Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Axar Patel: ಗೆಲ್ಲಬಹುದಾದ ಪಂದ್ಯವನ್ನು ಸೋತ ಬಗ್ಗೆ ಡೆಲ್ಲಿ ನಾಯಕ ಹೇಳಿದ್ದೇನು?

ಐಪಿಎಲ್ 2025 ರಲ್ಲಿ ಗೆಲುವಿನ ಅಲೆಯಲ್ಲಿದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಈಗ ಮಂಕಾಗಿದೆ. ಕೋಲ್ಕತ್ತಾ ನೈಟ್ ರೈಡರ್ಸ್ 8 ವರ್ಷಗಳ ನಂತರ ಡೆಲ್ಲಿ ತಂಡವನ್ನು ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ಸೋಲಿಸಿತು. ಡೆಲ್ಲಿ ಪರ ಫಾಫ್ ಡು ಪ್ಲೆಸಿಸ್ ಅದ್ಭುತ ಅರ್ಧಶತಕ ಗಳಿಸಿ ಗೆಲುವು ತಂದು ಕೊಡಲು ಹೋರಾಟ ನಡೆಸಿದರು. ಮತ್ತೊಂದೆಡೆ ನಾಯಕ ಅಕ್ಸರ್ ಪಟೇಲ್ ಕೂಡ ಅದ್ಭುತ ಪ್ರದರ್ಶನ ನೀಡಿದರು. ಇದರ ಹೊರತಾಗಿಯೂ ಡೆಲ್ಲಿ ತಂಡವು 14 ರನ್‌ಗಳ ಅಂತರದಲ್ಲಿ ಸೋಲನ್ನು ಎದುರಿಸಿತು. ಸತತ ಎರಡನೇ ಸೋಲಿನ ನಂತರ ನಾಯಕ ಅಕ್ಸರ್ ಪಟೇಲ್ ಬೇಸರ ವ್ಯಕ್ತಪಡಿಸಿದ್ದಾರೆ.

ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ಗೆಲ್ಲುವ ಪಂದ್ಯವನ್ನು ಸೋತಿತು. ಇದಕ್ಕೆ ತಂಡದ ಬೌಲರ್ಸ್ ಪ್ರಮುಖ ಕಾರಣ ಎಂದು ಡೆಲ್ಲಿ ನಾಯಕ ಅಕ್ಸರ್ ಪಟೇಲ್ ಹೇಳಿದ್ದಾರೆ.

What did the Delhi captain say about losing a winnable match against KKR

ಕೆಕೆಆರ್ ವಿರುದ್ಧ ಅಕ್ಸರ್ ಪಟೇಲ್ ನಾಯಕನ ಆಟವಾಡಿದರು. ಟಾಸ್ ಗೆದ್ದ ನಂತರ, ಅವರು ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದರು. ಅಕ್ಸರ್ ಮತ್ತು ವಿಪ್ರಜ್ ನಿಗಮ್ ತಲಾ 2 ವಿಕೆಟ್ ಪಡೆದರೆ, ಮಿಚೆಲ್ ಸ್ಟಾರ್ಕ್ ಮೂರು ವಿಕೆಟ್ ಕಬಳಿಸಿದರು. ಇದಾದ ನಂತರ ಅಕ್ಸರ್ ಮತ್ತು ವಿಪ್ರಜ್ ಬ್ಯಾಟಿಂಗ್‌ನಲ್ಲಿ ಅಬ್ಬರಿಸಿದರು. ಇವರಿಬ್ಬರ ಅಬ್ಬರಕ್ಕೆ ಕೆಕೆಆರ್ ಸಂಕಷ್ಟಕ್ಕೆ ಸಿಲುಕಿತ್ತು. ಆದರೆ ಕೊನೆಯ ಓವರ್ ಗಳಲ್ಲಿ ಕೆಕೆಆರ್ ಸ್ಪಿನ್ನರ್ಸ್ ಪಂದ್ಯದ ಗತಿಯನ್ನು ಬದಲಾಯಿಸಿದರು. ಅಕ್ಷರ್ 23 ಎಸೆತಗಳಲ್ಲಿ 4 ಬೌಂಡರಿ ಮತ್ತು 3 ಸಿಕ್ಸರ್‌ಗಳ ನೆರವಿನಿಂದ 43 ರನ್ ಗಳಿಸಿದರೆ, ವಿಪ್ರಜ್ 19 ಎಸೆತಗಳಲ್ಲಿ 5 ಬೌಂಡರಿ ಮತ್ತು 2 ಸಿಕ್ಸರ್‌ಗಳ ಸಹಾಯದಿಂದ 38 ರನ್ ಬಾರಿಸಿದರು.

ಅಕ್ಸರ್ ಪಟೇಲ್ ಹೇಳಿದ್ದೇನು?

ಪಂದ್ಯದ ನಂತರ ಮಾತನಾಡಿದ ಅಕ್ಸರ್ ಪಟೇಲ್, ಪಿಚ್‌ಗೆ ಅನುಗುಣವಾಗಿ ನಾವು ಪವರ್ ಪ್ಲೇನಲ್ಲಿ ಚೆನ್ನಾಗಿ ಬೌಲಿಂಗ್ ಮಾಡಲಿಲ್ಲ. ನಾವು 15-20 ರನ್‌ಗಳನ್ನು ಹೆಚ್ಚುವರಿಯಾಗಿ ನೀಡಿದ್ದೆವು. ನಾವು ಬ್ಯಾಟಿಂಗ್ ಮಾಡುವಾಗ ಕೆಲವು ವಿಕೆಟ್‌ಗಳನ್ನು ಸುಲಭವಾಗಿ ಕಳೆದುಕೊಂಡೆವು. ಸಕಾರಾತ್ಮಕ ವಿಷಯವೆಂದರೆ ಪವರ್‌ಪ್ಲೇ ನಂತರ ನಾವು ಚೆನ್ನಾಗಿ ಆಡಿದವು. ಬ್ಯಾಟಿಂಗ್ ವಿಷಯದಲ್ಲಿ, ಕೆಲವು ಬ್ಯಾಟರ್ಸ್ ವಿಫಲರಾಗಿದ್ದರೂ, ನಮ್ಮಲ್ಲಿ 2-3 ಮಂದಿ ಕೊಡುಗೆ ನೀಡಿ ಪಂದ್ಯವನ್ನು ಬಹಳ ಹತ್ತಿರ ತೆಗೆದುಕೊಂಡು ಹೋದರು. ವಿಪ್ರರಾಜ್ ಬ್ಯಾಟಿಂಗ್ ಮಾಡುವಾಗ ಭರವಸೆ ಇತ್ತು. ಅಶುತೋಷ್ ಇದ್ದಿದ್ದರೆ ಮೊದಲ ಪಂದ್ಯವನ್ನು ಗೆಲ್ಲುತ್ತಿದ್ದೆವು ಎಂದು ಹೇಳಿದ್ದಾರೆ.

ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಕೋಲ್ಕತ್ತಾ ನೈಟ್ ರೈಡರ್ಸ್ 20 ಓವರ್‌ಗಳಲ್ಲಿ 9 ವಿಕೆಟ್‌ಗಳ ನಷ್ಟಕ್ಕೆ 209 ರನ್ ಗಳಿಸಿತು. ಗೆಲ್ಲಲು 210 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್ 20 ಓವರ್‌ಗಳಲ್ಲಿ 9 ವಿಕೆಟ್‌ಗಳ ನಷ್ಟಕ್ಕೆ190 ರನ್‌ಗಳನ್ನು ಮಾತ್ರ ಗಳಿಸಲು ಶಕ್ತವಾಯಿತು. ಇದರೊಂದಿಗೆ ಪಂದ್ಯವನ್ನು ಡೆಲ್ಲಿ 14 ರನ್‌ಗಳಿಂದ ಸೋತಿತು.

Story first published: Wednesday, April 30, 2025, 6:00 [IST]
Other articles published on Apr 30, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+