For Quick Alerts
ALLOW NOTIFICATIONS  
For Daily Alerts
 

Tilak Varma Retired Out: ತಿಲಕ್‌ ವರ್ಮಾ ಮೈದಾನ ಬಿಟ್ಟಿದ್ದು ಏಕೆ? ಏನಿದು ರಿಟೈರ್ಡ್‌ ಔಟ್‌? ಇಲ್ಲಿದೆ ಕಂಪ್ಲೀಟ್ ಮಾಹಿತಿ

ಲಕ್ನೋನ ಏಕನಾ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್‌ ಸೋಲು ಕಂಡಿದೆ. ಈ ಪಂದ್ಯದಲ್ಲಿ ಲಕ್ನೋ ಸೂಪರ್‌ ಜೈಂಟ್ಸ್ ಸ್ಥಿರ ಪ್ರದರ್ಶನ ನೀಡಿ ಜಯ ಸಾಧಿಸಿದೆ. ಈ ಮೂಲಕ ಲಕ್ನೋ ತವರಿನಲ್ಲಿ ಮೊದಲ ಗೆಲುವಿನ ನಗೆ ಬೀರಿದೆ. 12 ರನ್‌ಗಳ ಸೋಲು ಕಂಡಿರುವ ಮುಂಬೈ ನಿರಾಸೆ ಅನುಭವಿಸಿದೆ. ಈ ವೇಳೆ ಎಲ್ಲರ ಚಿತ್ತ ಕದ್ದ ಒಂದು ಘಟನೆ ಎಂದರೆ ತಿಲಕ್‌ ವರ್ಮಾ ಮೈದಾನ ತೊರೆದಿದ್ದು. ಔಟ್‌ ಆಗದೇ ಇದ್ದರೂ ತಿಲಕ್ ಮೈದಾನ ತೊರೆದಿದ್ದು ಏಕೆ ಎಂಬ ಪ್ರಶ್ನೆ ಓಡುತ್ತಿದೆ.

ಮುಂಬೈ ಇಂಡಿಯನ್ಸ್‌ ಈ ಪಂದ್ಯವನ್ನು ಗೆಲ್ಲಲು ಹಾಕಿಕೊಂಡ ಯೋಜನೆ ತಿಲಕ್ ವರ್ಮಾ ಅವರನ್ನು ರಿಟೈರ್ಡ್‌ ಔಟ್ ಮಾಡುವುದು. ಆದರೆ ಇವರು ಮೈದಾನ ಬಿಟ್ಟು ಹೊರ ನಡೆದರೂ ಫಲಿತಾಂಶದಲ್ಲಿ ಏನು ಬದಲಾವಣೆಗಳು ಆಗಲಿಲ್ಲ. ಮುಂಬೈ ಇಂಡಿಯನ್ಸ್‌ ಸೋಲು ಕಂಡಿದೆ. ಹಾಗಿದ್ದರೆ ಐಪಿಎಲ್‌ನಲ್ಲಿ ಎಷ್ಟು ಜನ ರಿಟೈರ್ಡ್‌ ಔಟ್ ಆಗಿದ್ದಾರೆ. ರಿಟೈರ್ಡ್‌ ಔಟ್, ರಿಟೈರ್ಡ್‌ ಹರ್ಟ್‌ ನಡುವಿನ ವ್ಯತ್ಯಾಸ ಏನು ಎಂಬ ಬಗ್ಗೆ ವರದಿ ಇಲ್ಲಿದೆ.

What is Retired Out in Cricket Tilak Verma Becomes Latest in IPL as Mumbai Indians Lose to LSG

18ನೇ ಆವೃತ್ತಿಯ ಪಂದ್ಯದಲ್ಲಿ ಮುಂಬೈ ಮತ್ತೊಂದು ಸೋಲು ಕಂಡಿದೆ. ಎಲ್‌ಎಸ್‌ಜಿ ನೀಡಿದ್ದ 204 ರನ್‌ ಗುರಿಯನ್ನು ಬೆನ್ನಟ್ಟುವಲ್ಲಿ ಮುಂಬೈ ವಿಫಲವಾಗಿದೆ. ಮುಂಬೈ ತಂಡ ನಿಗದಿತ 20 ಓವರ್‌ಗಳಲ್ಲಿ 191 ರನ್‌ಗಳನ್ನು ಮಾತ್ರ ಗಳಿಸಲು ಶಕ್ತವಾಯಿತು. ಈ ಮೂಲಕ ಮುಂಬೈ ಟೂರ್ನಿಯಲ್ಲಿ ಮತ್ತೊಂದು ಸೋಲು ಕಂಡಿದೆ. ಈ ವೇಳೆ ತಿಲಕ್ ವರ್ಮಾ ಡೆತ್‌ ಓವರ್‌ಗಳಲ್ಲಿ ರಿಟೈರ್ಡ್ ಔಟ್ ಆದರು.

ಎಷ್ಟು ಜನ ರಿಟೈರ್ಡ್‌ ಔಟ್ ಆಗಿದ್ದಾರೆ?

ಐಪಿಎಲ್‌ ಇತಿಹಾಸವನ್ನು ನೋಡಿದರೆ ತಿಲಕ್ ವರ್ಮಾ ಒಬ್ಬರೇ ರಿಟೈರ್ಡ್ ಔಟ್ ಆದವರು ಅಲ್ಲ. ಇದಕ್ಕೂ ಮೊದಲು ರವಿಚಂದ್ರನ್‌ ಅಶ್ವಿನ್‌, ಅಥರ್ವ ಟೇಡೆ ಹಾಗೂ ಸಾಯಿ ಸುದರ್ಶನ್‌ ಸಹ ಇದೇ ರೀತಿ ಮೈದಾನವನ್ನು ತೊರೆದಿದ್ದರು. ಕೊನೆಯ ಬಾರಿಗೆ ಐಪಿಎಲ್‌ನಲ್ಲಿ ಈ ರೀತಿ ಔಟ್ ಆದವರು ಸಾಯಿ ಸುದರ್ಶನ. ಇವರು 2023 ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ಪರ ಆಡುವಾಗ ಮೈದಾನ ತೊರೆದಿದ್ದರು.

ತಿಲಕ್‌ ವರ್ಮಾ ಸಾಮಾನ್ಯವಾಗಿ ಆಕ್ರಮಣಕಾರಿ ಆಟಕ್ಕೆ ಹೆಸರುವಾಸಿಯಾಗಿರುವ ಆಟಗಾರ. ಆದರೆ ಶುಕ್ರವಾರ ಎಲ್‌ಎಸ್‌ಜಿ ವಿರುದ್ಧದ ಪಂದ್ಯದಲ್ಲಿ ತಿಲಕ್‌ ರನ್‌ ಬಾರಿಸಲು ಹೆಣಗಾಟ ನಡೆಸಿದ್ದರು. ಅವರು 23 ಎಸೆತಗಳಲ್ಲಿ ಕೇವಲ ಎರಡು ಬೌಂಡರಿಗಳನ್ನು ಒಳಗೊಂಡಂತೆ 25 ರನ್ ಗಳಿಸಿದರು. ಇವರು ತಂಡಕ್ಕೆ ಅಗತ್ಯವಿದ್ದ ರನ್‌ ರೇಟ್‌ ಹೆಚ್ಚಿಸಲು ಸಾಧ್ಯವಾಗಲಿಲ್ಲ. ಹೀಗಾಗಿ ಮುಂಬೈ ಇಂಡಿಯನ್ಸ್‌ ಇವರನ್ನು ರಿಟೈರ್ಡ್‌ ಔಟ್ ಮಾಡಿತು. ಇವರ ಸ್ಥಾನದಲ್ಲಿ ಮಿಚೆಲ್‌ ಸ್ಯಾಂಟ್ನರ್‌ 19 ನೇ ಓವರ್‌ನಲ್ಲಿ ಮೈದಾನ ಪ್ರವೇಶಿಸಿದರು.

ಏನಿದು ರಿಟೈರ್ಡ್‌ ಔಟ್‌?

ಮೈದಾನದಲ್ಲಿ ಆಟವಾಡುತ್ತಿದ್ದ ಬ್ಯಾಟರ್‌ ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲರಾದಾಗ ಡ್ರೆಸ್ಸಿಂಗ್ ರೂಮ್‌ನಿಂದ ನಾಯಕ ಅಥವಾ ಬ್ಯಾಟರ್‌ ಸ್ವತಃ ಪೆವೆಲಿಯನ್‌ ಕಡೆಗೆ ಹೋಗುವುದಾಗಿದೆ. ಹೀಗಿ ಆದಾಗ ಬ್ಯಾಟರ್‌ ಮುಂದೆ ರಿಟೈರ್ಡ್‌ ಎಂದು ಬರೆಯುತ್ತಾರೆ.

What is Retired Out in Cricket Tilak Verma Becomes Latest in IPL as Mumbai Indians Lose to LSG

ರಿಟೈರ್ಡ್ ಔಟ್ ಆದ ಆಟಗಾರ ಮತ್ತೆ ಮೈದಾನಕ್ಕೆ ಬಂದು ಬ್ಯಾಟ್ ಮಾಡಲು ಎದುರಾಳಿ ತಂಡದ ನಾಯಕ ಒಪ್ಪಿಗೆ ನೀಡಬೇಕು. ಅಂದಾಗ ಮಾತ್ರ ಆತ ಮೈದಾನಕ್ಕೆ ಮರಳಬಹುದು. ಒಂದು ವೇಳೆ ಆತ ಬ್ಯಾಟಿಂಗ್‌ಗೆ ಬಾರದೇ ಇದ್ದಲ್ಲಿ ಆತನ ಹೆಸರ ಮುಂದೆ ರಿಟೈರ್ಡ್ ಔಟ್ ಎಂದು ಬರೆಯಲಾಗುತ್ತದೆ.

ರಿಟೈರ್ಡ್‌ ಹರ್ಟ್‌ ಎಂದರೇನು?

ಮೈದಾನದಲ್ಲಿ ಆಡುವಾಗ ಆಟಗಾರ ಗಾಯ, ಅನಾರೋಗ್ಯ, ಅನಿವಾರ್ಯ ಪರಿಸ್ಥಿತಿಯಿಂದ ಡ್ರೆಸ್ಸಿಂಗ್‌ ರೂಮ್‌ನತ್ತ ನಡೆದರೆ ಆತನನ್ನು ರಿಟೈರ್ಡ್‌ ಹರ್ಟ್‌ ಎಂದು ಕರೆಯುತ್ತಾರೆ. ಈ ರೀತಿಯ ಸಮಸ್ಯೆಯನ್ನು ಎದುರಿಸಿದಾಗ ಬ್ಯಾಟರ್‌ ಅಂಪೈರ್‌ ಹತ್ತಿರ ತನ್ನ ಸಮಸ್ಯೆಯನ್ನು ಹೇಳಿಕೊಂಡು ಹೋಗಬಹುದು. ಆತ ಚೇತರಿಸಿಕೊಂಡ ಬಳಿಕ ಆತನಿಗೆ ಮತ್ತೆ ಬ್ಯಾಟ್ ಮಾಡಲು ಅವಕಾಶ ಇರುತ್ತದೆ.

Story first published: Saturday, April 5, 2025, 11:41 [IST]
Other articles published on Apr 5, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+