For Quick Alerts
ALLOW NOTIFICATIONS  
For Daily Alerts
 

Rohit Sharma: ರೋಹಿತ್ ಶರ್ಮಾ ನೆನಪಿನ ಶಕ್ತಿ ಬಗ್ಗೆ ಮಾಜಿ ಬ್ಯಾಟಿಂಗ್ ಕೋಚಿಂಗ್ ಬಿಚ್ಚಿಟ್ಟ ಭಯಾನಕ ಸತ್ಯ!

ಆಗಸ್ಟ್ 19 ಸೋಮವಾರ, ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಮರೆವಿನ ಬಗ್ಗೆ ಎಲ್ಲರಿಗೂ ಗೊತ್ತಿರುವ ವಿಷಯ. ಹೋಟೆಲ್‌ಗಳು, ವಿಮಾನಗಳು ಹಾಗು ಇತರ ಸ್ಥಳಗಳಲ್ಲಿ ಅವರು ತಮ್ಮ ವಸ್ತುಗಳನ್ನು ಅನೇಕ ಬಾರಿ ಬಿಟ್ಟು ಹೋಗಿದ್ದಾರೆ. ಮದುವೆಯ ಉಂಗುರ ಕೂಡ ಒಮ್ಮೆ ಕಳೆದುಕೊಂಡಿದ್ದರು. ಆದರೆ ಹೇಗೋ ಉಂಗುರ ಸಿಕ್ಕಿತು.

ಈ ಬಗ್ಗೆ ಸ್ವತಃ ರೋಹಿತ್ ಮತ್ತು ಅವರ ಪತ್ನಿ ರಿತಿಕಾ ಹಲವು ಸಂದರ್ಶನಗಳಲ್ಲಿ ಸಾಕಷ್ಟು ಬಾರಿ ಮಾತನಾಡಿದ್ದಾರೆ. ಇದೀಗ ಟೀಮ್ ಇಂಡಿಯಾದ ಮಾಜಿ ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋಡ್ ಭಯಾನಕ ಸತ್ಯವನ್ನು ಬಿಚ್ಚಿಟ್ಟಿದ್ದಾರೆ. ವಿಕ್ರಮ್ ಟಿ20 ವಿಶ್ವಕಪ್ ವರೆಗೂ ಟೀಮ್ ಇಂಡಿಯಾ ಜೊತೆಗಿದ್ದರು. ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾವನ್ನು ಸೋಲಿಸುವ ಮೂಲಕ ಭಾರತ ಎರಡನೇ ಬಾರಿಗೆ ಟಿ20 ವಿಶ್ವಕಪ್ ಗೆದ್ದುಕೊಂಡಿತು.

What former batting coach had to say about Rohit Sharma memory

ವಿಕ್ರಮ್ ರಾಥೋಡ್ ಹೇಳಿದ್ದೇನು?

'ಫೈಂಡ್ ಎ ವೇ ವಿತ್ ತರುವರ್ ಕೊಹ್ಲಿ' ಪಾಡ್‌ಕಾಸ್ಟ್‌ನಲ್ಲಿ ವಿಕ್ರಮ್ ರಾಥೋಡ್ ಅವರು ರೋಹಿತ್ ಶರ್ಮಾ ನಾಯಕತ್ವದ ಸಾಮರ್ಥ್ಯವನ್ನು ಶ್ಲಾಘಿಸಿದ್ದಾರೆ. ಈ ವೇಳೆ ರೋಹಿತ್ ಶರ್ಮಾ ಅವರ ಮರೆವಿನ ಬಗ್ಗೆ ಕೂಡ ತಿಳಿಸಿದ್ದಾರೆ.

"ಟಾಸ್ ನಂತರ ರೋಹಿತ್ ಬ್ಯಾಟಿಂಗ್ ಅಥವಾ ಫೀಲ್ಡಿಂಗ್ ಮಾಡುವ ನಿರ್ಧಾರವನ್ನು ಮರೆತುಬಿಡಬಹುದು. ಟಾಸ್ ಸಮಯದಲ್ಲಿ ಅವರು ಆಟಗಾರರ ಹೆಸರನ್ನು ಸಹ ಮರೆತು ಬಿಡಬಹುದು. ಇದಲ್ಲದೆ, ಅವರು ತಮ್ಮ ಪಾಸ್‌ಪೋರ್ಟ್ ಅಥವಾ ಐಪ್ಯಾಡ್ ಅನ್ನು ಮರೆತುಬಿಡಬಹುದು. ಆದರೆ ಯಾವುದೇ ಪಂದ್ಯದಲ್ಲಿ ಭಾರತಕ್ಕಾಗಿ ಆಡುವಾಗ ಅವರು ತಮ್ಮ ತಂತ್ರವನ್ನು ಎಂದಿಗೂ ಮರೆಯುವುದಿಲ್ಲ" ಎಂದು ರಾಥೋಡ್ ಹೇಳಿದ್ದಾರೆ.

ರೋಹಿತ್ ನಾಯಕತ್ವ

ವಿರಾಟ್ ಕೊಹ್ಲಿ ಅಧಿಕಾರಾವಧಿ ಮುಗಿದ ನಂತರ ರೋಹಿತ್ ಪೂರ್ಣ ಸಮಯದ ಭಾರತದ ತಂಡದ ನಾಯಕರಾಗಿ ಜವಾಬ್ದಾರಿಯನ್ನು ವಹಿಸಿಕೊಂಡರು. ಅವರ ನಾಯಕತ್ವದಲ್ಲಿ, ಟೀಮ್ ಇಂಡಿಯಾ 2023ರ ಏಷ್ಯಾ ಕಪ್ ಮತ್ತು 2024ರ ಟಿ20 ವಿಶ್ವಕಪ್ ಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ಆದರೆ 2023ರ ಏಕದಿನ ವಿಶ್ವಕಪ್ ಮತ್ತು ಅದೇ ವರ್ಷ ನಡೆದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್‌ನಲ್ಲಿ ಸೋಲು ಕಂಡು ರನ್ನರ್ ಅಪ್ ಆಗಿತ್ತು.

Story first published: Monday, August 19, 2024, 19:11 [IST]
Other articles published on Aug 19, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+