For Quick Alerts
ALLOW NOTIFICATIONS  
For Daily Alerts
 

Final IPL 2024: ಮಳೆಯಿಂದಾಗಿ SRH vs KKR ಪಂದ್ಯ ರದ್ದಾದರೆ ಏನಾಗಬಹುದು?

ಮೇ 26 ಭಾನುವಾರ, ಭಾರೀ ಕುತೂಹಲ ಮೂಡಿಸಿದ್ದ 2024ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌)ನ ಫೈನಲ್ ಪಂದ್ಯ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್‌) ಮತ್ತು ಸನ್ ರೈಸರ್ಸ್ ಹೈದರಾಬಾದ್ (ಎಸ್‌ಆರ್‌ಹೆಚ್‌) ನಡುವೆ ನಡೆಯಲಿದೆ.

ಇಂದು ಸಂಜೆ 7.30 ಗಂಟೆಗೆ ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಪಂದ್ಯ ಆರಂಭವಾಗಲಿದೆ. ಎರಡೂ ತಂಡಗಳು ಬಲಿಷ್ಠವಾಗಿದ್ದು, ಫೈನಲ್‌ ರಣರೋಚಕದಿಂದ ಕೂಡಿದೆ.

What happens if SRH vs KKR final of IPL 2024 is canceled due to rain

ಕ್ವಾಲಿಫೈಯರ್-1ರಲ್ಲಿ ಹೈದರಾಬಾದ್ ಅನ್ನು ಸೋಲಿಸುವ ಮೂಲಕ ಕೋಲ್ಕತ್ತಾ ಫೈನಲ್‌ಗೆ ನೇರ ಟಿಕೆಟ್ ಪಡೆದಿತ್ತು. ಹೀಗಾಗಿ ಫೈನಲ್‌ನಲ್ಲಿಯೂ ಗೆಲ್ಲುವ ಕೆಕೆಆರ್‌ ತಂಡದ ಆತ್ಮವಿಶ್ವಾಸ ಹೆಚ್ಚಿಸಿದೆ. ಇತ್ತ ಹೈದರಾಬಾದ್‌ ಸೋಲಿನ ಸೇಡನ್ನು ತೀರಿಸಿಕೊಳ್ಳಲು ಸಜ್ಜಾಗಿದೆ.

ಮಳೆ ಆಗುವ ಸಾಧ್ಯತೆ!

ಎಸ್‌ಆರ್‌ಹೆಚ್‌ ಮತ್ತು ಕೆಕೆಆರ್‌ ನಡುವಿನ ಫೈನಲ್‌ ಪಂದ್ಯಕ್ಕೆ ಮಳೆ ಅಡ್ಡಿಯಾಗುವ ಸಾಧ್ಯತೆ ಇದೆ. ಶನಿವಾರ ಸಂಜೆ ಚೆನ್ನೈನಲ್ಲಿ ಭಾರೀ ಮಳೆಯಾಗಿದ್ದು, ಕೆಕೆಆರ್ ಅಭ್ಯಾಸದ ಅವಧಿಯನ್ನು ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ.

ಹೀಗಾಗಿ ಇಂದು ನಡೆಯಲಿರುವ ಫೈನಲ್‌ಗೆ ಮಳೆ ಅಡ್ಡಿಪಡಿಸಲಿದೆಯೇ ಎಂಬ ಟೆನ್ಷನ್ ಅಭಿಮಾನಿಗಳಲ್ಲಿ ಮೂಡಿದೆ. ಏಕೆಂದರೆ ಶನಿವಾರ ಯಾವುದೇ ಮುನ್ಸೂಚನೆ ಇಲ್ಲದೆ ಚೆನ್ನೈನಲ್ಲಿ ಮಳೆಯಾಗಿದೆ.

What happens if SRH vs KKR final of IPL 2024 is canceled due to rain

ಹವಾಮಾನ ಇಲಾಖೆಯ ವರದಿ ಪ್ರಕಾರ ಇಂದಿನ ಮಳೆ ಫೈನಲ್ ಪಂದ್ಯಕ್ಕೆ ಅಡ್ಡಿಯಾಗುವುದಿಲ್ಲ. ಸಂಜೆ ವೇಳೆ ಮೋಡ ಕವಿದ ವಾತಾವರಣ ಇರುತ್ತದೆ. ರಾತ್ರಿ 7:30ಕ್ಕೆ ಪಂದ್ಯ ಆರಂಭವಾಗುವ ವೇಳೆ ತಾಪಮಾನ 23-26 ಡಿಗ್ರಿ ಸೆಲ್ಸಿಯಸ್ ಇರುತ್ತದೆ. ಶೇ.3ರಷ್ಟು ಮಾತ್ರ ಮಳೆಯಾಗುವ ಸಾಧ್ಯತೆ ಇದೆ. ಆದರೆ, ಇಬ್ಬನಿ ಬಿದ್ದರೆ ಎರಡನೇ ಇನ್ನಿಂಗ್ಸ್‌ನಲ್ಲಿ ಬೌಲಿಂಗ್ ಮಾಡುವುದು ಕಷ್ಟವಾಗಿದೆ.

ಮಳೆಯಿಂದಾಗಿ ಪಂದ್ಯ ರದ್ದಾದರೆ ಏನಾಗಬಹುದು?

ಇಂದು ಚೆನ್ನೈನಲ್ಲಿ ಮಳೆಯಾಗುವ ಸಾಧ್ಯತೆ ಕೇವಲ 3% ರಷ್ಟಿದೆ. ಆದರೆ, ಶನಿವಾರ ಅನಿರೀಕ್ಷಿತವಾಗಿ ಸುರಿದ ಮಳೆ ಅಭಿಮಾನಿಗಳ ಚಿಂತೆಯನ್ನು ಹೆಚ್ಚಿಸಿದೆ. ಹೀಗಿರುವಾಗ ಇಂದು ಕೋಲ್ಕತ್ತಾ ನೈಟ್ ರೈಡರ್ಸ್ ಹಾಗೂ ಸನ್ ರೈಸರ್ಸ್ ಹೈದರಾಬಾದ್ ನಡುವಿನ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಮಳೆ ಸುರಿದರೆ ಏನಾಗಲಿದೆ ಎಂಬುದು ಪ್ರಶ್ನೆ ಎದುರಾಗಿದೆ.

ಒಂದು ವೇಳೆ ಇಂದು ಮಳೆಯಿಂದಾಗಿ ಪಂದ್ಯ ರದ್ದಾದರೆ, ಫೈನಲ್‌ಗಾಗಿ ಮೀಸಲು ದಿನವನ್ನು ಇಟ್ಟುಕೊಂಡಿರುತ್ತಾರೆ. ಅಂದರೆ ಸೋಮವಾರ ಮೀಸಲು ದಿನದಂದು ಫೈನಲ್‌ ಪಂದ್ಯ ನಡೆಯಲಿದೆ.

ಮೀಸಲು ದಿನದಂದು ಕೂಡ ಮಳೆಯಿಂದಾಗಿ ಪಂದ್ಯ ರದ್ದಾದರೆ, ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ವಿಜೇತ ಎಂದು ಘೋಷಿಸಲಾಗುತ್ತದೆ.

ಎಸ್‌ಆರ್‌ಹೆಚ್‌ vs ಕೆಕೆಆರ್‌ ಹೆಡ್ ಟು ಹೆಡ್

ಐಪಿಎಲ್ ಇತಿಹಾಸದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ತಂಡಗಳು ಈವರೆಗೆ 27 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಕೆಕೆಆರ್ 18 ಪಂದ್ಯಗಳಲ್ಲಿ ಗೆಲುವು ಸಾಧಿಸುವ ಮೂಲಕ ಪ್ರಾಬಲ್ಯ ಸಾಧಿಸಿದೆ. ಇತ್ತ ಎಸ್‌ಆರ್‌ಹೆಚ್ ತಂಡ 9 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ.

ಎಸ್‌ಆರ್‌ಹೆಚ್‌ vs ಕೆಕೆಆರ್‌ ಸಂಭಾವ್ಯ ಆಡುವ 11ರ ಬಳಗ

ಸನ್ ರೈಸರ್ಸ್ ಹೈದರಾಬಾದ್ ತಂಡ: ಟ್ರಾವಿಸ್ ಹೆಡ್, ಅಭಿಷೇಕ್ ಶರ್ಮಾ, ರಾಹುಲ್ ತ್ರಿಪಾಠಿ, ಏಡೆನ್ ಮಾರ್ಕ್ರಾಮ್, ನಿತೀಶ್ ರೆಡ್ಡಿ, ಹೆನ್ರಿಚ್ ಕ್ಲಾಸೆನ್ (ವಿ.ಕೀ), ಅಬ್ದುಲ್ ಸಮದ್, ಪ್ಯಾಟ್ ಕಮಿನ್ಸ್ (ನಾಯಕ), ಭುವನೇಶ್ವರ್ ಕುಮಾರ್, ಜಯದೇವ್ ಉನಾದ್ಕಟ್, ಟಿ ನಟರಾಜನ್.

ಕೋಲ್ಕತ್ತಾ ನೈಟ್ ರೈಡರ್ಸ್ ತಂಡ: ಸುನಿಲ್ ನರೈನ್, ರಹಮಾನುಲ್ಲಾ ಗುರ್ಬಾಜ್ (ವಿ.ಕೀ), ವೆಂಕಟೇಶ್ ಅಯ್ಯರ್, ಶ್ರೇಯಸ್ ಅಯ್ಯರ್ (ನಾಯಕ), ರಿಂಕು ಸಿಂಗ್, ಆಂಡ್ರೆ ರಸೆಲ್, ರಮಣದೀಪ್ ಸಿಂಗ್, ಮಿಚೆಲ್ ಸ್ಟಾರ್ಕ್, ವೈಭವ್ ಅರೋರಾ, ಹರ್ಷಿತ್ ರಾಣಾ, ವರುಣ್ ಚಕ್ರವರ್ತಿ.

Story first published: Sunday, May 26, 2024, 13:26 [IST]
Other articles published on May 26, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+