ಟೀಮ್ ಇಂಡಿಯಾ ಸ್ಟಾರ್ ಬ್ಯಾಟರ್ ಮತ್ತು ಗುಜರಾತ್ ಟೈಟಾನ್ಸ್ ತಂಡದ ನಾಯಕ ಶುಭಮನ್ ಗಿಲ್ ಇತ್ತೀಚಿನ ದಿನಗಳಲ್ಲಿ ಐಪಿಎಲ್‌ನಲ್ಲಿ ಸದ್ದು ಮಾಡುತ್ತಿದ್ದಾರೆ. ಶುಭಮನ್ ಗಿಲ್ ನಾಯುಕನಾಗು ಉತ್ತಮ ಫಾರ್ಮ್‌ನಲ್ಲಿದ್ದಾರೆ. ಅದಕ್ಕಾಗಿಯೇ ಅವರ ನೇತೃತ್ವದ ಗುಜರಾತ್ ಟೈಟಾನ್ಸ್ ತಂಡ ಪಾಯಿಂಟ್ ಟೇಬಲ್‌ನಲ್ಲಿ ಆಗ್ರಸ್ಥಾನದಲ್ಲಿದೆ. ಶುಭಮನ್ ಗಿಲ್ ತಮ್ಮ ವೃತ್ತಿಜೀವನದಲ್ಲಿ ಎಷ್ಟು ಪ್ರಸಿದ್ಧರೋ, ಅಷ್ಟೇ ಪ್ರಸಿದ್ಧಿಯಲ್ಲಿ ತಮ್ಮ ವೈಯಕ್ತಿಕ ಜೀವನದಿಂದಲೂ ಇದ್ದಾರೆ.
ಶುಭಮನ್ ಗಿಲ್ ಮೈದಾನದ ಒಳಗೆ ಮತ್ತು ಹೊರಗೆ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಹೊಂದಿದ್ದಾರೆ. ಪ್ರತಿದಿನ ಅವರ ಡೇಟಿಂಗ್ ಬಗ್ಗೆ ಒಂದಲ್ಲ ಒಂದು ಸುದ್ದಿ ವೈರಲ್ ಆಗುತ್ತಿರುತ್ತದೆ. ಆದರೆ, ಕಳೆದು ಕೆಲವು ವರ್ಷಗಳಿಂದ, ಗಿಲ್ ಅವರ ಹೆಸರು ಟೀಮ್ ಇಂಡಿಯಾದ ದಿಗ್ಗಜ ಬ್ಯಾಟರ್ ಸಚಿನ್ ತೆಂಡೂಲ್ಕರ್ ಅವರ ಮಗಳು ಸಾರಾ ತೆಂಡೂಲ್ಕರ್ ಅವರೊಂದಿಗೆ ಕೇಳಿ ಬರುತ್ತಿದೆ.

ಸಾರಾ ತೆಂಡೂಲ್ಕರ್ ಅವರೊಂದಿಗೆ ತಮ್ಮ ಹೆಸರು ಕೇಳಿ ಬಂದರೂ, ಶುಭಮನ್ ಗಿಲ್ ಇಲ್ಲಿವರೆಗೆ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಈಗ ಮೊದಲ ಬಾರಿಗೆ ಅವರು ಈ ವಿಷಯದ ಬಗ್ಗೆ ಮೌನ ಮುರಿದು ತಮ್ಮ ಸಂಬಂಧದ ಬಗ್ಗೆ ಹೇಳಿದ್ದಾರೆ.
ಐಪಿಎಲ್ ಸಮಯದಲ್ಲಿ ಸಂದರ್ಶನವೊಂದರಲ್ಲಿ ಮಾತನಾಡಿರುವ ಶುಭಮನ್ ಗಿಲ್ ತಮ್ಮ ಸಂಬಂಧದ ಬಗ್ಗೆ ತಿಳಿಸಿದ್ದಾರೆ. ನಾನು ಮೂರು ವರ್ಷಗಳಿಂದ ಒಂಟಿಯಾಗಿದ್ದೇನೆ ಎಂದು ಹೇಳಿದ್ದಾರೆ. ಈ ಮೂಲಕ ಅವರು ಎಲ್ಲಾ ಊಹಾಪೋಹಗಳು ಮತ್ತು ವದಂತಿಗಳಿಗೆ ಅಂತ್ಯ ಹಾಡಿದ್ದಾರೆ. ಸಾರಾ ಜೊತೆಗಿನ ಸಂಬಂಧದ ವದಂತಿಗಳನ್ನು ಅವರಿ ತಮಾಷೆ ಎಂದು ಬಣ್ಣಿಸಿದ್ದಾರೆ.
ನಾನು ಮೂರು ವರ್ಷಗಳಿಂದ ಒಂಟಿಯಾಗಿದ್ದೇನೆ. ನನ್ನನ್ನು ಬೇರೆ ಬೇರೆ ಜನರೊಂದಿಗೆ ಸಂಪರ್ಕಿಸುವ ಬಗ್ಗೆ ಸಾಕಷ್ಟು ಊಹಾಪೋಹಗಳು ಮತ್ತು ವದಂತಿಗಳಿವೆ. ಕೆಲವೊಮ್ಮೆ ಈ ವದಂತಿಗಳು ಎಷ್ಟು ಹಾಸ್ಯಾಸ್ಪದವಾಗಿವೆಯೆಂದರೆ, ನಾನು ನನ್ನ ಜೀವನದಲ್ಲಿ ಎಂದಿಗೂ ನೋಡಿರದ ಅಥವಾ ಭೇಟಿಯಾಗದ ಜನರೊಂದಿಗೆ ಸಂಬಂಧ ಹೊಂದಿದ್ದೇನೆ. ನಾನು ಈ ವ್ಯಕ್ತಿಯೊಂದಿಗೆ ಏಕೆ ಇದ್ದೇನೆ ಮತ್ತು ಈ ವ್ಯಕ್ತಿಯೊಂದಿಗೆ ನಾನು ಬೇರೆಲ್ಲಿ ಇರುತ್ತೇನೆ ಎಂಬ ವದಂತಿಗಳನ್ನು ನಾನು ಕೇಳುತ್ತಲೇ ಇರುತ್ತೇನೆ ಎಂದು ಸಂದರ್ಶನದಲ್ಲಿ ಶುಭಮನ್ ಗಿಲ್ ಹೇಳಿದ್ದಾರೆ.
ನಾನು ನನ್ನ ವೃತ್ತಿಪರ ವೃತ್ತಿಜೀವನದಲ್ಲಿ ಏನು ಮಾಡಬೇಕೆಂಬುದರ ಮೇಲೆ ಹೆಚ್ಚು ಗಮನಹರಿಸಿದ್ದೇನೆ. ನನ್ನ ಜೀವನದಲ್ಲಿ ವರ್ಷಕ್ಕೆ 300 ದಿನ ಯಾರೊಂದಿಗಾದರೂ ಇರಲು ಅವಕಾಶವಿಲ್ಲ. ನಾವು ಎಲ್ಲೋ ಪ್ರಯಾಣಿಸುತ್ತಿರುತ್ತೇವೆ. ಆದ್ದರಿಂದ ಯಾರೊಂದಿಗೂ ಇರಲು ಅಥವಾ ಯಾರೊಂದಿಗೂ ಸಂಬಂಧದಲ್ಲಿರಲು ಸಮಯವಿಲ್ಲ ಎಂದು ಶುಭಮನ್ ಗಿಲ್ ಊಪೋಹಗಳಿಗೆ ತೆರೆ ಎಳೆದಿದ್ದಾರೆ.