For Quick Alerts
ALLOW NOTIFICATIONS  
For Daily Alerts
 

Paris Olympics 2024: ಒಲಿಂಪಿಕ್ಸ್‌ನಲ್ಲಿ ಭಾಗವಹಿಸುತ್ತಿರುವ ಭಾರತದ ಅಥ್ಲೀಟ್‌ಗಳ ಬಗ್ಗೆ ವಿರಾಟ್ ಕೊಹ್ಲಿ ಹೇಳಿದ್ದೇನು?

ಜುಲೈ 15 ಸೋಮವಾರ, ಭಾರತ ತಂಡದ ಸ್ಟಾರ್ ಬ್ಯಾಟರ್‌ ವಿರಾಟ್ ಕೊಹ್ಲಿ ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಹೃದಯಸ್ಪರ್ಶಿ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಮುಂಬರುವ ಪ್ಯಾರಿಸ್ ಒಲಿಂಪಿಕ್ಸ್ 2024ರಲ್ಲಿ ದೇಶವನ್ನು ಪ್ರತಿನಿಧಿಸಲಿರುವ ಎಲ್ಲಾ ಭಾರತೀಯ ಅಥ್ಲೀಟ್‌ಗಳನ್ನು ಬೆಂಬಲಿಸುವಂತೆ ವಿರಾಟ್ ಈ ವೀಡಿಯೊದಲ್ಲಿ ದೇಶವಾಸಿಗಳಿಗೆ ಮನವಿ ಮಾಡಿದ್ದಾರೆ .

ಜುಲೈ 26 ರಿಂದ ಪ್ರಾರಂಭವಾಗುವ 2024ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತವನ್ನು 118 ಭಾರತೀಯ ಅಥ್ಲೀಟ್‌ಗಳು ಪ್ರತಿನಿಧಿಸುತ್ತಿದ್ದಾರೆ. ಎಲ್ಲಾ ಅಥ್ಲೀಟ್‌ಗಳು ಪ್ರಬಲವಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಪದಕಗಳನ್ನು ಗೆಲ್ಲುವ ನಿರೀಕ್ಷೆಯಲ್ಲಿದ್ದಾರೆ.

What did Virat Kohli say about Indian athletes participating in Paris Olympics 2024

ವಿರಾಟ್‌ ಕೊಹ್ಲಿ ಹೇಳಿಕೆ

ಭಾರತದ ಅಥ್ಲೀಟ್‌ಗಳಿಗೆ ಬೆಂಬಲ ನೀಡುವಂತೆ ವಿರಾಟ್ ಒತ್ತಾಯಿಸಿರುವ ವಿಡಿಯೋದಲ್ಲಿ , ಹಿಂದೂಸ್ತಾನ್, ಭಾರತವನ್ನು ಹಾವು ಮೋಡಿ ಮಾಡುವವರು ಮತ್ತು ಆನೆಗಳ ನಾಡು ಎಂದು ಜಗತ್ತು ಭಾವಿಸಿದ ಕಾಲವಿತ್ತು. ಇದು ಕಾಲಕ್ಕೆ ತಕ್ಕಂತೆ ಬದಲಾಗಿದೆ.

ಇಂದು ನಾವು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ, ಜಾಗತಿಕ ಟೆಕ್ ಹಬ್ ಎಂದು ಕರೆಸಿಕೊಳ್ಳುತ್ತಿದ್ದೇವು. ನಾವು ಕ್ರಿಕೆಟ್, ಬಾಲಿವುಡ್, ಸ್ಟಾರ್ಟ್-ಅಪ್ ಯುನಿಕಾರ್ನ್ ಮತ್ತು ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಗೆ ಹೆಸರುವಾಸಿಯಾಗಿದ್ದೇವೆ. ಹಾಗಾದರೆ, ಈ ಮಹಾನ್ ರಾಷ್ಟ್ರಕ್ಕೆ ಮುಂದಿನ ದೊಡ್ಡ ವಿಷಯ ಯಾವುದು? ಅಂದರೆ, ಚಿನ್ನ, ಹೆಚ್ಚು ಬೆಳ್ಳಿ ಮತ್ತು ಹೆಚ್ಚು ಕಂಚು ಗೆಲ್ಲುವುದು ಎಂದು ಹೇಳಿದ್ದಾರೆ.

'ನಮ್ಮ ಸಹೋದರ ಸಹೋದರಿಯರು ಪದಕದ ಹಸಿವಿನಿಂದ ಪ್ಯಾರಿಸ್‌ಗೆ ಹೋಗುತ್ತಿದ್ದಾರೆ. ನಮ್ಮ ಕ್ರೀಡಾಪಟುಗಳು ಟ್ರ್ಯಾಕ್ ಮತ್ತು ಫೀಲ್ಡ್ ಮತ್ತು ಅಂಕಣ ಮತ್ತು ರಿಂಗ್‌ಗೆ ಹೆಜ್ಜೆ ಹಾಕುತ್ತಿರುವಾಗ ನಮ್ಮಲ್ಲಿ ಒಂದು ಶತಕೋಟಿ ಜನರು ಆತಂಕ ಮತ್ತು ಉತ್ಸಾಹದಿಂದ ಅವರನ್ನು ವೀಕ್ಷಿಸುತ್ತೇವೆ.

'ಇಂಡಿಯಾ, ಇಂಡಿಯಾ, ಇಂಡಿಯಾ' ಘೋಷಣೆಗಳು ಭಾರತದ ಪ್ರತಿಯೊಂದು ಪ್ರದೇಶ ಮತ್ತು ಮೂಲೆ ಮೂಲೆಯಲ್ಲಿ ಕೇಳಿಸುತ್ತದೆ. ಕ್ರೀಡಾಪಟುಗಳು ಹೆಮ್ಮೆಯಿಂದ ತ್ರಿವರ್ಣ ಧ್ವಜವನ್ನು ಹಾರಿಸುವ ಸಂಕಲ್ಪದೊಂದಿಗೆ ವೇದಿಕೆ ಸಮೀಪಿಸುತ್ತಿರುವಾಗ ಅವರ ಮುಖಗಳನ್ನು ನೆನಪಿಸಿಕೊಳ್ಳುವಲ್ಲಿ ನನ್ನೊಂದಿಗೆ ಸೇರಿ ಎಂದು ವಿಡಿಯೋದಲ್ಲಿ ಅಥ್ಲೀಟ್‌ಗಳಿಗೆ ಬೆಂಬಲ ನೀಡುವಂತೆ ಮನವಿ ಮಾಡಿದ್ದಾರೆ.

ಈ ವಿಡಿಯೋದ ಕೊನೆಯಲ್ಲಿ ಕೊಹ್ಲಿ ಜೈ ಹಿಂದ್ ಮತ್ತು ಗುಡ್ ಲಕ್ ಇಂಡಿಯಾ ಎಂದು ಶುಭ ಹಾರೈಸಿದ್ದಾರೆ.

ಟೋಕಿಯೊ ಒಲಿಂಪಿಕ್ಸ್ 2020ರಲ್ಲಿ ಭಾರತೀಯ ಕ್ರೀಡಾಪಟುಗಳು ಸಾಧಿಸಿದ ಏಳು ಪದಕಗಳನ್ನು ಗೆದ್ದಿದ್ದರು. ಆದರೆ, ಈ ಬಾರಿ ಭಾರತ ಶೂಟಿಂಗ್, ಜಾವೆಲಿನ್‌, ಬ್ಯಾಡ್ಮಿಂಟನ್, ಕುಸ್ತಿ ಮತ್ತು ಬಾಕ್ಸಿಂಗ್ ಸ್ಪರ್ಧೆಗಳಲ್ಲಿ ಪದಕ ಗೆಲ್ಲುವ ನಿರೀಕ್ಷೆಯಲ್ಲಿದೆ.

Story first published: Monday, July 15, 2024, 16:07 [IST]
Other articles published on Jul 15, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+