Hardik-Natasha Divorce: ಹಾರ್ದಿಕ್-ನತಾಶಾ ವಿಚ್ಛೇದನ ಪಡೆಯಲು ಕಾರಣವೇನು ಗೊತ್ತೇ?
ಭಾರತ ತಂಡದ ಸ್ಟಾರ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಕಳೆದ ಜುಲೈ 2024ರಲ್ಲಿ ಪತ್ನಿ ಹಾಗೂ ಬಾಲಿವುಡ್ ನಟಿ ನತಾಶಾ ಸ್ಟಾಂಕೋವಿಕ್‌ನಿಂದ ವಿಚ್ಛೇದನ ಪಡೆದಿದ್ದರು. ಈ ಬಗ್ಗೆ ಸ್ವತಃ ಹಾರ್ದಿಕ್ ಸಾಮಾಜಿಕ ಜಾಲತಾಣಗಳ ಮೂಲಕ ಮಾಹಿತಿ ನೀಡಿದ್ದರು.
ಹಾರ್ದಿಕ್ ಪಾಂಡ್ಯ ಅವರ ಅಭಿಮಾನಿಗಳಲ್ಲಿ ಇವರು ಏಕೆ ವಿಚ್ಛೇದನ ಪಡೆದರು ಎಂಬ ಪ್ರಶ್ನೆ ಕಾಡುತ್ತಿತ್ತು. ಇದೀಗ ವಿಚ್ಛೇದನದ ಕಾರಣ ಬಹಿರಂಗವಾಗಿದೆ. ಟೈಮ್ಸ್ ನೌ ವರದಿಯ ಪ್ರಕಾರ, ನತಾಶಾ ಅವರ ಕುಟುಂಬದ ಮೂಲವೊಂದು ಇಬ್ಬರು ವಿಚ್ಛೇದನ ಪಡೆಯಲು ಕಾರಣವೇನು ಎಂಬುದರ ಬಗ್ಗೆ ಮಾಹಿತಿ ನೀಡಿದೆ.

ವರದಿಯ ಪ್ರಕಾರ, ಹಾರ್ದಿಕ್ ಮತ್ತು ನತಾಶಾ ತಮ್ಮ ವಿಭಿನ್ನ ವ್ಯಕ್ತಿತ್ವದ ಕಾರಣದಿಂದ ವಿಚ್ಛೇದನ ಪಡೆದುಕೊಂಡಿದ್ದಾರೆ. ನತಾಶಾ ತಮಗೆ ಇಷ್ಟಬಂದಂತೆ ಇರುವುದನ್ನು ಹಾರ್ದಿಕ್ ಸಹಿಸಲಿಲ್ಲವಂತೆ. ಅವರು ತಾನು ಅಂದುಕೊಂಡಂತೆ ಪತ್ನಿ ಇರಬೇಕು ಎಂದು ಬಯಸಿದ್ದರು. ಹೀಗಾಗಿ ಈ ಸ್ಟಾರ್ ಜೋಡಿ ದಾಂಪತ್ಯ ಜೀವನ ಮುರಿದು ಬಿದ್ದಿರುವುದು ಎಂದು ನತಾಶಾ ಅವರ ಆಪ್ತ ಮೂಲಗಳು ತಿಳಿಸಿವೆ.
ಹಾರ್ದಿಕ್ ದುರಂಕಾರದ ವ್ಯಕ್ತಿತ್ವ ಹೊಂದಿರುವುದು ನತಾಶಾಗೆ ಇಷ್ಟವಾಗಿರಲಿಲ್ಲ. ಅವರೊಂದಿಗೆ ಜೀವನ ನಡೆಸುವುದು ನತಾಶಾಗೆ ಬೇಸರ ಸಂಗತಿ ಎನಿಸಿದೆ. ಈ ಕಾರಣಕ್ಕಾಗಿ ಅವರ ಜೊತೆ ಜೀವನ ನಡೆಸಲು ಸಾಧ್ಯವಾಗದೆ, ಬೇರ್ಪಡಲು ತೀರ್ಮಾನಿಸಿದರು ಎಂದು ಟೈಮ್ಸ್ ನೌ ವರದಿ ಮಾಡಿ ತಿಳಿಸಿದೆ.
ಇದರ ಮಧ್ಯೆಯೂ ಇಬ್ಬರ ನಡುವೆ ಸರಿಯಾಗುವ ಹಲವು ಸಂಭಾಷಣೆ ನಡೆದಿದೆ. ಆದರೆ ಇದು ಯಾವುದೂ ಕಾರ್ಯರೂಪಕ್ಕೆ ಬಂದಿಲ್ಲ. ಪಾಂಡ್ಯ ನಡವಳಿಕೆ ಬದಲಾಯಿಸಿಕೊಳ್ಳಕು ನತಾಶಾ ಆನೇಕ ಬಾರಿ ಹೇಳಿದ್ದಾರೆ. ಆದರೆ ಅವರು ಬದಲಾಗದಿದ್ದಾಗ, ಕಠಿಣ ನಿರ್ಧಾರಕ್ಕೆ ಇಬ್ಬರು ಮುಂದಾಗಿದ್ದಾರೆ ಎಂದು ನತಾಶ ಕುಟುಂಬ ಮೂಲ ಹೇಳಿಕೊಂಡಿದೆ.
ವಿಚ್ಛೇಸದನ ಬಳಿಕ ನತಾಶಾ ತನ್ನ ಮಗ ಅಗಸ್ತ್ಯನನೊಂದಿಗೆ ಸೆರ್ಬಿಯಾಕ್ಕೆ ಹಿಂತಿರುಗಿದ್ದಾರೆ. ಇತ್ತ ಟಿ20 ವಿಶ್ವಕಪ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದ ಹಾರ್ದಿಕ್ ಪಾಂಡ್ಯ ಸದ್ಯಕ್ಕೆ ವಿಶ್ರಾಂತಿಯಲ್ಲಿದ್ದಾರೆ. ವಿಶ್ವಕಪ್ ನಂತರ, ಅವರು ಶ್ರೀಲಂಕಾ ವಿರುದ್ಧ 3 ಪಂದ್ಯಗಳ ಟಿ20 ಸರಣಿಯಲ್ಲಿ ಕಾಣಿಸಿಕೊಂಡಿದ್ದರು.
ಈ ಸಂದರ್ಭದಲ್ಲಿ ಬಿಸಿಸಿಐ ಆಶ್ಚರ್ಯಕರ ನಿರ್ಧಾರವನ್ನು ತೆಗೆದುಕೊಂಡಿತ್ತು. ರೋಹಿತ್ ಶರ್ಮಾ ಟಿ20 ಕ್ರಿಕೆಟ್‌ಗೆ ನಿವೃತ್ತಿ ಹೇಳಿದ ಬಳಿಕ, ನಾಯಕತ್ವದ ನಿರೀಕ್ಷೆಯಲ್ಲಿದ್ದ ಹಾರ್ದಿಕ್ ಪಾಂಡ್ಯಗೆ ನಿರಾಸೆಯಾಗಿತ್ತು. ನೂತನ ಟೀಮ್ ಇಂಡಿಯಾದ ಟಿ20 ನಾಯಕನಾಗಿ ಸೂರ್ಯಕುಮಾರ್ ಯಾದವ್ ಅವರನ್ನು ನೇಮಕ ಮಾಡಲಾಗಿತ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications