ಪುಣೆಯಲ್ಲಿ ಶುಕ್ರವಾರ ಭಾರತ ಹಾಗೂ ಇಂಗ್ಲೆಂಡ್ ನಡುವಣ ನಾಲ್ಕನೇ ಟಿ20 ಪಂದ್ಯ ನಡೆಯಿತು. ಈ ಸರಣಿ ಐದು ಪಂದ್ಯಗಳ ಟಿ20 ಸರಣಿಯ ಭಾಗವಾಗಿದೆ. ಈ ಸರಣಿಯನ್ನು ಭಾರತ ಇನ್ನು 1 ಪಂದ್ಯ ಬಾಕಿ ಇರುವಂತೆ ಗೆದ್ದು ಕೊಂಡಿದೆ. ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆಯ ಅಂಗಳದಲ್ಲಿ ನಡೆದ ಪಂದ್ಯದಲ್ಲಿ ಟೀಮ್ ಇಂಡಿಯಾ ಗೆಲುವು ದಾಖಲಿಸಿತು. ಈ ಪಂದ್ಯದ ಬಳಿಕ ವಿವಾದವೊಂದು ಹುಟ್ಟಿಕೊಂಡಿದೆ. ಈ ವಿವಾದ ಸದ್ಯ ವಿಶ್ವ ಕ್ರಿಕೆಟ್‌ನಲ್ಲಿ ಭಾರೀ ಸದ್ದು ಮಾಡುತ್ತಿದೆ. ಏನದು ವಿವಾದ.
ಶುಕ್ರವಾರ ನಡೆದ ಪಂದ್ಯದಲ್ಲಿ ಭಾರತ 15 ರನ್‌ಗಳಿಂದ ಗೆದ್ದುಕೊಂಡಿತು. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಕಳ್ಳಾಟ ಆಡಿದೆ ಎಂಬ ಆರೋಪ ಕೇಳಿಬಂದಿದೆ. ಇಂಗ್ಲೆಂಡ್ ನಾಯಕ ಜೋಸ್ ಬಟ್ಲರ್ ಕನ್ಕ್ಯುಶನ್ ಬದಲಿ ಆಟಗಾರನ ಬಗ್ಗೆ ಪ್ರಶ್ನೆಗಳನ್ನು ಎತ್ತಿದರು. ಈ ಕನ್ಕ್ಯುಶನ್ ಬದಲಿ ಆಟಗಾರನ ಬಗ್ಗೆ ಇಂಗ್ಲೆಂಡ್ ತಂಡದ ಮಾಜಿ ಆಟಗಾರರು ಹೇಳಿಕೆಗಳನ್ನು ನೀಡಿದ್ದಾರೆ.

ಭಾರತ, ಇಂಗ್ಲೆಂಡ್ ವಿರುದ್ಧ ಮೊದಲು ಬ್ಯಾಟ್ ಮಾಡುವಾಗ ಶಿವಂ ದುಬೆ ಸ್ಥಿರವಾಗಿ ಬ್ಯಾಟ್ ಮಾಡಿದರು. ಈ ವೇಳೆ ಕೊನೆಯ ಓವರ್‌ನಲ್ಲಿ ಶಾರ್ಟ್ ಬೌಲ್ ಶಿವಂ ದುಬೆ ಅವರ ಹೆಲ್ಮೆಟ್‌ಗೆ ಬಡಿಯಿತು. ಆದರೆ ಇವರು ಎರಡನೇ ಇನಿಂಗ್ಸ್‌ನಲ್ಲಿ ಬೌಲಿಂಗ್ ಮಾಡಲು ಮೈದಾನಕ್ಕೆ ಇಳಿಯಲೇ ಇಲ್ಲ. ಇವರ ಬದಲಿಗೆ ಹನ್ನೆರಡನೇ ಆಟಗಾರ ಹರ್ಷಿತ್ ರಾಣಾ ಅವರಿಗೆ ಆಡುವ ಅವಕಾಶವನ್ನು ನೀಡಲಾಯಿತು. ಹರ್ಷಿತ್ ರಾಣಾ ಅವರಿಗೆ ಅರಿವಿಲ್ಲದೇ ಅವರು ಚೊಚ್ಚಲ ಪಂದ್ಯವನ್ನು ಆಡಿ ಬಿಟ್ಟರು.
ಇಂಗ್ಲೆಂಡ್ ತಂಡದ ಹಾಲಿ ನಾಯಕ ಜೋಸ್ ಬಟ್ಲರ್ ಹಾಗೂ ಮಾಜಿ ನಾಯಕ ಕೆವಿನ್ ಪೀಟರ್ಸನ್ ಅವರು ಈ ಬದಲಿ ಆಟಗಾರನ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದಾರೆ. ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಪ್ರಕಾರ, ಒಬ್ಬ ಆಟಗಾರ ಮೈದಾನದಲ್ಲಿ ಗಾಯಗೊಂಡಾಗ, ಅವನಿಗೆ ಸಮಾನವಾದ ಬದಲಿ ಆಟಗಾರನನ್ನು ಮಾತ್ರ ಕನ್ಕ್ಯುಶನ್ ಬದಲಿಯಾಗಿ ಆಡಿಸಬಹುದು. ಹರ್ಷಿತ್ ರಾಣಾ ಶಿವಂ ದುಬೆಗೆ ಹೇಗೆ ಬದಲಿ ಆಟಗಾರ ಆಗಬಹುದು ಎಂಬ ಪ್ರಶ್ನೆ ಎದ್ದಿದೆ.
ಐಸಿಸಿ ನಿಯಮಗಳ 1.2.7.3.4 ನೇ ನಿಯಮದಂತೆ, ಆಟಗಾರ ಮೈದಾನದಲ್ಲಿ ಗಾಯಕ್ಕೆ ತುತ್ತಾದರೆ, ಅವರಿಗೆ ಬದಲಿ ಆಟಗಾರ ಅವರ ಸರಿಯಾದ ರಿಪ್ಲೇಸ್ಮೆಂಟ್ ಆಗಿರಬೇಕು. ಉದಾಹರಣೆಗೆ ಬ್ಯಾಟರ್ ಒಬ್ಬ ಕನ್ಕ್ಯುಶನ್ ಆಟಗಾರ ಮೈದಾನದಿಂದ ದೂರ ಸರಿದರೆ, ಬ್ಯಾಟರ್‌ನೇ ಅಂಗಳ ಪ್ರವೇಶಿಸಬಹುದು. ಅಂತೇಯೆ ಆಲ್‌ರೌಂಡರ್, ಬೌಲರ್‌ಗಳಿಗೂ ಈ ನಿಯಮ ಸಮನಾಗಿರುತ್ತದೆ. ಇನ್ನು ಈ ಬಗ್ಗೆ ಮ್ಯಾಚ್ ರೆಫ್ರಿಗೆ ಈ ಬಗ್ಗೆ ಮಾಹಿತಿ ನೀಡಬೇಕು. ನಿಯಮಗಳ ಪ್ರಕಾರ, ಆಟಗಾರನ ತಲೆ ಅಥವಾ ಕುತ್ತಿಗೆಗೆ ಗಾಯವಾದಾಗ ಮಾತ್ರ ಮ್ಯಾಚ್ ರೆಫರಿ ಕನ್ಕ್ಯುಶನ್ ಬದಲಿಯನ್ನು ಅನುಮೋದಿಸಬಹುದು. ವೈದ್ಯಕೀಯ ತಂಡದ ಪರೀಕ್ಷೆಯ ನಂತರವೇ ಈ ಬದಲಿ ವ್ಯವಸ್ಥೆ ಸಂಭವಿಸುತ್ತದೆ.
ಭಾರತದ ಇನ್ನಿಂಗ್ಸ್ ಕೊನೆಗೊಂಡಗಾ ಮತ್ತು ಶಿವಂ ದುಬೆ ಡ್ರೆಸ್ಸಿಂಗ್ ಕೋಣೆಗೆ ಹಿಂತಿರುಗಿದಾಗ, ಅವರು ಸ್ವಲ್ಪ ತಲೆನೋವಿನ ಬಗ್ಗೆ ದೂರು ನೀಡಿದರು. ನಾವು ಮ್ಯಾಚ್ ರೆಫರಿಗೆ ತಿಳಿಸಿದೆವು. ಪರಿಸ್ಥಿತಿಗೆ ಅನುಗುಣವಾಗಿ ಬದಲಿಯಾಗಿ ಒಂದು ಹೆಸರನ್ನು ಮುಂದಿಡಲಾಯಿತು. ಅದರ ನಂತರ, ಅದು ಮ್ಯಾಚ್ ರೆಫರಿ ಅದನ್ನು ಅನುಮೋದಿಸಿದರು. ಈ ನಿರ್ಧಾರ ತೆಗೆದುಕೊಂಡಾಗ ಹರ್ಷಿತ್ ರಾಣಾ ಭೋಜನ ಮಾಡ್ತಾ ಇದ್ದರು. ಅವರಿಗೆ ಈ ಬಗ್ಗೆ ಯಾವ ಅರಿವೂ ಇರಲಿಲ್ಲ ಎಂದು ಬೌಲಿಂಗ್ ಕೋಚ್ ಮಾರ್ನೆ ಮಾರ್ಕೆಲ್ ಹೇಳಿದ್ದಾರೆ.