For Quick Alerts
ALLOW NOTIFICATIONS  
For Daily Alerts
 

Mithali Raj: ಲೇಡಿ ತೆಂಡೂಲ್ಕರ್ ಮದುವೆಯಾಗದಿರಲು ಕಾರಣವೇನು?

ಭಾರತ ಮಹಿಳಾ ಕ್ರಿಕೆಟ್ ತಂಡದ ಮಾಜಿ ನಾಯಕಿ ಮಿಥಾಲಿ ರಾಜ್ ಅವರು ತಮ್ಮ 42ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಲೇಡಿ ತೆಂಡೂಲ್ಕರ್ ಎಂದು ಕರೆಸಿಕೊಳ್ಳುವ ಮಿಥಾಲಿ ರಾಜ್ ಅವರು ಸುಮಾರು 23 ವರ್ಷಗಳ ಕಾಲ ಭಾರತ ಮಹಿಳಾ ತಂಡದ ಪರ ಆಡಿ ಮಿಂಚಿದ್ದಾರೆ. ಮಿಥಾಲಿ ರಾಜ್ ಅವರ ವೃತ್ತಿಜೀವನದ ಬಗ್ಗೆ ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ, ಅವರ ಮೈದಾನದ ಹೊರಗಿನ ಜೀವನದ ಬಗ್ಗೆ ಕೆಲವು ಕುತೂಹಲ ಸಂಗತಿಗಳಿವೆ. ಅದರಲ್ಲಿ ಭಾರತೀಯ ಕ್ರಿಕೆಟ್ ಅಭಿಮಾನಿಗಳನ್ನು ಕಾಡುವ ಒಂದು ವಿಚಾರ ಎಂದರೆ ಮಿಥಾಲಿ ರಾಜ್ ಮದುವೆ.

ಕೆಲ ತಿಂಗಳ ಹಿಂದೆ ಮಿಥಾಲಿ ರಾಜ್ ಟೀಮ್ ಇಂಡಿಯಾ ಮಾಜಿ ಆರಂಭಿಕ ಬ್ಯಾಟರ್ ಶಿಖರ್ ಧವನ್ ಅವರೊಂದಿಗೆ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಈ ವೇಳೆ ವಿಶೇಷ ಕಾರ್ಯಕ್ರಮವೊಂದರಲ್ಲಿ ಶಿಖರ್‌ ಧವನ್ ಅವರು ಮದುವೆ ವಿಚಾರವಾಗಿ‌ ಮಾತನಾಡಿದ್ದರು. ನಾನು ಮಿಥಾಲಿ ರಾಜ್ ಅವರನ್ನು ಮದುವೆಯಾಗಲಿದ್ದೇನೆ ಎಂದು ಕೇಳಿದ್ದೆ. ಆದರೆ ಇದೆಲ್ಲವೂ ಕೇವಲ ಒಂದು ರೂಮರ್ಸ್ ಎಂದು ಧವನ್‌ ಸ್ಪಷ್ಟಪಡಿಸಿದ್ದರು. ಈ ಕಾರ್ಯಕ್ರಮದಲ್ಲಿ ಶಿಖರ್ ಧವನ್ ಜೊತೆಗೆ ಮಿಥಾಲಿ ರಾಜ್ ಕೂಡ ಭಾಗವಹಿಸಿದ್ದರು. ಧವನ್‌ ಹೇಳಿದ್ದನು ಕೇಳಿದ ಮಿಥಾಲಿ ರಾಜ್ ಜೋರಾಗಿ ನಕ್ಕು ಸುಮ್ಮನಾಗಿದ್ದರು. ಇದೀಗ ಮಿಥಾಲಿ ರಾಜ್ ಹುಟ್ಟುಹಬ್ಬದಂದು ಅವರು ಇನ್ನೂ ಯಾಕೆ ಮದುವೆಯಾಗಿಲ್ಲ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ.

What is the Reason Mithali Raj Has Not Gotten Married

ರಣವೀರ್ ಅಲಹಬಾಡಿಯಾ ಅವರ ಪಾಡ್‌ಕಾಸ್ಟ್‌ ಸಂದರ್ಶನದಲ್ಲಿ ಮಿಥಾಲಿ ರಾಜ್ ತಾನು ಏಕೆ ಮದುವೆಯಾಗಲಿಲ್ಲ ಎಂಬುದರ ಬಗ್ಗೆ ತಿಳಿಸಿದ್ದಾರೆ. ಅವರು ಭಾರತ ತಂಡವನ್ನು ನಾಯಕಿಯಾಗಿ ಮುನ್ನಡೆಸುತ್ತಿರುವಾಗ ಬಂದ ಮದುವೆ ಪ್ರಸ್ತಾಪದ ವೇಳೆ ನಡೆದ ಸಂಭಾಷಣೆಯನ್ನು ನೆನಪಿಸಿಕೊಂಡಿದ್ದಾರೆ. ಈ ಮೂಲಕ ಲೇಡಿ ತೆಂಡೂಲ್ಕರ್ ಮದುವೆಯಾಗದಿರಲು ಕಾರಣವೇನು? ಎಂಬುದನ್ನು ಭಾರತೀಯ ಕ್ರಿಕೆಟ್ ಅಭಿಮಾನಿಗಳು ತಿಳಿದುಕೊಂಡಿದ್ದಾರೆ.

'ನನಗೆ ಒಂದು ದಿನ ನನಗೆ ನನ್ನ ಚಿಕ್ಕಮ್ಮ ಫೋನ್ ಕರೆ ಬಂದಿತ್ತು. ಮೊದಲು ನನ್ನ ಯೋಗಕ್ಷೇಮವನ್ನು ವಿಚಾರಿಸಿದ ನಂತರ, ಅವರು ಮದುವೆಯ ನಂತರದ ಜೀವನದ ಬಗ್ಗೆ ಪ್ರಶ್ನೆಗಳನ್ನು ಕೇಳಲು ಪ್ರಾರಂಭಿಸಿದರು. ಆದರೆ ನಾನು ಮದುವೆಯ ಬಗ್ಗೆ ಯೋಚಿಸಿರಲಿಲ್ಲ. ಏಕೆಂದರೆ ಕೇವಲ ನಾನು ಕ್ರಿಕೆಟ್ ಬಗ್ಗೆ ಮಾತ್ರ ಯೋಚಿಸುತ್ತಿದ್ದೆ. ಭಾರತಕ್ಕಾಗಿ ಆಡುವುದು, ವರ್ಕ್‌ಔಟ್ ಮಾಡುವುದು ಸೇರಿದಂತೆ ಹಲವು ವಿಚಾರಗಳು ನನ್ನ ಮನಸ್ಸಿನಲ್ಲಿದ್ದವು. ಹೀಗಾಗಿ ನಾನು ನನ್ನ ಮದುವೆ ಬಗ್ಗೆ ಎಂದಿಗೂ ಯೋಚಿಸಿರಲಿಲ್ಲ. ಈ ಸಂದರ್ಭದಲ್ಲಿ ಅವರು ಒಂದು ಮಾತು ಹೇಳಿದರು, ನೀನು ಮದುವೆಯಾದ ನಂತರ ಮಕ್ಕಳನ್ನು ನೋಡಿಕೊಳ್ಳಬೇಕು. ಇದಕ್ಕಾಗಿ ನೀನು ಕ್ರಿಕೆಟ್ ಆಟವನ್ನು ಬಿಡಬೇಕು ಎಂದರು. ಈ ಸಂದರ್ಭದಲ್ಲಿ ಚಿಕ್ಕಮ್ಮ ಹೇಳಿದ ಮಾತುಗಳಿಂದ ನನಗೆ ಆಶ್ಚರ್ಯವಾಯಿತು. ಆದರೆ, ನನಗೆ ಮದುವೆಯಾಗುವುದಕ್ಕೆ ಕ್ರಿಕೆಟ್ ಆಡ ಬಿಡುವುದು ಸೂಕ್ತವಲ್ಲವೆನಿಸಿತು. ಅದಕ್ಕಾಗಿ ನಾನು ಮದುವೆಯಾಗುವ ಧೈರ್ಯವನ್ನು ಮಾಡಲಿಲ್ಲ' ಎಂದು ಮಿಥಾಲಿ ರಾಜ್ ಹೇಳಿದ್ದಾರೆ.

Story first published: Tuesday, December 3, 2024, 13:06 [IST]
Other articles published on Dec 3, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+