಯಶಸ್ಸು ಸಾಧಿಸಿದ್ದು ಅಚ್ಚರಿ ವಿಷಯ ಎಂದು ರೋಹಿತ್ ಶರ್ಮಾ ತಮ್ಮ ಹಾಗು ಅಶ್ವಿನ್ ನಡುವಿನ ಕ್ರಿಕೆಟ್ ಒಡನಾಟದ ಬಗ್ಗೆ ಮಾತನಾಡಿದ್ದಾರೆ.
ಕ್ರಿಕೆಟಿಗನಾಗಿ ನನ್ನಲ್ಲಿ ಇನ್ನೂ ಸ್ವಲ್ಪ ಉತ್ಸಾಹ ಉಳಿದಿದೆ ಎಂದುಕೊಂಡಿದ್ದೇನೆ. ನಾನು ಈ ಉತ್ಸಾಹವನ್ನು ಕ್ಲಬ್ ಮಟ್ಟದ ಕ್ರಿಕೆಟ್‌ನಲ್ಲಿ ತೋರಿಸಲು ಬಯಸುತ್ತೇನೆ. ಹಾಗಾಗಿ ಇದು ನನ್ನ ಕೊನೆಯ ದಿನವಾಗಿದೆ. ನಾನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕ್ರಿಕೆಟ್ ಆಡುವುದನ್ನು ತುಂಬಾ ಆನಂದಿಸಿದ್ದೇನೆ. ರೋಹಿತ್ ಮತ್ತು ನನ್ನ ಅನೇಕ ಸಹ ಆಟಗಾರರೊಂದಿಗೆ ಸಾಕಷ್ಟು ನೆನಪುಗಳನ್ನು ಹೊಂದಿದ್ದೇನೆ. ವಿರಾಟ್ ಮತ್ತು ರೋಹಿತ್ ಅವರೊಂದಿಗೆ ಆಡಿರುವುದನ್ನು ನೆನಪಿಸಿಕೊಳ್ಳುತ್ತೇನೆ ಎಂದಿದ್ದಾರೆ.