For Quick Alerts
ALLOW NOTIFICATIONS  
For Daily Alerts
 

IPL 2025: ಎರಡು ವರ್ಷಗಳ ಕಾಲ ಹ್ಯಾರಿ ಬ್ರೂಕ್ ನಿಷೇಧಿಸಲು ಕಾರಣವೇನು?

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ 18ನೇ ಆವೃತ್ತಿಗೆ ಎಲ್ಲಾ 10 ತಂಡಗಳು ಸಜ್ಜಾಗಿವೆ. ಐಪಿಎಲ್ 2025ರ ಟೂರ್ನಿ ಮಾರ್ಚ್ 22 ರಿಂದ ಆರಂಭವಾಗುತ್ತಿದೆ. ಟೂರ್ನಿ ಆರಂಭವಾಗಲು ಹೆಚ್ಚು ಸಮಯ ಉಳಿದಿಲ್ಲ. ಆದ್ದರಿಂದ ಎಲ್ಲಾ ತಂಡಗಳು ತಮ್ಮ ಸಿದ್ತೆಗಳನ್ನು ಅಂತಿಮಗೊಳಿಸುವತ್ತ ಸಾಗುತ್ತಿವೆ. ಇಲ್ಲಿವರೆಗೆ ಚಾಂಪಿಯನ್ಸ್ ಟ್ರೋಫಿ ನಡೆಯುತ್ತಿದ್ದ ಕಾರಣ ಆನೇಕ ಆಟಗಾರರರು ತಮ್ಮ ಫ್ರಾಂಚೈಸಿಗಳನ್ನು ಸೇರಲು ಸಾಧ್ಯವಾಗಿರಲಿಲ್ಲ. ಈಗ ಎಲ್ಲಾ ಆಟಗಾರರು ತಮ್ಮ ತಮ್ಮ ಫ್ರಾಂಚೈಸಿಗಳನ್ನು ಸೇರಿಕೊಂಡು ಐಪಿಎಲ್ 2025ರ ಟೂರ್ನಿಗೆ ತಯಾರಿ ಪ್ರಾರಂಭಿಸಲಿದ್ದಾರೆ. ಇದರ ಮಧ್ಯೆ ಇಂಗ್ಲೆಂಡ್ ತಂಡದ ಸ್ಟಾರ್ ಬ್ಯಾಟರ್ ಹ್ಯಾರಿ ಬ್ರೂಕ್ ಮತ್ತೊಮ್ಮೆ ಐಪಿಎಲ್‌ನಿಂದ ತಮ್ಮ ಹೆಸರನ್ನು ಹಿಂತೆಗೆದುಕೊಂಡಿದ್ದಾರೆ.

ಹ್ಯಾರಿ ಬ್ರೂಕ್ ಐಪಿಎಲ್ ಟೂರ್ನಿ ಆರಂಭಕ್ಕೂ ಮುನ್ನ ತಮ್ಮ ಹೆಸರನ್ನು ಹಿಂತೆಗೆದುಕೊಂಡಿರುವುದು ಇದೇ ಮೊದಲಲ್ಲ. ಹೀಗಾಗಿ ಬ್ರೂಕ್ ಅವರಿಗೆ ಎರಡು ವರ್ಷಗಳ ಕಾಲ ಐಪಿಎಲ್ ಆಡದಂತೆ ನಿಷೇಧ ಹೇರಲಾಗಿದೆ. ಐಪಿಎಲ್‌ನಲ್ಲಿ ಬ್ರೂಕ್ ಆಡದಂತೆ ನಿಷೇಧ ಹೇರಲು ಕಾರಣವೇನು? ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ.

What is the reason for Harry Brook being banned from the IPL for two years

ಫ್ರಾಂಚೈಸಿಗಳಿಗೆ ಪರಿಹಾರ

ವಿದೇಶಿ ಆಟಗಾರರು ಐಪಿಎಲ್ ಹರಾಜಿನಲ್ಲಿ ತಮ್ಮ ಹೆಸರುಗಳನ್ಬು ನೋದಾಯಿಸಿಕೊಳ್ಳುವುದು ಸಾಮಾನ್ಯವಾಗಿರುತ್ತದೆ. ಆದರೆ ಆವರು ಆಡಲು ಬರುವಾಗ ನೆಪಗಳನ್ನು ಹೇಳಿ ತಮ್ಮ ಹೆಸರುಗಳನ್ನು ಹಿಂತೆಗೆದುಕೊಳ್ಳುತ್ತಾರೆ. ಇಂತಹ ಸಂದರ್ಭದಲ್ಲಿ ಫ್ರಾಂಚೈಸಿಗಳು ದೊಡ್ಡ ಹಿನ್ನಡೆ ಎದುರಿಸುತ್ತವೆ. ಫ್ರಾಂಚೈಸಿಗಳು ಸಾಕಷ್ಟು ತಂತ್ರಗಾರಿಗೆಯೊಂದಿಗೆ ಹರಾಜಿನಲ್ಲಿ ಆಟಗಾರರನ್ನು ಖರೀದಿಸಿರುತ್ತವೆ. ಲೀಗ್ ಆರಂಭ್ಕ ಮುನ್ನ ಮೊದಲಿ ಆಟಗಾರನೊಬ್ಬ ತನ್ನ ಹೆಸರನ್ನು ಹಿಂತೆಗೆದುಕೊಂಡಾಗ, ಫ್ರಾಂಚೈಸಿಯ ಎಲ್ಲಾ ತಂತ್ರಗಳು ಹಾಳಾಗುತ್ತವೆ. ಹೀಗಾಗಿ ಆಟಗಾರರ ಮೇಲೆ ನಿಷೇಧ ಹೇರಲು ಪ್ರಾರಂಭಿಸಿದರೆ, ಎಲ್ಲಾ ಫ್ರಾಂಚೈಸಿಗಳು ನಿರಾಳವಾಗುತ್ತವೆ.

ಆಟಗಾರರಿಗೆ ಸಂದೇಶ

ಐಪಿಎಲ್ ಆರಂಭಕ್ಕೂ ಮುನ್ನ ಫ್ರಾಂಚೈಸಿಗೆ ಇದ್ದಕ್ಕಿದ್ದಂತೆ ಅಂತಹ ಆಘಾತವನ್ನು ನೀಡುವ ಮೂಲಕ ಆಟಗಾರರು ಸುಲಭವಾಗಿ ತಪ್ಪಿಸಿಕೊಳ್ಳುತ್ತಾರೆ. ಆದರೆ, ಇದು ಫ್ರಾಂಚೈಸಿಯ ಮೇಲೆ ಪರಿಣಾಮ ಬೀರುತ್ತದೆ. ಬ್ರೂಕ್ ಅವರನ್ನು ನಿಷೇಧಿಸಿದರೆ ಅದು ಇತರ ಆಟಗಾರರಿಗೆ ಬಲವಾದ ಸಂದೇಶವನ್ನು ರವಾನಿಸುತ್ತದೆ. ಭವಿಷ್ಯದಲ್ಲಿ ಯಾವುದ ಆಟಗಾರರಿಗೆ ಬಲವಾದ ಸಂದೇಶವನ್ನು ನೀಡುತ್ತದೆ. ಭವಿಷ್ಯದಲ್ಲಿ ಯಾವುದೇ ಆಟಗಾರನು ಈ ರೀತಿ ತನ್ನ ಹೆಸರನ್ನು ಹಿಂತೆಗೆದುಕೊಳ್ಳುವ ಮೊದಲು ಹಲವು ಬಾರಿ ಯೋಚಿಸುತ್ತಾನೆ. ಈಗ ಬ್ರೂಕ್ ಅವರನ್ನು ನಿಷೇಧಿಸುವ ಮೂಲಕ ಆಟಗಾರರಿಗೆ ಸಂದೇಶ ತಲುಪಿದೆ.

ನಿಯಮ ಪಾಲನೆ

ಆಟಗಾರರು ಹಠಾತ್ ತಮ್ಮ ಹೆಸರನ್ನ ಹಿಂತೆಗೆದುಕೊಳ್ಳುವುದರಿಂದ ಎಲ್ಲಾ ಫ್ರಾಂಚೈಸಿಗಳು ಸಾಕಷ್ಟು ಚಿಂತಿತರಾಗಿದ್ದರು. ಈ ಬಗ್ಗೆ ಫ್ರಾಂಚೈಸಿಗಳು ಬಿಸಿಸಿಐ ಜೊತೆ ಚರ್ಚಿಸಿದರು. ಹೀಗಾಗಿ ಐಪಿಎಲ್ 2025ರ ಮೆಗಾ ಹರಾಜಿಗೂ ಮುನ್ನ ಒಂದು ದೊಡ್ಡ ನಿಯಮವನ್ನು ಬಿಸಿಸಿಐ ಮಾಡಿತು. ಅದರಲ್ಲಿ ಯಾವುದೇ ಆಟಗಾರನು ಗಾಯ ಅಥವಾ ಆರೋಗ್ಯ ಸಮಸ್ಯೆಗಳನ್ನು ಹೊರತುಪಡಿಸಿ ಯಾವದೇ ಕಾರಣಕ್ಕೂ ಹರಾಜಿನಲ್ಲಿ ಮಾರಾಟವಾದ ನಂತರ ತನ್ನ ಹೆಸರನ್ನು ಹಿಂತೆಗೆದುಕೊಂಡರೆ ಎರಡು ವರ್ಷಗಳ ಕಾಲ ನಿಷೇಧಿಸಲಾಗುವುದು ಎಂದು ನಿಯಮ ಮಾಡಲಾಯಿತು. ಇದೀಗ ಬಿಸಿಸಿಐ ಈ ನಿಯಮವನ್ನು ಜಾರಿಗೆ ತರಲಾಗಿದೆ.

Story first published: Tuesday, March 11, 2025, 15:39 [IST]
Other articles published on Mar 11, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+