ಮೊದಲ ಟೆಸ್ಟ್‌ಗೆ ರೋಹಿತ್ ಶರ್ಮಾ ಪಡೆ ಹೆಣೆದಿರುವ ತಂತ್ರಗಾರಿಕೆ ಏನು? ಕ್ಯಾಪ್ಟನ್ ಹೇಳಿದ್ದೇನು?
ಭಾರತ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಗೆ ವೇದಿಕೆ ಸಿದ್ಧವಾಗಿದೆ. ಟೆಸ್ಟ್ ಸರಣಿಗೂ ಮುನ್ನ ಉಭಯ ತಂಡದ ನಾಯಕರು ಪತ್ರಿಕಾಗೋಷ್ಠಿಯನ್ನು ನಡೆಸಿದರು. ಇದೇ ವೇಳೆ ರೋಹಿತ್ ಶರ್ಮಾ ಅವರು ಟೀಮ್ ಇಂಡಿಯಾದ ಪ್ಲ್ಯಾನ್ ಹಾಗೂ ಇಂಗ್ಲೆಂಡ್ ತಂಡದ ಬೇಸ್‌ಬಾಲ್ ಕ್ರಿಕೆಟ್ ಬಗ್ಗೆಯೂ ಮಾತನಾಡಿದ್ದಾರೆ.
ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಜನವರಿ 25ರಂದು ಬೆಳಗ್ಗೆ 9.30ಕ್ಕೆ ಆರಂಭವಾಗಲಿದೆ. ಇದಕ್ಕೂ ಅರ್ಧ ಗಂಟೆ ಮೊದಲು ಟಾಸ್ ನಡೆಯಲಿದೆ. ಈ ಸರಣಿಯು ಮಾರ್ಚ್‌ವರೆಗೆ ನಡೆಯಲಿದೆ. ಪಂದ್ಯಕ್ಕೆ ಮಳೆ ಭೀತಿಯೂ ಇರುವುದಾಗಿ ತಿಳಿದು ಬಂದಿದೆ.

ವಿರಾಟ್ ಬದಲಿಗೆ ರಜತ್ ಏಕೆ?
ಮೊದಲೆರಡು ಟೆಸ್ಟ್‌ಗಳಿಂದ ಹೊರಗುಳಿದಿರುವ ವಿರಾಟ್ ಕೊಹ್ಲಿ ಬದಲಿಗೆ ರಜತ್ ಪಾಟಿದಾರ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಟೀಮ್ ಇಂಡಿಯಾದ ಕದ ತಟ್ಟುತ್ತಿರುವ ಹಲವು ಸ್ಟಾರ್ ಆಟಗಾರರನ್ನು ಬಿಟ್ಟು ಯುವ ಆಟಗಾರರಿಗೆ ಮಣೆ ಹಾಕಿದ್ದು ಏಕೆ ಎಂಬ ಪ್ರಶ್ನೆ ಸಹಜವಾಗಿ ಉದ್ಭವಿಸಿತ್ತು. ಈ ಪ್ರಶ್ನೆಗೆ ಉತ್ತರಿಸಿದ ಕ್ಯಾಪ್ಟನ್ ರೋಹಿತ್, ಕೊಹ್ಲಿಯ ಕೊರತೆಯನ್ನು ತುಂಬಲು ಅನುಭವಿ ಆಟಗಾರನತ್ತ ಮುಖ ಮಾಡಲು ನಾವು ಯೋಚಿಸಿದ್ದೇವು.
ಆದರೆ ನಾವು ಯುವಕರಿಗೆ ಅವಕಾಶ ನೀಡಿದಾಗ, ಯುವ ಆಟಗಾರರು ನೇರ ಹೋಗಿ ವಿದೇಶಿ ನೆಲದಲ್ಲಿ ಪಂದ್ಯಗಳನ್ನು ಆಡುವುದು ನಮಗೆ ಇಷ್ಟವಿಲ್ಲ ಎಂದು ನಾವು ಅರಿತಿದ್ದೇವೆ. ಟೆಸ್ಟ್ ಕ್ರಿಕೆಟ್ ಬಹಳಷ್ಟು ಸವಾಲುಗಳನ್ನು ನೀಡುತ್ತದೆ. ಆದ್ದರಿಂದ ನಾವು ಟೆಸ್ಟ್ ಬಗ್ಗೆ ಮತ್ತು ಮುಂಬರುವ ಪೀಳಿಗೆಯ ಬಗ್ಗೆ ಹೆಚ್ಚು ಒತ್ತು ನೀಡುತ್ತಿದ್ದೇವೆ.

ಇಂಗ್ಲೆಂಡ್ ತಂಡ ಇದೀಗ ಟೆಸ್ಟ್‌ನಲ್ಲಿ ಬೇಸ್‌ಬಾಲ್‌ನ ಹೊಸ ಸೂತ್ರವನ್ನು ಹೊಂದಿದೆ. ಈ ತಂತ್ರ ಸದ್ಯ ಪ್ರಪಂಚದಾದ್ಯಂತ ಚರ್ಚೆಯಾಗುತ್ತಿದೆ. ಈ ಬಗ್ಗೆ ರೋಹಿತ್ ಶರ್ಮಾ ಅವರನ್ನು ಕೇಳಿದಾಗ, ನಾವು ನಮ್ಮ ಕ್ರಿಕೆಟ್ ಆಡಲು ಬಯಸುತ್ತೇವೆ. ನಾವು ತಂಡವಾಗಿ ಏನು ಮಾಡಬೇಕೆಂದು ಬಯಸುತ್ತೇವೆ ಎಂಬುದರ ಮೇಲೆ ನಾನು ಗಮನಹರಿಸಿದ್ದೇನೆ. ಇದಾದ ನಂತರ ಆ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ ಎಂದರು.
ಬೇಸ್‌ಬಾಲ್ ಎಂದರೇನು?
ಬೇಸ್‌ಬಾಲ್ ರಣ ತಂತ್ರದ ಅಡಿಯಲ್ಲಿ, ಇಂಗ್ಲೆಂಡ್ ತಂಡವು ಟೆಸ್ಟ್‌ಗಳಲ್ಲಿಯೂ ಸಹ ವೇಗದ T20 ಶೈಲಿಯಲ್ಲಿ ಬ್ಯಾಟ್ ಮಾಡುತ್ತದೆ. ಆದರೆ, ಇದರಿಂದ ತಂಡದ ಲಾಭಕ್ಕಿಂತ ನಷ್ಟವೇ ಹೆಚ್ಚು. ಇದಾದ ಬಳಿಕವೂ ತಂಡ ಈ ಬಗ್ಗೆ ದೃಢವಾದ ನಿಲುವನ್ನು ಹೊಂದಿದೆ. ಇದೀಗ ಭಾರತ ವಿರುದ್ಧದ 5 ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಇಂಗ್ಲೆಂಡ್ ತಂಡ ಭಾರತದ ವಿರುದ್ಧ ಯಾವ ರೀತಿ ಪ್ರದರ್ಶನ ನೀಡಲಿದೆ ಎಂಬುದನ್ನು ಕಾದು ನೋಡಬೇಕಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications