IPL 2025 KKR: ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಪ್ಲೇಆಫ್ ಲೆಕ್ಕಾಚಾರ ಏನು?
ಶನಿವಾರ (ಏಪ್ರಿಲ್ 26) ಭಾರೀ ಮಳೆಯಿಂದಾಗಿ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಪಂಜಾಬ್ ಕಿಂಗ್ಸ್ ನಡುವಿನ ಐಪಿಎಲ್ 2025 ರ 44 ನೇ ಪಂದ್ಯವನ್ನು ರದ್ದುಗೊಳಿಸಲಾಯಿತು. ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ಪಂಜಾಬ್ ಮೊದಲು ಬ್ಯಾಟಿಂಗ್ ಮಾಡಿತ್ತು. ಆದರೆ ಕೋಲ್ಕತ್ತಾ ಬ್ಯಾಟಿಂಗ್ ಮಾಡಲು ಬಂದಾಗ, ಭಾರೀ ಮಳೆ ಸುರಿಯಲು ಪ್ರಾರಂಭಿಸಿತು. ಪಂದ್ಯ ರದ್ದಾದ ಕಾರಣ ಕೋಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ ದೊಡ್ಡ ಹೊಡೆತ ಬಿದ್ದಿದ್ದು, ಕೇವಲ ಒಂದು ಅಂಕಕ್ಕೆ ತೃಪ್ತಿಪಡಬೇಕಾಯಿತು. ಪಂಜಾಬ್ ಖಾತೆಗೆ ಒಂದು ಪಾಯಿಂಟ್ ಕೂಡ ಸೇರ್ಪಡೆಯಾಗಿದೆ.
ಕಳೆದ ಮೂರು ಪಂದ್ಯಗಳಲ್ಲಿ ಗೆಲುವು ಸಾಧಿಸದೆ ಉಳಿದಿರುವ ಕೋಲ್ಕತ್ತಾ ನೈಟ್ ರೈಡರ್ಸ್, 7 ಅಂಕಗಳು ಮತ್ತು +0.212 ನಿವ್ವಳ ರನ್ ರೇಟ್‌ನೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದೆ. ಮತ್ತೊಂದೆಡೆ, ಪಂಜಾಬ್ ಕಿಂಗ್ಸ್ ತಂಡವು ಟಾಪ್ -4 ರಲ್ಲಿ ತನ್ನ ಸ್ಥಾನವನ್ನು ಮರಳಿ ಪಡೆದುಕೊಂಡಿದ್ದು, ಮುಂಬೈ ಇಂಡಿಯನ್ಸ್ ತಂಡವನ್ನು ಐದನೇ ಸ್ಥಾನಕ್ಕೆ ತಳ್ಳಿದೆ.

ಪಂಜಾಬ್ ಕಿಂಗ್ಸ್ ತಂಡ ನೀಡಿದ 202 ರನ್‌ಗಳ ಗೆಲುವಿನ ಗುರಿ ಬೆನ್ನಟ್ಟಿದ ಕೋಲ್ಕತ್ತಾ ತಂಡದ ಮೊದಲ ಓವರ್ ನಂತರ ಮಳೆ ಆಟವನ್ನು ಸ್ಥಗಿತಗೊಳಿಸಿತು. ಐದು ಓವರ್‌ಗಳ ಪಂದ್ಯಕ್ಕೆ ಕಟ್-ಆಫ್ ಸಮಯ ರಾತ್ರಿ 11:44 ಆಗಿದ್ದರೂ, ಅಂಪೈರ್ಸ್ ಅದಕ್ಕಿಂತ ಬಹಳ ಮೊದಲೇ ಪಂದ್ಯವನ್ನು ರದ್ದುಗೊಳಿಸಿದರು.
ಪ್ಲೇ ಆಫ್ ಲೆಕ್ಕಚಾರ
ಮಾರ್ಕೊ ಜಾನ್ಸೆನ್ ಎಸೆತದಲ್ಲಿ ಸುನಿಲ್ ನರೈನ್ ಬೌಂಡರಿ ಬಾರಿಸಿದ ನಂತರ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು ತಮ್ಮ ರನ್ ಚೇಸಿಂಗ್ ಅನ್ನು ಸ್ಥಿರವಾಗಿ ಪ್ರಾರಂಭಿಸಿತು. ಆದರೆ ಮಳೆ ಬಂದ ತಕ್ಷಣ ಆಟ ಪುನರಾರಂಭಿಸಲು ಸಾಧ್ಯವಾಗಲಿಲ್ಲ. ಪಂದ್ಯ ರದ್ದಾಗಿರುವುದರಿಂದ ಹಾಲಿ ಚಾಂಪಿಯನ್ ಕೆಕೆಆರ್ ತಂಡ ಮುಂದಿನ ಸುತ್ತು ತಲುಪುವುದು ಕಷ್ಟಕರವಾಗಿದೆ.
ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಈಗ ಉಳಿದ ಐದು ಪಂದ್ಯಗಳನ್ನು ಗೆಲ್ಲಲೇಬೇಕು. ಇದರೊಂದಿಗೆ ಕೆಕೆಆರ್ ಉಳಿದ ತಂಡಗಳ ಫಲಿತಾಂಶದ ಮೇಲೆ ಅವಲಂಬಿಸದೆ ಪ್ಲೇಆಫ್ ತಲುಪಬಹುದು. ಇಂತಹ ಸಂದರ್ಭದಲ್ಲಿ ಕೆಕೆಆರ್ 14 ಪಂದ್ಯಗಳಲ್ಲಿ 17 ಅಂಕಗಳನ್ನು ಹೊಂದಿರಲಿದೆ. ಆದರೆ, ಈ ಮಧ್ಯೆ ಕೆಕೆಆರ್ ಒಂದೇ ಒಂದು ಪಂದ್ಯವನ್ನು ಸೋತರೂ ಇತರ ತಂಡಗಳ ಫಲಿತಾಂಶಗಳನ್ನು ಅವಲಂಬಿಸಬೇಕಾಗುತ್ತದೆ. ಕೋಲ್ಕತ್ತಾದ ಮುಂದಿನ ಪಂದ್ಯ ಏಪ್ರಿಲ್ 29 ರಂದು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ನಡೆಯಲಿದೆ.
ಕೆಕೆಆರ್ ಮುಂದಿನ ಪಂದ್ಯಗಳು
- ಏಪ್ರಿಲ್ 29: ಕೆಕೆಆರ್ vs ಡಿಸಿ
- ಮೇ 4: ಕೆಕೆಆರ್ vs ಆರ್‌ಆರ್
- ಮೇ 7: ಕೆಕೆಆರ್ vs ಸಿಎಸ್‌ಕೆ
- ಮೇ 10: ಕೆಕೆಆರ್ vs ಎಸ್‌ಆರ್‌ಹೆಚ್
- ಮೇ 17: ಕೆಕೆಆರ್ vs ಆರ್‌ಸಿಬಿ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications